ಜಾತಿ ಮತ್ತು ಕೋಮುಗಳ ಅಡೆತಡೆಗಳನ್ನು ನಿವಾರಿಸಿದರೆ ದೇಶದ ಬಲವಾದ ಆಂತರಿಕ ಭದ್ರತೆಯನ್ನು ಕಾಪಾಡಬಹುದು: ವಿ ಕೆ ಸಿಂಗ್

ಕಲಬುರಗಿ;ಮಾ.15: ಜಾತಿ ಮತ್ತು ಕೋಮುಗಳ ಅಡೆತಡೆಗಳನ್ನು ನಿವಾರಿಸಿದರೆ ದೇಶದಲ್ಲಿ ಬಲವಾದ ಆಂತರಿಕ ಭದ್ರತೆಯ ಪ್ರಕ್ರಿಯೆಯನ್ನು ಕಾಪಾಡಬಹದು ಮತ್ತು ಮುಂಬರುವ ಪ್ರತಿಯೊಬ್ಬ ನಾಗರಿಕನಲ್ಲೂ ಜವಾಬ್ದಾರಿಯ ಪ್ರಜ್ಞೆಯನ್ನು ತುಂಬುವ ತುರ್ತು ಅಗತ್ಯವಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ ಕೆ ಸಿಂಗ್ ಹೇಳಿದರು.

ಕಲಬುರಗಿ ನಗರದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಬುಧವಾರ ನಡೆದ ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸೇನಾ ಮುಖ್ಯಸ್ಥ (ಅಔಂS) ಜನರಲ್ ಸಿಂಗ್, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ವಿಭಜನೆಯು ಆಂತರಿಕ ಭದ್ರತೆಗೆ ಮಾರಕವಾಗಿದೆ ಹಾಗೂ ಈ ಆಂತರಿಕ ಭದ್ರತೆಯು ದೇಶದ ಆರ್ಥಿಕ ಬೆಳವಣಿಗೆಗೆ ಬಹುಮುಖ್ಯವಾಗಿದೆ.

ಪ್ರಾಚೀನ ಕಾಲದಿಂದಲೂ ಪ್ರಜಾಪ್ರಭುತ್ವವನ್ನು ಜೀವನ ವಿಧಾನವಾಗಿ ಆಚರಿಸುವ ಮೂಲಕ ಭಾರತವು ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದೆ ಎಂದು ಹೇಳಿದ ಜನರಲ್ ಸಿಂಗ್, “ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವದ ಪರಿಕಲ್ಪನೆಯು ಎಲ್ಲಾ ಹಕ್ಕುಗಳೊಂದಿಗೆ ಒಂದಾಗಿತ್ತು ಆದರೆ ನಾಗರಿಕರ ಮೇಲೆ ಯಾವುದೇ ಜವಾಬ್ದಾರಿಯಿಲ್ಲದಿದ್ದರೂ ಇತರ ದೇಶಗಳಲ್ಲಿ ಅಳವಡಿಸಿಕೊಂಡ ಪ್ರಜಾಪ್ರಭುತ್ವವು ಹಕ್ಕುಗಳು ಮತ್ತು ನಾಗರಿಕರ ಮೇಲೆ ಜವಾಬ್ದಾರಿಗಳನ್ನು ಹೊಂದಿದೆ”. ಇತರ ದೇಶಗಳಲ್ಲಿ ಭಾರತಕ್ಕಿಂತ ಭಿನ್ನವಾಗಿ, ವಿಶೇಷವಾಗಿ ದೇಶದ ಆಂತರಿಕ ಭದ್ರತೆಗೆ ಬೆದರಿಕೆಯಿರುವ ಸಮಯದಲ್ಲಿ ಅದನ್ನು ರಕ್ಷಿಸುವ ಜವಾಬ್ದಾರಿಯೊಂದಿಗೆ ಎಲ್ಲರೂ ಒಗ್ಗೂಡಬೇಕೆಂದು ಕರೆ ನೀಡಿದರು.

