
ಬೀದರ:ಸೆ.13:ಗುರುವಿನ ಸ್ಥಾನವನ್ನು ಪಡೆಯಬೇಕಾದರೆ ವ್ಯಕ್ತಿಯು ಆತ್ಮಸಾಕ್ಷಾತ್ಕಾರವನ್ನು ಹೊಂದಬೇಕು. ಆತ್ಮಜ್ಞಾನವು ಹೊಂದುವುದು ನಿಜಜ್ಞಾನಿಯ ಲಕ್ಷಣ. ಶರಣರ ವಚನಗಳಲ್ಲಿ ಗುರುವಿನ ಮಹಿಮೆಯನ್ನು ಕಾಣಬಹದು. ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ. ಜಾತಿ, ಮತ, ಪಂಥವಿಲ್ಲದ ಪವಿತ್ರ ಸ್ಥಾನವೆಂದರೆ ಶಾಲಾ-ಕಾಲೇಜುಗಳು.
ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರನ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಪ.ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿಗಳು ಅಥಣಿ ಅವರು ಮಾತನಾಡಿದರು.
ಜ್ಞಾನವು ಅತ್ಯಂತ ಶ್ರೇಷ್ಠವಾದುದು ಅದನ್ನು ಪರಿಶ್ರಮದಿಂದ ಮಾತ್ರ ಸಾಧಿಸಬಹುದು ಜೊತೆಗೆ ಅದಕ್ಕೆ ಸಮಯಕ್ಕೆ ಸರಿಯಾಗಿ ಮಹತ್ವಕೊಟ್ಟು ಅದನ್ನು ಪಡೆಯಲು ಶ್ರಮಿಸಬೇಕು. ವಿದ್ಯೆ ಮತ್ತು ಅವಿದ್ಯೆಯ ವ್ಯತ್ಯಾಸವನ್ನು ತಿಳಿಸುತ್ತಾ ವಿದ್ಯೆಯ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿದ ಶ್ರೀ ಸಂಜುಕುಮಾರ ಮಾನೂರೆ, ವಿಷಯ ಪರಿವೀಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೀದರ ಅವರು ಮಾತನಾಡಿ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯ ಮೇಲೆ ಬೆಳಕು ಚೆಲ್ಲಿದರು. ಗುರುತರವಾದ ಜವಾಬ್ದಾರಿಯ ವೃತ್ತಿಯೆಂದರೆ ಶಿಕ್ಷಕರ ವೃತ್ತಿಯದಾಗಿದೆ. “ಖಿeಚಿಛಿhiಟಿg Pಡಿoಜಿessioಟಿ shouಟಜ be bಥಿ ಛಿhoiಛಿe buಣ ಟಿoಣ bಥಿ ಛಿhಚಿಟಿಛಿe” ಬದುಕಿನಲ್ಲಿ ಗುರಿಯ ಮಹತ್ವವನ್ನು ತಿಳಿಸಿದರು. ಹಣದ ಶ್ರೀಮಂತಿಕೆಗಿಂತ ಮಾನಸಿಕ ಶ್ರೀಮಂತಿಕೆಯು ಶ್ರೇಷ್ಠವಾದುದು. ಪ್ರತಿಯೊಬ್ಬರು ದೊಡ್ಡ ಗುರಿಯ ಜೊತೆಗೆ ಶ್ರೇಷ್ಠ ಕನಸನ್ನು ಕಾಣಲು ಸೂಚಿಸಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಸಿ. ಕನಕಟ್ಟೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಎಲ್ಲಾ ವೃತ್ತಿಗಳಲ್ಲಿಯೇ ಶ್ರೇಷ್ಠತರವಾದ ವೃತ್ತಿಯೆಂದರೆ ಅದು ಶಿಕ್ಷಕ ವೃತ್ತಿಯಾಗಿದೆ. ವೃತ್ತಿಯ ಜೊತೆಗೆ ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಂಡು ವೃತ್ತಿಯ ಬೆಳವಣಿಗೆಯನ್ನು ಹೆಚ್ಚಿಸಿಕೊಂಡು ಸಮಾಜದಲ್ಲಿ ಯುವಪೀಳಿಗೆ ಮಾದರಿಯಾಗಿ ದೇಶ ಕಟ್ಟುವ ಕೆಲಸಮಾಡಬೇಕು ಎಂದು ತಿಳಿಸಿದರು. ನಿವೃತ್ತ ಉಪನ್ಯಾಸಕರಾದ ಉಮಾಕಾಂತ ಮೀಸೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಕಸರಾದ ಸಂತೋಷಕುಮಾರ ಸಜ್ಜನ್, ವೀಣಾ ಜಲಾದೆ, ಪಾಂಡುರಂಗ ಕುಂಬಾರ, ವೈಜಿನಾಥ ಬೀರಾದಾರ, ಸಂಗೀತಾ ಪಾಟೀಲ, ಅಶೋಕ ರೇವಣಿ ಸುವರ್ಣಾ ಪಾಟೀಲ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಪ್ರಶಿಕ್ಷಣಾರ್ಥಿಗಳಾದ ಶಾಂತಕುಮಾರ, ಸುಜಾತಾ ನಿರೂಪಿಸಿದರು, ಪ್ರಿಯಾಂಕಾ ಸ್ವಾಗತಿಸಿದರು, ತನುಜಾ ವಂದಿಸಿದರು.