ಜಾತ್ಯಾತೀತ ವ್ಯಕ್ತಿತ್ವ ಹೊಂದಿದ ರಾಜಶೇಖರ್ ಗೆ ಸಿಕ್ಕ ಜಿಲ್ಲಾಧ್ಯಕ್ಷ ಪಟ್ಟ: ಬಾಡದ ಆನಂದರಾಜು ಸ್ವಾಗತ

ಸಂಜೆವಾಣಿ ವಾರ್ತೆ

ದಾವಣಗೆರೆ: ಜ.೧೬;- ಎಳ್ಳು, ಬೆಲ್ಲ ತಿಂದು ಒಂದು ಒಳ್ಳೆ ಮಾತಾಡುವ ಸಮಯ ಮಕರ ಸಂಕ್ರಾಂತಿ ವಿಶೇಷ, ಈ ಹಬ್ಬದ ಮುನ್ನವೇ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದ ಪಟ್ಟವನ್ನು ಊಯಿಸಲಾಗದಂತೆ ಪ್ರಕಟಿಸಿ ಜಾತ್ಯಾತೀತ ನಿಲುವು ಹೊಂದಿದ ಪ್ರಾಮಾಣಿಕ ಕಾರ್ಯಕರ್ತ, ಪಕ್ಷದ ನಿಷ್ಠಾವಂತ  ರಾಜಶೇಖರ್ ನಾಗಪ್ಪ ಅವರಿಗೆ ನೀಡಿರುವುದು ಶೋಷಿತ ವರ್ಗಗಳ ಮುಖಂಡರಾದ ಬಾಡದ ಆನಂದರಾಜು ಸ್ವಾಗತ ಮಾಡಿದ್ದಾರೆ. ನೂತನ ಅಧ್ಯಕ್ಷರಾದ ರಾಜಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಿ ಈ ವಿಷಯ ತಿಳಿಸಿದರು. ಪಕ್ಷದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರನ್ನು ಹಾಗೂ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನ ಗುರುತಿಸುವ ಪಕ್ಷ ಎಂದರೆ ಅದು ಬಿಜೆಪಿ, ಸಂಸದರಾದ ಜಿ. ಎಂ ಸಿದ್ದೇಶ್ವರ ಹಾಗೂ ಹಾಲಿ,ಮಾಜಿ ಶಾಸಕರು ಯುವನಾಯಕ ರಾಜಶೇಖರ್ ಅವರಿಗೆ  ಜವಾಬ್ದಾರಿ ಕೊಡಿಸುವ ಮೂಲಕ ದೊಡ್ಡತನ ತೋರಿಸಿದ್ದು, ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಸಿಗುತ್ತದೆ ಎಂಬುದನ್ನ ಸಾಬೀತು ಮಾಡಿದ್ದಾರೆ ಎಂದರು. ಸಂಘ ಪರಿವಾರ, ವಿದ್ಯಾರ್ಥಿ ಪರಿಷತ್ ನಿಂದ ಬಾವುಟ ಹಿಡಿದು ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸಿದ ವ್ಯಕ್ತಿ ರಾಜಶೇಖರ್ ಅವರು, ಪಕ್ಷದ ವಕ್ತಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಸೂಕ್ಷ್ಮವಾಗಿ ಎಲ್ಲಾ ನಿಭಾಹಿಸಿಕೊಂಡು ಹೋಗವಂತ ವ್ಯಕ್ತಿ. ಇದೀಗ ಪಕ್ಷ ಇವರಿಗೆ ನೀಡಿರುವ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಎಂದರು. ಯುವ ನಾಯಕನಿಗೆ ದೊಡ್ಡ ಜವಾಬ್ದಾರಿ ನೀಡಿದ್ದು ಲೋಕಸಭಾ ಚುನಾವಣೆಯಲ್ಲಿ ಯುವಕರು ಹಾಗೂ ಸಾಮಾನ್ಯ ಕಾರ್ಯಕರ್ತರು ಕೆಲಸ ಮಾಡಲು ಮತ್ತಷ್ಟು ಉತ್ಸಾಹ ತಂದಂತಾಗಿದೆ ಎಂದು ಬಾಡದ ಆನಂದರಾಜು ಅವರು ತಿಳಿಸಿದರು. ರಾಜಶೇಖರ್ ಅವರು ಪ್ರಾಮಾಣಿಕತೆ, ಪಕ್ಷ ನಿಷ್ಠೆಗೆ ಸಿಕ್ಕ ಗೌರವವಾಗಿದ್ದು, ಅವರಿಗೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಅವರ ಜೊತೆ ಸದಾ ಇರುತ್ತೇವೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಮಹಾಪೌರರಾದ ಎಸ್‍ಟಿ ವಿರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ  ಲೋಕಿಕೆರೆ ನಾಗರಾಜ್, ಜಿಲ್ಲಾ ಉಪಾದ್ಯಕ್ಷ ಶ್ರೀನಿವಾಸ್ ದಾಸರ ಕೊರಚ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಜಿ.ಕೃಷ್ಣಪ್ಪ.ಉಪ್ಪಾರ ಸಮಾಜದ ಜಿಲ್ಲಾ ಮುಖಂಡ ಬಸವರಾಜ್.ಲಂಬಾಣಿ ಯುವ ಘಟಕದ ಜಿಲ್ಲಾಧ್ಯಕ್ಷ ಹಾಲೆಕಲ್ಲು ಚಂದ್ರನಾಯ್ಕ್.ಮಾಯಾಕೊಂಡ ಯುವ ಮುಖಂಡ ಕಬ್ಬೂರು ಶಿವರಾಜ್ ಅಣಬೇರು ನಂದಕುಮಾರ್. ಹಾಲೇಶ್ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.