ಜಾತಿ ಭಾಷೆ ಬೇರೆಯಾದ್ರು ನಮ್ಮ ಧರ್ಮ ಹಿಂದೂ ಧರ್ಮ-ನರಸಪ್ಪ ಸಾಹುಕಾರ

ಮಾನ್ವಿ,ನ.೦೯- ಭಾರತ ದೇಶದಲ್ಲಿನ ಪ್ರತಿಯೂಬ್ಬರ ಜಾತಿ ಮತ ಭಾಷೆ ಬೇರೆ ಬೇರೆಯಾದರು ನಮ್ಮೇಲ್ಲರ ಧರ್ಮ ಒಂದೇ ಅದು ಹಿಂದೂ ಧರ್ಮವಾಗಿದ್ದು ಈ ಧರ್ಮ ರಕ್ಷಣೆಗೆ ನಾವುಗಳು ಜಾತಿ ಮತ ಭಾಷೆ ಸಂಪ್ರದಾಯಗಳನ್ನು ಬದಿಗಿರಿಸಿ ಒಗ್ಗಟ್ಟಾಗಿ ಹಿಂದೂ ರಾಷ್ಟ್ರ ಸ್ಥಾಪಿಸಬೇಕಿದೆ ಎಂದು ನರಸಪ್ಪ ಸಾಹುಕಾರ ನೀರಮಾನ್ವಿ ಹೇಳಿದರು.
ತಾಲೂಕಿನ ನೀರಮಾನ್ವಿ ಶ್ರೀಸಿದ್ದರೂಢ ಮಠದ ಅವರಣದಲ್ಲಿ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತ. ಭಾರತ ಅಂದರೆ ಭಾ-ಸ್ವಯಂಪ್ರಕಾಶ ರತ-ಪ್ರೀತಿಯುಳ್ಳವನು ಅಂದರೆ ಸ್ವಯಂಪ್ರಕಾಶನಾದ ಭಗವಂತನನ್ನು ಪ್ರೀತಿಸುವವರು ಭಾರತೀಯ ಧರ್ಮ. ಕುರುಣೆಯಿಂದ ಕೂಡಿರುವುದು ಮತ್ತು ಹಸಿದವನಿಗೆ ಅನ್ನ ನೀರು ಕೂಡುವುದು ಹಗೂ ಆಸಹಾಯಕರಿಗೆ ಸಹಕರಿಸುವುದು ನಮ್ಮ ಹಿಂದೂ ಧರ್ಮ ಎಂದರು.
ಹಿಂದೂ ಜನ ಜಾಗೃತಿ ಸಮಿತಿ ಸಮನ್ವಯಕ ವೆಂಕಟರಮಣನಾಯಕ ಮಾತನಾಡಿ ದೇವತೆಗಳ ವಿಡಂಬನೆಯನ್ನು ತಡೆಗಟ್ಟುವುಸಕ್ಕಾಗಿ ಸ್ಥಾಪನೆಯಾದ ಹಿಂದೂ ಜನ ಜಾಗೃತಿ ಸಮಿತಿ ಕಳೆದ ೧೨ ವರ್ಷಗಳಿಂದ ೧೫ ಸಾವಿರಕ್ಕೂ ಹೆಚ್ಚು ಧರ್ಮ ಜಾಗೃತಿ ಸಭೆಗಳನ್ನು ಮಾಡಿ ೧೮ ಲಕ್ಷಕ್ಕೂ ಹೆಚ್ಚು ಜನರಲ್ಲಿ ಹಿಂದೂ ರಾಷ್ಟ್ರ ಕುರಿತು ಜಾಗೃತಿ ಮೂಡಿಸಲಾಗಿದೆ. ನಮಗೆ ಧರ್ಮ ಹಾಗೂ ರಾಷ್ಟ್ರ ಬೇರೆಯಲ್ಲ ಸಮುದ್ರವಲಯಾಂಕಿತ ಪೃಥ್ವಿಯು ಒಂದು ರಾಷ್ಟ್ರವಾಗಲಿ ಎಂದರು.
