
ಹುಬ್ಬಳ್ಳಿ,ಮೇ.17: ಶ್ರೀ ಹುಲಿಗೆಮ್ಮಾದೇವಿಯವರ ಜಾತ್ರಾಮಹೋತ್ಸವವು ಹಾಗೂ ಶ್ರೀ ಸಂತ ಜ್ಞಾನೇಶ್ವರಿ ಗ್ರಂಥ ಸಾಮೂಹಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ವಿಜೃಂಭಣೆಯಿಂದ ಸಮಾರೋಪಗೊಂಡಿತು. ಶ್ರೀ ಹ.ಭ.ಪ ಮಹಾರಾಜರುಗಳಾದ ಶ್ರೀ ಹನಮಂತಪ್ಪ ಹೈಭತ್ತಿ. ಶ್ರೀ ಮಹಾದೇವ ಸುಲಾಖೆ, ಶ್ರಿ ಗಣೇಶ ಪಾರಕನವರ ಇನ್ನೀತರರು ಪಾರಾಯಣ ಪ್ರವಚನ, ಕೀರ್ತನೆ, ಭಜನೆ ನಡೆಸಿ ಕೊಟ್ಟರು.
ಉದಯಪೂಜೆ ನಂತರ ಉತ್ಸವಮೂರ್ತಿ ಮೆರವಣಿಗೆಯು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಪುನಃ ಮೂಲ ದೇವಸ್ಥಾನಕ್ಕೆ ಮರಳಿದ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.
ಸಮಾರೋಪ ಸಮಾರಂಭವನ್ನು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ವಿ.ಎಸ್.ವಿ. ಪ್ರಸಾದರವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಧರ್ಮಕ್ಕಿಂತ ದೊಡ್ಡದು ಯಾವುದು ಇಲ್ಲ ಧರ್ಮದ ನೆರಳಿನಲ್ಲಿರುವುದೇ ನಮ್ಮ ಅತೀ ದೊಡ್ಡ ಗೆಲವು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಅರವಿಂದ ಯಾಳಗಿರವರು ಮಾತನಾಡಿ ಜಾತಿ-ಧರ್ಮಗಳ ಭೇದವಿಲ್ಲದ ಈ ದೇವಸ್ಥಾನ ಸರ್ವಜನಾಂಗದ ಶ್ರದ್ಧಾ ಕೇಂದ್ರವಾಗಿದ್ದು, ಇಲ್ಲಿ ಮಾತೋಶ್ರೀ ಅಮ್ಮನವರ ನೇತೃತ್ವದಲ್ಲಿ ಇಷ್ಟೊಂದು ತಾಯಂದಿರ ಉಪಸ್ಥಿತಿಯಲ್ಲಿ ವರ್ಷಪೂರ್ತಿ ಧಾರ್ಮಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನೆರವೇರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಪ್ರೋ ಆರ್. ನಟರಾಜ ಮಾತನಾಡಿ ಸಮ್ಮ ಸನಾತನ ಸಂಸ್ಸøತಿಯನ್ನು ಉಳಿಸಿ-ಬೆಳಸುವುದು ಪ್ರತಿಯೊಬ್ಬ ಹಿಂದುವಿನ ಆದ್ಯ ಕರ್ತವ್ಯವಾಗಿದ್ದು, ಧರ್ಮದ ರಕ್ಷಣೆ ಮಾಡುವ ಮೂಲಕ ನಾವೆಲ್ಲರೂ ನಮ್ಮ ಜನ್ಮವನ್ನು ಸಾರ್ಥಕಗೊಳಿಸೋಣ ಎಂದು ಹೇಳಿದರು.
.ಮಾತೋಶ್ರೀ ಅಮ್ಮನವರು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಶ್ರೀಮತಿ ಆಶಾ ನಟರಾಜ, ಶಿವಾಜಿ ಗಾಂವಕರ, ತೋಟಪ್ಪಾ ನಿಡಗುಂದಿ, ಮಹೇಶ ದಾಬಡೆ, ರಾಜಶ್ರೀ ಜಡಿ, ಅಶೋಕ ವಾಲ್ಮೀಕಿ, ಗುರು ಬನ್ನಿಕೊಪ್ಪ ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಸೇರಿ ದಂತೆ ನೂರಾರು ಜನ ಸದ್ಭಕ್ತರು ಉಪಸ್ಥಿತರಿದ್ದರು. ಕೊನೆಗೆ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.