ಕಲಬುರಗಿ:ಸೆ.24: ಜಾತಿ ಧರ್ಮ ಮತ ಪಂಥ ರಾಜಕೀಯ ರಹಿತ ಸಮಾನ ಮನಸ್ಕರಿಂದಲೇ ಈ ದೇಶ ಪ್ರಗತಿಯತ್ತ ಎಂದು ಡಾ. ಯಲ್ಲಪ್ಪ ಇಂಗಳೆ ಹೇಳಿದರು.
ಮಾದನಹಿಪ್ಪರಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ನಿರ್ಮಿಸಿದ ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಮತ್ತು ಪದಗ್ರಹಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸ್ವಾಭಿಮಾನ ಸ್ವಾವಲಂಭಿ ಜೀವನ ಶ್ರೇಷ್ಠ. ಅನ್ನದ ಹಸಿವಿಗಿಂತ ಜ್ಞಾನದ ಹಸಿವು ಇದ್ದಾಗ ಮಾತ್ರ ಮನುಷ್ಯ ಉನ್ನತ ಸ್ಥಾನಕ್ಕೇರಬಲ್ಲ. ಪ್ರತಿ ವ್ಯಕ್ತಿಗೂ ಸಾಮಾಜಿಕ ಬದ್ದತೆ ಇರಬೇಕು. ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯವಾಗಿ ಸಮಾನವಾಗಿರಬೇಕು. ಶಿಕ್ಷಣ ಜೀವನ ಪ್ರಗತಿಗೆ ಪೂರಕ. ತನ್ನ ದೇಶದ ಹಿತಾಶಕ್ತಿ ಹಾಗೂ ನಾಡಿನ ಕಲ್ಯಾಣಕ್ಕಾಗಿ ದುಡಿಯುವವನು ಜಾತ್ಯಾತೀಕ ನಾಯಕನಾಗಿ ಬೆಳೆಯಬಲ್ಲ. ಹಾಗೆಯೇ ಈ ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಕೂಡಾ ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವದ ಮೇಲೆ ಮುನ್ನಡೆಯಲಿದೆ ಎಂದರು. ಮುಖ್ಯ ಅತಿಥಿ ನಿವೃತ್ತ ಪ್ರಾಚಾರ್ಯ ಶ್ರೀಮತಿ ಎಸ್.ಎಂ. ಪತ್ತಾರ ಮಾತನಾಡಿ ಮಕ್ಕಳು ಉನ್ನತ ಸಾಧನೆ ಮಾಡಿದಾಗ ಖುಶಿ ಪಡುವವರು ಹೆತ್ತವರು ಮತ್ತು ಶಿಕ್ಷಕರು ಮಾತ್ರ. ಈ ಟ್ರಸ್ಟ ಗೊತ್ತುಗುರಿಗಳು ಮಹತ್ವದಾಗಿರಲಿ ಎಂದರು. ಇದೆ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿ ಪರ ರೈತರಾದ ಶಿವಲಿಂಗಪ್ಪ ಬಜಾರೆ, ಮತ್ತು ಕಲ್ಲಪ್ಪ ಕೋಳಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಗೈದ ಮಾದನಹಿಪ್ಪರಗಿ ವಲಯದ ಗ್ರಾಮಗಳ ವಿದ್ಯಾರ್ಥಿಗಳನ್ನು, ಗ್ರಾಮ ಪಂಚಾಯತ ಸಫಾಯಿ ಕಾರ್ಮಿಕರನ್ನು ಮತ್ತು ಅಂಗವೈಕಲ್ಯದ ಬುದ್ದಪ್ಪ ಹಾಲೇನವರು ಸನ್ಮಾನಿಸಲಾಯಿತು. ದಿವ್ಯ ಸಾನಿಧ್ಯವಹಿಸಿದ ಸ್ಥಳೀಯ ಶಿವಲಿಂಗೇಶ್ವರ ವಿರಕ್ತ ಮಠದ ಅಭಿನವ ಶಿವಲಿಂಗ ಸ್ವಾಮಿಗಳು, ಹಿರೇಮಠದ ಶಾಂತವೀರ ಶಿವಾಚಾರ್ಯರು ಆಶೀರ್ವಾಚನ ನೀಡಿದರು. ಸಭೆಯ ಅಧ್ಯಕ್ಷವಹಿಸಿದ್ದ ನಿವೃತ್ತ ಶಿಕ್ಷಕರಾದ ಬಸವಣ್ಣಪ್ಪ ಸಾತಲಗಾಂವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮೈಂದರಗಿ, ಬಸವರಾಜ ಅರಳಿಮಾರ, ಟ್ರಸ್ಟನ ಅಧ್ಯಕ್ಷ ಮಲ್ಲಿನಾಥ ಪರೇಣಿ, ಮಹಿಬೂಬ್ ಫಣಿಬಂದ್, ನಾಗೇಂದ್ರ ಗಂಟೆ, ಗೌರಿ ಶಂಕರ ರೂಗಿ, ರೇವಮ್ಮ ಅಷ್ಟಗಿ, ಹರಿದಾಸ್ ಹಜಾರೆ ಮಹಾಂತೇಶ್ ಸಣಮನಿ, ಮಾರಿತಿ ತಳಕೇರಿ, ವೇದಿಕೆಯ ಮೇಲಿದ್ದರು. ನಾಗನಾಥ ಕವಳೆ, ಆರತಿ ಚವ್ಹಾಣ ಶ್ರೀಶೈಲ ಮೇತ್ರೆ, ಜೈಭೀಮ ಬಬಲಾದಕರ್, ಶಾಂತಾಬಾಯಿ ಅಲಮದ್, ಇದ್ದರು. ಅರ್ಜು ಹತ್ತಿ ನಿರೂಪಿಸಿ ವಂದಿಸಿದರು.