ಜಾತಿ, ಧರ್ಮ ಬಗ್ಗೆ ನಿರಂತರ ವಿಷ ಕಾರುವ ಯತ್ನಾಳ ವಿರುದ್ದ ಎಂ.ಬಿ. ಪಾಟೀಲ ಆಕ್ರೋಶ

ವಿಜಯಪುರ, ಎ.29:ಅಣ್ಣ ಬಸವಣ್ಣನವರ ಹೆಸರು ಇಟ್ಟುಕೊಂಡು ಪ್ರತಿ ದಿನ ನಾಲ್ಕು ಬಾರಿ ಜಾತಿ, ಧರ್ಮದ ಬಗ್ಗೆ ವಿಷ ಕಾರುವ ಶಾಸಕ ಬಸನಗೌಡ ಪಾಟೀಲ ವಿರುದ್ದ ಕೆ. ಪಿ. ಸಿ. ಸಿ. ಪ್ರಚಾರ ಸಮೀತಿ ಅಧ್ಯಕ್ಷ ಎಂ. ಬಿ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ತಮ್ಮ ಗೃಹ ಕಛೇರಿಯಲ್ಲಿಂದು ಪತ್ರಿಕಾಗೊಷ್ಠಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೇಸ್ ನಾಯಕ ರಾಹುಲ ಗಾಂಧಿಯವರನ್ನು ಹುಚ್ಚ ಎಂದು ಬೈದಿರುವದು, ಈ ದೇಶದ ಸೊಸೆ ಶ್ರೀ ಮತಿ ಸೋನಿಯಾಗಾಂಧಿ ಅವರನ್ನು ವಿಷ ಕನ್ಯೆ ಎಂದು ಜರಿದಿದ್ದಕ್ಕೆ ಎಂ. ಬಿ. ಪಾಟೀಲ ಕಿಡಿಕಾರಿದರು.
ಯತ್ನಾಳರ ಈ ಚಾಳಿ ತಮ್ಮದೇ ಪಕ್ಷದ ಸೋಮಣ್ಣ, ಯಡಿಯೂರಪ್ಪ, ವಿಜೇಂದ್ರ, ಮತ್ತಿತರ ನಾಯಕರನ್ನು ಹಿಗ್ಗಾಮುಗ್ಗಾ ಟೀಕಿಸಿರುವದು ಇಡೀ ರಾಜ್ಯದ ಜನತೆಗೆ ಗೊತ್ತಿರದ ಸಂಗತಿ ಏನಲ್ಲ ಎಂದರು.
ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಮಾತ್ರ ಅವರವರ ಪಕ್ಷದ ಬಗ್ಗೆ ಮಾತನಾಡುವದು ನಂತರ ಮತಕ್ಷೇತ್ರದ ಜನರೆಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವದು ರಾಜಧರ್ಮ ಅದನ್ನು ಬಿಟ್ಟು ಯತ್ನಾಳ ಗಡ್ಡ ಬಿಟ್ಟಿರುವವರು, ಬುರಕಾ ಧರಿಸಿದವರು ನನ್ನ ಕಚೇರಿ ಸನಿಹ ಬರಬೇಡಿ ಎಂದು ಹೇಳುವದು ದ್ವೇಷ ಸಾಧಿಸುವದಾಗಿದೆ ಬಸನಗೌಡ ಪಟೀಲ ಇದನ್ನೇ ಕಳೆದ ಐದು ವರ್ಷಗಳಲ್ಲಿ ಮಾಡಿಕೊಂಡು ಬಂದಿದ್ದಾರೆ ಎಂದು ಪಾಟೀಲ ಗುಡುಗಿದರು.
2014 ರಲ್ಲಿ ಪ್ರಧಾನಿ ಮೋದಿಯವರ ಬಗ್ಗೆ ದೇಶದ ಜನ ಹೊಸ ಆಶಾಭಾವನೆ ಹೊಂದಿದ್ದರು ಆದರೆ ಕಳೆದ ಒಂಭತ್ತು ವರ್ಷಗಳಲ್ಲಿ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿರುವದು ಅದರಲ್ಲೂ ಮುಖ್ಯವಾಗಿ ಪೇಟ್ರೋಲ್, ಡಿಜಾಯಿಲ್, ಅಡುಗೆ ಅನಿಲ ಮುಂತಾದವಸ್ತಗಳು ಬೆಲೆ ಜನಸಮಾನ್ಯರಿಗೆ ಕಣ್ಣಿರು ತರೀಸಿದೆ ಡಬಲ್ ಇಂಜನ್ ಎಂದು ಹೇಳಿಕೊಳ್ಳುವ ಬಿ. ಜೆ. ಪಿ. ಯ 40 ಪರಸೆಂಟೆಜ ಭೃಷ್ಠಾರಚಾದಿಂದಾಗಿ ಎರಡು ಇಂಜನ್ನುಗಳು ಕೆಟ್ಟು ಗುಜರಿಗೆ ಹೋಗುವ ಕಾಲ ಬಂದಿದೆ ಎಂದರು.
ಪತ್ರಿಕಾಗೊಷ್ಠಿಯಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ರಾಜು ಆಲಗೂರ, ಎ. ಐ. ಸಿ. ಸಿ, ವಿಕ್ಷಕರಾದ ಶ್ರೀ ಮತಿ ಪ್ರೀತಿ ಜಸ್ವಾಲ್, ಡಾ. ಮಹಾಂತೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.