ಜಾತಿ ನಿಂದನೆ :16 ಜನರ ವಿರುದ್ಧ ಪ್ರಕರಣ ದಾಖಲು,ಆರೋಪಿಗಳ ಬಂಧನಕ್ಕೆ ಮಹೇಶ ಕಾಂಬಳೆ ಆಗ್ರಹ

ಅಥಣಿ :ನ.20: ತಾಲೂಕಿನ ದರೂರ ಗ್ರಾಮ ಪಂಚಾಯತನ ನಾಲ್ಕು ಮಹಿಳಾ ಸದಸ್ಯೆಯರು ಸೇರಿದಂತೆ ಒಟ್ಟು 16 ಜನರ ವಿರುದ್ಧ ಅಥಣಿ ಪೆÇಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ದರೂರ ಗ್ರಾಮ ಪಂಚಾಯತನ ಹಾಲಿ ಸದಸ್ಯ, ಮಾಜಿ ಅಧ್ಯಕ್ಷ ಮಹೇಶ ಬಾಬು ಕಾಂಬಳೆ ಬೆಳಗಾವಿಯ 3 ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ 16 ಜನರ ವಿರುದ್ಧ ದಾವೆ ಹೂಡಿದ ಹಿನ್ನೆಲೆಯಲ್ಲಿ ಅಥಣಿ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅರ್ಜಿದಾರ ಮಹೇಶ ಕಾಂಬಳೆ ಯವರ ದಾವೆಯ ಅರ್ಜಿ ವಿಚಾರಣೆ ನಡೆಸಿದ ನಂತರ ಜಿಲ್ಲಾ ಸತ್ರ ನ್ಯಾಯಾಲಯ 16 ಜನರ ವಿರುದ್ಧ ಜಾತಿ ನಿಂದನೆ ಮತ್ತು ಕಾಮಗಾರಿಗಳ ಬಗೆಗೆ ಖೊಟ್ಟಿ ದಾಖಲೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಅಥಣಿ ಪೆÇಲೀಸ್ ಠಾಣೆಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ದರೂರ ಗ್ರಾಮದ ಹಿರಿಯ ಧುರೀಣ, ಮಾಜಿ ಜಿ.ಪಂ ಸದಸ್ಯ ಸುರೇಶ ಕಲ್ಲಪ್ಪ ಮಾಯಣ್ಣವರ, ಮಹಾದೇವ ಅಣ್ಣಪ್ಪ ಬಸಗೌಡರ, ಮಹೇಶ ಬೆನ್ನಾಡಿ, ನೇಮಿನಾಥ ಅಸ್ಕಿ, ರಾಜೇಸಾಬ ಬಿಜಾಪುರ, ಶಂಕರ ಐಗಳಿ, ಅಶೋಕ ಖುರ್ದ, ಸಿದ್ಧಪ್ಪ ಅಪ್ಪಣ್ಣಾ ದಳವಾಯಿ, ಅಪ್ಪಾಸಾಹೇಬ ಸದಾಶಿವ ಹಳ್ಳೂರ, ಮಹಾವೀರ ಬಾಳಿಗೇರಿ, ಮಹಾದೇವ ಮಲ್ಲಪ್ಪಾ ಕಲ್ಲೊಳ್ಳಿ, ವೃಷಭ ರಾಜಕುಮಾರ ನಾಯಿಕ, ಶೋಭಾ ನೇಮಿನಾಥ ಅಸ್ಕಿ, ಆಸ್ಮಾ ರಾಜಾಸಾಬ ಬಿಜಾಪೂರ, ರಾಜಶ್ರೀ ಮಹಾವೀರ ಬಾಳಿಗೇರಿ, ತಂಗೆವ್ವಾ ಶಂಕರ ಐಗಳಿ ಇವರ ವಿರುದ್ಧ ಜಾತಿ ನಿಂದನೆ ಮತ್ತು ಖೊಟ್ಟಿ ದಾಖಲೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಜನೇವರಿ 18ರಂದು ಗ್ರಾಮ ಪಂಚಾಯತನ ಎಲ್ಲ ಕಾಮಗಾರಿಗಳ ಬಗೆಗೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಫಿರ್ಯಾದಿ ಮಹೇಶ ಕಾಂಬಳೆಯವರ ಖೊಟ್ಟಿ ಸಹಿ ಮಾಡಿದ್ದಲ್ಲದೆ ಫಿರ್ಯಾದುದಾರ ಮಹೇಶ ಕಾಮಗಾರಿಗಳ ಕುರಿತು ಆರೋಪಿತರೆಲ್ಲರಿಗೆ ವಿಚಾರಿಸಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ದೈಹಿಕ ಹಲ್ಲೆ ಕೂಡ ಮಾಡಿದ್ದಾರೆ ಎಂದು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಿಂದ ಅಥಣಿ ಪೆÇಲೀಸ್ ಠಾಣೆಯಲ್ಲಿ ನವ್ಹೆಂಬರ 16 ರಂದು ಪ್ರಕರಣ ದಾಖಲಾಗಿದೆ.

ಪ್ರಕರಣದ ಆರೋಪಿಗಳೆಲ್ಲರು ದರೂರ ಗ್ರಾಮದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಕೂಡ ಅಥಣಿ ಪೆÇಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರುದಾರ ಮಹೇಶ ಕಾಂಬಳೆ ಆರೋಪಿಸಿದ್ದಾರೆ ಮತ್ತು ತಕ್ಷಣ ಆರೋಪಿಗಳನ್ನು ಬಂಧಿಸಬೇಕು ಎಂದು ಅಥಣಿ ಪೆÇಲೀಸ್ ಠಾಣೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.