ಜಾತ್ಯಾತೀತ ಸಮಾಜವಾದಿ ಪ್ರಜಾಪ್ರಭುತ್ವದಲ್ಲಿ ಅಂಬೇಡ್ಕರರು ಅಚಲ ವಿಶ್ವಾಸ ಹೊಂದಿದ್ದರು

ಆಳಂದ:ಡಿ.7:ಸ್ವಾತಂತ್ಯ ಸಮಾನತೆ ಮತ್ತು ಭ್ರಾತೃತ್ವ ಸ್ಥಾಪನೆಗಾಗಿ ಹೋರಾಡಿದ ಡಾ. ಅಂಬೇಡ್ಕರ ಅವರು ಜಾತ್ಯಾತೀತ ಸಮಾಜವಾದಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಹೊಂದಿದರು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ. ರಾಕೇಶ ಚವ್ಹಾಣ ಅವರು ಹೇಳಿದರು.

ಸೋಮುವಾರ ಧಂಗಾಪುರ ಗ್ರಾಮದ ಇಂದಿರಾ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ 66ನೇ ಮಹಾ ಪರಿನಿರ್ವಾಹಣಾ ದಿನಚರಣೆಯಲ್ಲಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಅಸಮಾನತೆಯ ಸಮಾಜದಲ್ಲಿ ಜಾತಿ ವ್ಯವಸ್ತೆಯಲ್ಲಿ ನೋಂದವರಿಗೆ ದಾರಿ ದೀಪವಾಗಿ ಬೆಳಗಿದ ಅವರು ನಮ್ಮನ್ನು ಅಗಲಿ 65 ವಸಂತಗಳು ಕಳೆದಿವೆ. ಅವರ ಚಿಂತನೆಗಳು ಬರಹಗಳು ಭಾಷಣಗಳೂ ಇಂದಿಗೂ ನಮ್ಮ ಎಲ್ಲರ ಕೈ ದೀವಿಗೆ ಆಗಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳಾದ ಸಂಗೀತ ಪೂಜಾರಿ, ಆದಿತ್ಯಾ ತೇಲ್ಕರ್ ಮಾತನಾಡಿದರು.

ಇಂದಿರಾ ಸ್ಮಾರಕ ಸೇವಾ ಶಿಕ್ಷಣ ಸೇವಾ ಸಂಸ್ತೆಯ ಅಧ್ಯಕ್ಷ ಶಿವಲಿಂಗ ಎಸ್. ತೇಲ್ಕರ ಸಭೆಯ ಅಧ್ಯಕ್ಷತೆ ವಹಿಸಿದರು. ಮುಖಂಡ ಆಲೂಗೌಡ ಪಾಟೀಲ್, ಮುಖ್ಯ ಶಿಕ್ಷಕಿ ಅಂಬಿಕಾ ಎಸ್.ಅಷ್ಠಗಿ, ಸಹ ಶಿಕ್ಷಕರಾದ ಪುತಳಾಬಾಯಿ ಜಮಾದಾರ, ನಾಗಮ್ಮ ಬಟ್ಟರಗಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇಣುಬಾಯಿ ನಿಂಬೆಣಿ ಕಾರ್ಯಕ್ರಮ ನಿರೂಪಿಸಿದರು. ಬಾಬು ಆಳಂದ ಸ್ವಾಗತ ಕೋರಿದರು. ತಂಗೆಮ್ಮ ನಿಂಬರ್ಗಾ ವಂದಿಸಿದರು. ಕಾರ್ಯಕ್ರಮದ ಮೊದಲಿಗೆ ಮಹಾ ನಾಯಕ ಗೌರವರ್ಥÀವಾಗಿ ಮೌನ ಆಚರಣೆ ಮಾಡಲಾಯಿತು.