ಹಿಂದೂ ರಾಷ್ಟ್ರ ಸ್ಥಾಪನೆಯಿಂದ ಮಾತ್ರ ರಾಷ್ಟ್ರ ಕಲ್ಯಾಣ ಮಾತ್ರವಲ್ಲದೆ ವಿಶ್ವ ಕಲ್ಯಾಣವಾಗಲಿದೆ. ಇಂದಿನ ಜಾತ್ಯಾತೀತ ವ್ಯವಸ್ಥೆಯಲ್ಲಿಶೇ.೮೦ ರಷ್ಟು ಹಿಂದೂಗಳಿಗೆ ಧರ್ಮದ ಶಿಕ್ಷಣ ಪಡೆಯಲು ಅವಕಾಶವಿಲ್ಲ. ಸರ್ಕಾರ ಯಾವುದೇ ಚರ್ಚ್, ಮಸೀದಿಗಳನ್ನು ಸರಕಾರೀಕರಣ ಮಾಡಲಿಲ್ಲ ಕೇವಲ ಹಿಂದೂ ದೇವಾಲಯಗಳನ್ನು ಮಾತ್ರ ಸರಕಾರೀಕರಣ ಮಾಡಿ ಈ ದೇವಾಲಯಗಳಲ್ಲಿನ ಧರ್ಮ ನಿಧಿಯನ್ನು ಸರ್ಕಾರದ ಯೋಜನೆ ಹಾಗೂ ಅನ್ಯ ಮತದವರ ಸುವಿಧೆಗಾಗಿ ಬಳಸಲಾಗುತ್ತಿದೆ. ಧಾರ್ಮಿಕ ವಿಧಿಗಳ ವಿಷಯ ಹಾಗೂ ಧರ್ಮನಿರಪೇಕ್ಷ ಶಾಸನ, ಧರ್ಮದ ಮೇಲೆ ನಿಯಂತ್ರಣ, ಷಡ್ಯಂತರಪೂರ್ವಕ ವಾತಾವರಣ ನಿರ್ಮಿಸಿರುವುದು ಸೇರಿದಂತೆ ಹಿಂದೂಗಳು ಆಸಹಿಷ್ಣುಗಳಾಗಿದ್ದಾರೆ ಎಂದು ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯ, ಹಿಂಸೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು.
ಇಂದಿನ ಜಾತ್ಯಾತೀತ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರ ಓಲೈಕೆ, ಹಿಂದೂಗಳ ಹತ್ಯೆ, ಮತಾಂತರ, ಲವ್ ಜಿಹಾದ್, ಹಲಾಲ್ ಜಿಹಾದ್, ಭ್ರಷ್ಠಚಾರಗಳಿಂದ ಮುಕ್ತಿ ಪಡೆಯಲು ಹಿಂದೂಗಳೆಲ್ಲರೂ ಒಂದಾಗಿ ಹಿಂದೂ ರಾಷ್ಟ್ರಕ್ಕಾಗಿ ಕೃತಿಶೀಲರಾಗಬೇಕಿರುವುದು ಪ್ರತಿಯೂಬ್ಬ ಹಿಂದೂವಿನ ಕರ್ತವ್ಯವಾಗಿದೆ ಎಂದು ವೆಂಕಟರಮಣನಾಯಕ ಕರೆ ನಿಡಿದರು.
ಈ ವೇಳೆ ಹಿಂದೂ ಸಮಾಜದ ಮುಖಂಡರಾದ ವಿನೋದ್ ಮಾನ್ವಿ, ಆಂಜನೇಯ್ಯನಾಯಕ, ಹನುಮಂತನಾಯಕ ವಕೀಲ, ವೆಂಕಿ ಯಾದವ್ ಸೇರಿದಂತೆ ನೂರಾರು ಜನ ಧರ್ಮಪ್ರೇಮಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಪ್ರಕಾಶನದ ಗ್ರಂಥಗಳು, ಆಯುರ್ವೇದಿಕ್ ಔಷಧಿಗಳ ಸಸ್ಯ, ಸಾತ್ವಿಕ ಉತ್ಪಾದನೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.