ಜಾತ್ರಾ ಮಹೋತ್ಸವ-ಪೂರ್ವಭಾವಿ ಸಭೆ

ಲಕ್ಷ್ಮೇಶ್ವರ,ಜು18: ತಾಲೂಕಿನ ಗುಲಗಂಜಿ ಕೊಪ್ಪ ಗ್ರಾಮದ ಶ್ರೀ ದುಂಡಿ ಬಸವೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು.
ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ತುರುವೇಕೆರೆಯ ನೊಣವಿನ ಕೇರಿಯ ಕರಿಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ ಶ್ರಾವಣ ಮಾಸದ ಅಂದರೆ ಆಗಸ್ಟ್ 21 22 ರಂದು ದುಂಡಿಬಸವೇಶ್ವರ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಆಗಸ್ಟ್ 21ರಂದು ಸುಮಾರು 45 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಬಸವೇಶ್ವರ ಕವಚದ ಭವ್ಯವಾದ ಮೆರವಣಿಗೆ ಶ್ರೀ ಸೋಮೇಶ್ವರ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಕ್ತಿಮಂದಿರ ಮಾರ್ಗವಾಗಿ ಗುಲ್ಗಂಜಿ ಕೊಪ್ಪ ಗ್ರಾಮವನ್ನು ತಲುಪಲಿದೆ ನಂತರ, 11 ದಂಪತಿಗಳಿಂದ ಹೋಮದ ಕಾರ್ಯಕ್ರಮ ಸೇರಿದಂತೆ ಅನೇಕ ಧಾರ್ಮಿಕ ಚಟುವಟಿಕೆಗಳು ಜರುಗಲಿವೆ ಈ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಿನಿಂದ ನಿರ್ವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಆಗಸ್ಟ್ 22ರಂದು ಜಾತ್ರಾ ಮಹೋತ್ಸವ ಜರುಗಲಿದ್ದು ಅನೇಕ ಹರು-ಗರು ಚರ ಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ನಂತರ ಧರ್ಮಸಭೆ ಜರಗಲಿದೆ ಎಂದರು.
ಮಾಜಿ ಶಾಸಕರಾದ ಗಂಗಣ್ಣ ಮಹಾಂತ ಶೆಟ್ಟರ ಜಿಎಸ್ ಗಡ್ಡದೇವರಮಠ ಅವರುಗಳು ಭಾಗವಹಿಸಿ ಲಕ್ಷ್ಮೇಶ್ವರ ಮತ್ತು ಗುಲಗಂಜಿ ಕೊಪ್ಪದ ಜನತೆ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದು ಹೇಳಿದರಲ್ಲವೇ ಶ್ರೀ ಕ್ಷೇತ್ರದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎರಡು ದಿನ ಭಕ್ತಾದಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ಕರಿವಾಡಿ ಮಠದ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು ಮಾಜಿ ಸಂಸದ ಮಂಜುನಾಥ್ ಕುನ್ನೂರ ಶ್ರೀ ದುಂಡಿ ಬಸವೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿಯ ಬಸಣ್ಣ ಕೂಟಗಿ ಬಸವರಾಜ್ ಬೆಂಡಿಗೇರಿ ಸೇರಿದಂತೆ ಬಸಾಪುರ ಗುಲಗಂಜಿ ಕೊಪ್ಪ ಹಾಗೂ ದೇವಸ್ಥಾನದ ಭಕ್ತ ಸಮೂಹ ಸಭೆಯಲ್ಲಿ ಪಾಲ್ಗೊಂಡಿದ್ದರು.
ಶಿವಣ್ಣ ಕಟಗಿ ಕಾರ್ಯಕ್ರಮ ನಿರ್ವಹಿಸಿದರು.