ಜಾತಿ ವ್ಯವಸ್ಥೆ ತೊಡೆದು- ಸಮ ಸಮಾಜ ನಿರ್ಮಾತೃ- ಚುಕ್ಕಿ ಸೂಗಪ್ಪ

ದಾಸ ಶ್ರೇಷ್ಠ ಕನಕದಾಸ ಜಯಂತಿ ಸರಳವಾಗಿ ಆಚರಣೆ
ಸಿರವಾರ.ನ.22- ಜಾತಿ ವ್ಯವಸ್ಥೆಯ ವಿರುದ್ದ ಅನೇಕ ವರ್ಷಗಳ ಹಿಂದೆ ಭಾರತದಲ್ಲಿ ಜಾತಿ ಮತ ಪಂಥಗಳಾಚೆ ಸಮಾಜ ಕಟ್ಟಲು ಹೇಗೆ ಶ್ರಮಿಸಿದರು ಎಂಬ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ ಹೇಳಿದರು. ಪಟ್ಟಣದಲ್ಲಿ ಹಾಲುಮತ ಸಮಾಜದಿಂದ ಕನಕದಾಸ ವೃತ್ತದಲ್ಲಿ ಕನಕದಾಸ ಜಯಂತಿಯನ್ನು ನಾಮಪಲಕಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಿದ ನಂತರ ಮಾತನಾಡಿದ ಅವರು ದುನೂರು ವರ್ಷಗಳ ಹಿಂದೆಯೇ ’ಕುಲ ಕುಲ ಎಂದು ಹೊಡೆದಾಡದಿರಿ” ಎನ್ನುವ ಮೂಲಕ ಕನಕದಾಸರು ವರ್ಣಾಶ್ರಮ ವ್ಯವಸ್ಥೆ ಸೃಷ್ಟಿಸಿರುವ ಜಾತಿ ನರಕವನ್ನು ದಿಟ್ಟತನದಿಂದ ಪ್ರಶ್ನಿಸಿದ್ದರು. ಜಾತಿ ಪದ್ದತಿಯನ್ನು ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆಕೊಟ್ಟ ಸಂತ ಕನಕದಾಸರನ್ನು ಇಂದು ನೆನೆಯೋಣ. ಅವರ ತೋರಿದ ದಾರಿಯಲ್ಲಿ ಸಾಗೋಣ ಎಂದರು.
ವಾಣಿಜ್ಯೋದ್ಯಮಿ ಜೆಡಿಎಸ್ ಹಿರಿಯ ಮುಖಂಡ ಜಿ.ಲೋಕರೇಡ್ಡಿ ಮಾತನಾಡಿ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರಲ್ಲಿ ಕನಕದಾಸರು ಒಬ್ಬರು. ೧೫-೧೬ನೇ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಾಗಿದ್ದರು. ಇವರು ಆಧುನಿಕ ಕರ್ನಾಟಕದ ಕವಿ, ತತ್ವಜ್ಞಾನಿ, ಸಂಗೀತಗಾರ ಮತ್ತು ಸಂಯೋಜಕರಾಗಿದ್ದು, ಕೀರ್ತನೆ ಮತ್ತು ಉಗಾಭೋಗಕ್ಕೆ ಹೆಸರುವಾಸಿಯಾಗಿದ್ದಾರೆ. ಕೀರ್ತನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳವಾಗಿ ಕನ್ನಡ ಭಾಷೆಯಲ್ಲಿ ರಚಿಸಿ, ಎಲ್ಲಾ ಕಾಲಘಟ್ಟಕ್ಕೂ ಸಲ್ಲುವಂತೆ ಮಾಡಿದ್ದಾರೆ.
ಯಾವುದೇ ಒಂದು ಜಾತಿ, ಧರ್ಮ, ಪ್ರದೇಶ, ಭಾಷೆಗೆ ಸೀಮಿತವಾಗದ ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿದೆ. ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳ ಅವಶ್ಯಕತೆ ಇದೆ ಎಂದರು. ಪ.ಪಂ ಮಾಜಿ ಸದಸ್ಯ ಕೃಷ್ಣನಾಯಕ ಮಾತನಾಡಿದರು. ಹಾಲುಮತ ಸಮಾಜದ ತಾಲೂಕ ಅದ್ಯಕ್ಷ ಶಿವಗ್ಯಾನಿ, ರಮೇಶದರ್ಶನಕರ್, ಜೆ.ದೇವರಾಜಗೌಡ,ಮಲ್ಲಿಕಾರ್ಜುನ ಜಕ್ಕಲದಿನ್ನಿ,ಮಲ್ಲಪ್ಪ ಸಾಹುಕಾರ ಅರಕೇರಿ,ಈಶಪ್ಪಹೂಗಾರ,ಕಾಶಿನಾಥ ಸರೋದೆ, ಚಂದ್ರಶೇಖರಯ್ಯಸ್ವಾಮಿ, ನರಸಿಂಹರಾವ್ ಕುಲಕರ್ಣಿ, ಬಸವರಾಜಕಲ್ಲೂರು,ಬಸವರಾಜ ಗಡ್ಲ, ಎನ್.ಚಂದ್ರಶೇಖರ, ನಾಗಪ್ಪ ಪತ್ತಾರ,ಭೂಪನಗೌಡ, ಜಿ.ವಿರೇಶ,ಉಮಾಶಂಕರ ಜೇಗರಕಲ್, ಅಜೀತ್ ಹೊನ್ನಟಗಿ,ಚನ್ನಬಸವಚನ್ನೂರು,ಪಂಪಣ್ಣಸಾಹುಕಾರ, ಸೂರಿದುರುಗಣ್ಣನಾಯಕ, ನಾಗರಾಜಚಿನ್ನಾನ್,ಚನ್ನಪ್ಪನಾಗೋಲಿ,ಇರ್ಪಾನ್, ಹಸೇನ್‌ಅಲಿ,ಹೆಚ್.ಕೆ.ಅಮರೇಶ,ಹಾಜಿಚೌದ್ರಿ, ರಾಮಯ್ಯಬೈನೇರ್,ಮಲ್ಲಪ್ಪ, ಎಂ.ಪ್ರಕಾಶ, ಸವಾರೆಪ್ಪ, ಹನುಮಂತ ಬಡ್ಡ, ಮನೋಹರ್,ಹೆಚ್.ಕೆ ಅಮರೇಶ,ಬಸವರಾಜ ಕುಂಬಾರ, ಶರಣಪ್ಪಮರಾಟ, ವಲಿ ಸಾಬ್ ಗುತ್ತೆದಾರ, ಶ್ಮೀರಿ,ಚನ್ನಬಸವ,ಆಲ್ ಪ್ರೇಂಡ್ಸ್ ಅಂಬು,ಮುದುಕಪ್ಪ ,ಹೆಚ್.ಕೆ.ರಾಘವೇಂದ್ರ, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರ ಇದ್ದರು.