ಜಾತ್ಯತೀತ ಸಮಾಜ ಕಟ್ಟುವ ಚೈತನ್ಯ ಶಕ್ತಿ ಶಿಕ್ಷಕರಿಗೆ ಇರಬೇಕು

ಸಂಜೆ ವಾಣಿ ವಾರ್ತೆ
ಕೊಟ್ಟೂರು 6: ಜಗಜ್ಯೋತಿ ಬಸವಣ್ಣನವರು ಲಿಂಗಪೂಜೆ ಮಾಡಿ  ಎಂದಿದ್ದು ಸಮಾಜದಲ್ಲಿನ ಮೌಡ್ಯತೆ ಅಸಮಾನತೆ ತೊಲಗಲಿ ಎಂದು ಆದ್ದರಿಂದ ಶಿಕ್ಷಕರು ಜಾತಿ ಸೂಚಕರಾಗದೆ ಜಾತ್ಯತೀತ ಸಮಾಜವನ್ನು ಕಟ್ಟುವ ಚೈತನ್ಯಯುಕ್ತ ಶಕ್ತಿಗಳಾಗಿ ಶಿಕ್ಷಕ ಎಂಬ ಪದದ ಮಹತ್ವವನ್ನು ಉಳಿಸಿಕೊಳ್ಳಬೇಕಿದೆ ಎಂದು ನಿವೃತ್ತ ಅಧ್ಯಾಪಕ ಪಿ.ಸಿ ಮಹಾಬಲೇಶಪ್ಪ ಹೇಳಿದರು.
ಭಾನುವಾರ ಪಟ್ಟಣದ ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ 133 ನೇ ಜಯಂತೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಶಿಕ್ಷಕರು ಭಾವನಾತ್ಮಕ ದೃಷ್ಟಿಯಿಂದ ನೋಡದೆ ಅನುಭವದ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದಾಗ ಮಾತ್ರ ಆ ಬೋಧನೆಗೆ ಶ್ರೇಯಸ್ಸು ಸಿಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ತಾಲೂಕು ಪಂಚಾಯಿತಿ ಇ.ಒ ತಿಮ್ಮಣ್ಣ ಹುಲ್ಲುಮನಿ ವೃತ್ತಿಯಿಂದ ನಿವೃತ್ತಿ ಹೊಂದಿದ ನಂತರ ಅದು ನಮ್ಮ ಕೊನೆಯ ಅಂತಲ್ಲ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಲು ಪದೋನ್ನತಿ ಪಡೆದಂತೆ ಎಂದು ಹೇಳಿದರು.
ಪ್ರಾಸ್ತವಿಕ ನುಡಿಗಳು ಶಿಕ್ಷಣ ಇಲಾಖೆಯ ಇಸಿಒ ಅಜ್ಜಪ್ಪ,  ನಿರೂಪಣೆ ಮನೋಹರ ಸ್ವಾಮಿ, ಸ್ವಾಗತ ಶಿಕ್ಷಕರ ಸಂಘದ ಅಧ್ಯಕ್ಷ ಅಣಜಿ ಸಿದ್ದಲಿಂಗಪ್ಪ, ವಂದನಾರ್ಪಣೆ ಸಿದ್ದಪ್ಪ ನಡೆಸಿಕೊಟ್ಟರು
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಕ್ಷ್ಮಣ್ ಸಿಂಗ್, ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗೇಶ್, ಪದವೀಧರ ಸಂಘದ ಅಧ್ಯಕ್ಷ ರವೀಂದ್ರ, ಸಿ.ಆರ್.ಪಿ ಮಂಜುನಾಥ,   ಶಿಕ್ಷಕರಾದ ಈಶ್ವರಪ್ಪ ತುರಕಾಣಿ, , ಮರಳನಗೌಡ, ಮುತ್ತೇಶ್, ಹನುಮಂತಪ್ಪ, ಶಶಿಕಲ, ಗಂಗಮ್ಮ ಬಸವರಾಜ್, ರವಿಕುಮಾರ್, ಮುಂತಾದವರು ಉಪಸ್ಥಿತರಿದ್ದರು.