ಜಾತ್ರಾ ಮಹೋತ್ಸವ: ಶಿವ ಕೀರ್ತನೆ ಸಂಗೀತ ಕಾರ್ಯಕ್ರಮ

ಬೀದರ್,ಫೆ.20-ಜಿಲ್ಲೆಯ ಔರಾದ ತಾಲೂಕಿನ ಸುಕ್ಷೇತ್ರ ಧರಿ ಹನುಮಾನ ಲಾಧ ಕ್ಷೇತ್ರದಲ್ಲಿ ಗುರುದೇವ ದತ್ತ ದಿಗಂಬರ ಹನುಮಾನ ಮಾಣಿಕ್ಯೇಶ್ವರ ಮಹಾ ಶಿವಯೋಗಿಗಳು 44ನೇ ಜಾತ್ರಾ ಮಹೋತ್ಸವ ಅಂಗವಾಗಿ ಶಿವ ಕೀರ್ತನೆ ಹಾಗೂ ಸಂಗೀತ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಜರುಗಿತು. ಶಿವ ಕೀರ್ತನೆ ನಡೆಸಿಕೊಟ್ಟ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಸ್ವಾಮೀಜಿ ದತ್ತ ದಿಗಂಬರ ಮಾಣಿಕ್ಯೇಶ್ವರ ಮಹಾ ಶಿವಯೋಗಿಗಳು ಪರಶಿವನ ಪರಮ ಅವತಾರಗಳು ಕಷ್ಟ ಎಂದು ಬರುವ ಭಕ್ತರು ಬದುಕನ್ನು ಬದಲಿಸಿದ 20ನೇ ಶತಮಾನದ ಮಹಿಮಾ ಪುರುಷ ಎಂದರು ಇದೇ ಸಂದರ್ಭದಲ್ಲಿ ಶ್ರೀಶೈಲ ಕೊಂಡೇದ ಹಾಗೂ ಸೋಮಶೇಖರ ಕಲ್ಯಾಣಿ ಅವರಿಂದ ಸಂಗೀತ ಜರುಗಿತು
ಅಧ್ಯಕ್ಷರಾದ ಬಸವರಾಜ ಮಾನುರೆ, ಮುತ್ಯಾವರ ವಂಶದವರಾದ ವಿಜಯಕುಮಾರ ಪಾಟೀಲ ಯರನಳ್ಳಿ, ಜಾತ್ರೆ ಮಹೋತ್ಸವದ ದಾಸೋಹ ದಾನಿಗಳಾದ ಪ್ರಕಾಶ ಮರತುಳ್ಳೆ, ಭಜನಾ ಮಂಡಳಿಯ ಸಂಚಾಲಕರಾದ ಬೋಜರಡ್ಡಿ, ಶರಣಯ್ಯ ಸ್ವಾಮಿ, ಚಂದ್ರಕಾಂತ ದೇಶಮುಖ, ಸುನೀಲ ಮಾನುರೆ. ಸಂತೋಷ ಮಾನುರೆ ಹಾಗೂ ದತ್ತ ದಿಗಂಬರ ಮಾಣಿಕ್ಯೇಶ್ವರ ಮಹಾ ಶಿವಯೋಗಿಗಳು ಅನೇಕ ಭಕ್ತರು ಆಗಮಿ ಶಿವ ಕೀರ್ತನೆ ಆಲಿಸಿದರು.