ಭಾರತದಲ್ಲಿ ಪ್ರಮುಖವಾಗಿ ದೇಶದ ನಾಗರಿಕರು ಇತರ ಧರ್ಮಗಳನ್ನು ಸ್ವೀಕರಿಸುವ ಮತ್ತು ಗೌರವಿಸುವ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿದ್ದಾರೆ ಮತ್ತು ಜನರನ್ನು ಒಗ್ಗೂಡಿಸಲು ಹಾಗೂ ಅವರನ್ನು ರಕ್ಷಿಸಲು ಧಾರ್ಮಿಕ ಅಡೆತಡೆಗಳನ್ನು ನಿವಾರಿಸಲು ಇದನ್ನು ಆಧಾರವಾಗಿ ಬಳಸಬೇಕು ಎಂದು ಜನರಲ್ ಸಿಂಗ್ ಹೇಳಿದರು. ದೇಶದ ಸಮಗ್ರತೆಯು ಭಾರತದ ಪ್ರಗತಿಗೆ ಪ್ರತಿಕೂಲವಾದ ಶಕ್ತಿಗಳು ದುಷ್ಟ ವಿನ್ಯಾಸಗಳಿಂದ ಉಳಿಸುತ್ತದೆ. ಇಂದಿನ ದಿನಗಳಲ್ಲಿ ಜಾತಿಯ ಅಡೆತಡೆಗಳನ್ನು ನಿವಾರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಸೇನೆಯಲ್ಲಿ ಯಾವುದೇ ಜಾತಿ ಅಥವಾ ಧರ್ಮದ ಅಡೆತಡೆಗಳಿಲ್ಲದ ಕಾರಣ ಸೇನೆಯು ತನ್ನ ಎಲ್ಲಾ ಧ್ಯೇಯೋದ್ದೇಶಗಳಲ್ಲಿ ಯಶಸ್ವಿಯಾಗಿದೆ ಎಂದ ಅವರು, ಸೇನೆಯಲ್ಲಿ ಎಲ್ಲರೂ ಸಮಾನರು ಮತ್ತು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತಾರೆ. ದೇಶದ ನಾಗರಿಕರು ಈ ನಿಟ್ಟಿನಲ್ಲಿ ಸೇನೆಯನ್ನು ಅನುಕರಿಸಿ ಅಡೆತಡೆಗಳನ್ನು ಭೇಧಿಸಬೇಕಾಗಿದೆ. ಜಾತಿ, ಧರ್ಮಗಳನ್ನು ಮೀರಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕೆಂದು ತಿಳಿಸಿದರು.

ಇತರ ಯಾವುದೇ ದೇಶಗಳು ಸಾಧಿಸಲು ಸಾಧ್ಯವಾಗದ ಸರಾಸರಿ ಶೇಕಡಾ 6 ರ ಬೆಳವಣಿಗೆಯೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿರುವ ವಿಶ್ವದ ಏಕೈಕ ದೇಶ ಭಾರತವಾಗಿದೆ ಮತ್ತು ಅಂತರಾಷ್ಟ್ರೀಯ ಹೂಡಿಕೆದಾರರಲ್ಲಿ ಭಾರತದ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಇಂದು ಹೂಡಿಕೆಗೆ ದೇಶದಲ್ಲಿ ಶಾಂತಿ ಮತ್ತು ಅನುಕೂಲಕರ ವಾತಾವರಣವಿದೆ. “ನಾವು ಎಲ್ಲಾ ಕ್ಷೇತ್ರಗಳಲ್ಲಿ ದಾಖಲೆಯ ಹೂಡಿಕೆಗಳನ್ನು ಪಡೆಯುತ್ತಿದ್ದೇವೆ, ನಮ್ಮಂತೆ ಯಾವುದೇ ದೇಶವು ಅದನ್ನು ಪಡೆಯುತ್ತಿಲ್ಲ”. ಭಾರತದ ಜ್ಞಾನದ ಬಂಡವಾಳವು ಹೇರಳವಾಗಿದ್ದು ಮತ್ತು ಭಾರತೀಯರು ಪ್ರಪಂಚದಾದ್ಯಂತ ಸಾಫ್ಟ್‍ವೇರ್ ಮತ್ತು ಹಾರ್ಡ್‍ವೇರ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ ಎಂದು ಜನರಲ್ ಸಿಂಗ್ ಹೇಳಿದರು.

ಪಕ್ಷದ ಪ್ರಣಾಳಿಕೆಯನ್ನು ತಯಾರಿಸಲು ಕ್ರೌಡ್ ಸೋಸಿರ್ಂಗ್ ಅನ್ನು ಅಳವಡಿಸಿಕೊಳ್ಳುವ ಬಿಜೆಪಿಯ ನಿರ್ಧಾರವನ್ನು ಉಲ್ಲೇಖಿಸಿದ ಜನರಲ್ ಸಿಂಗ್, ಆಯಾ ರಾಜ್ಯದ ಜನರ ನಾಡಿಮಿಡಿತವನ್ನು ಆಧರಿಸಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಿರ್ದಿಷ್ಟ ರಾಜ್ಯದ ಪ್ರಣಾಳಿಕೆಯನ್ನು ಸಿದ್ಧಪಡಿಸಲು ಪಕ್ಷವು ಬಯಸಿದೆ ಎಂದು ಹೇಳಿದರು. “ಯಾವುದೂ ಉಚಿತವಾಗಿ ಬರುವುದಿಲ್ಲ ಮತ್ತು ಎಲ್ಲವೂ ನಿಮಗೆ ವೆಚ್ಚದಲ್ಲಿ ಬರುತ್ತದೆ…” ಎಂದು ಅವರು ತಿಳಿಹೇಳಿದರು.

ಬಿಜೆಪಿ ಎಂಎಲ್‍ಸಿ ಶಶೀಲ್ ಜಿ ನಮೋಶಿ ಅವರು ಜನರಲ್ ವಿ ಕೆ ಸಿಂಗ್ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ ನಿಷ್ಠಿ ಸ್ವಾಗತಿಸಿದರು. ವಿಶ್ವವಿದ್ಯಾಲಯದ ಸಮಕುಲಪತಿ ಪೆÇ್ರ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಸೇರಿದಂತೆ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.