ಜಾತಿ ಗಣತಿ ವಿರುದ್ಧ ಸೋಮಶೇಖರ್ ರೆಡ್ಡಿ ಅಸಮಾಧಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.01: ಜಾತಿ ಗಣತಿ ವಿರುದ್ಧ ನಗರದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.‌
ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿ ಗೋಷ್ಠಿ ನಡೆಸಿದ ಅವರು. ಜಾತಿ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಗಣತಿ ಮಾಡಲು ನಮ್ಮ ಮನೆಗೂ ಮತ್ತು ನಗರದಲ್ಲಿ ನನಗೆ ಗೊತ್ತಿರುವವರ ಒಬ್ಬರ ಮನೆಗೂ ಬಂದಿಲ್ಲ. ಕಾಂಗ್ರೆಸ್ ಸಚಿವರುಗಳೇ ಸಮೀಕ್ಷೆ ಸರಿಯಿಲ್ಲ ಎಂದು ಹೇಳ್ತಿದ್ದಾರೆಂದರು.
130ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರೋ  ಕಾಂಗ್ರೆಸ್  ಇವತ್ತು  ಇಂಡಿಯಾ ಒಕ್ಕೂಟ ಮಾಡಿಕೊಂಡು ಪ್ರಾದೇಶಿಕ ಪಕ್ಷಗಳ ಬಳಿ ಬಿಕ್ಷೆ ಬೇಡಿಕೊಳ್ಳುವ ಸ್ಥಿತಿ ಪಡೆದಿದೆ. ಇತರೇ ಪಕ್ಷಗಳೋಂದಿಗೆ  ಅಲೈನ್ಸ್ ಗೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ಈ ಬಾರಿಯ ಲೋಖಸಭಾ ಚುನಾವಣೆಯಲ್ಲಿ 100 ಸೀಟುಗಳನ್ನು ಐಎನ್ ಡಿಎ   ಒಕ್ಕೂಟ ಗಳಿಸುವುದಿಲ್ಲವೆಂದರು.
ಬಳ್ಳಾರಿ ಮರ್ಯಾದೆಯನ್ನು ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರು ದೇಶ ಮತ್ತು ರಾಜ್ಯದಲ್ಲಿ ಕಳೆದಿದ್ದಾರೆ. ಪಾಕಿಸ್ತಾನ ಘೋಷಣೆ ಪ್ರಕರಣ ಮುಚ್ಚಿ ಹಾಕಲು ರಾಜ್ಯ ಸರ್ಕಾರದಿಂದ ಯತ್ನ ನಡೆಯುತ್ತಿದೆ. ಘೋಷಣೆ ಕೂಗಿದವರಿಗೆ ಕಪಾಳ ಮೋಕ್ಷ ಮಾಡುವುದು ಬಿಟ್ಟು. ತನಿಖೆ ಎಂದು ವಿಳಂಬ ಮಾಡ್ತಿದೆ.
ಮಾಧ್ಯಮಗಳ ಪ್ರಶ್ನೆಗೆ ನಾಸೀರ್ ವರ್ತನೆ ನಡೆದುಕೊಂಡ ರೀತಿ ಸರಿಯಲ್ಲವೆಂದರು.
 ಖಜಾನೆ ಖಾಲಿಯಾ ಗಿದೆ:
ರಾಜ್ಯದಲ್ಲಿ ಹಣಕಾಸು ವ್ಯವಸ್ಥೆ ಹದಗೆಟ್ಟಿದೆ ಖಜಾನೆ ಖಾಲಿಯಾಗಿದೆ. ಎಸ್ಸಿ ಎಸ್ಟಿ ಹಣ ಬೇರೆ ಕಡೆ ಬಳಕೆ ಮಾಡಿಕೊಳ್ಳಬಾರದು ಆದರೆ ಆಗುತ್ತಿದೆ.
ಮಧ್ಯ ವರ್ತಿಗಳು
ಕಾಂಗ್ರೆಸ್ ಶಾಸಕರೇ ಸಿಎಂಗೆ ಮಧ್ಯವರ್ತಿ ಹಾವಳಿ ಬಗ್ಗೆ ಪತ್ರ ಬರೆದಿದ್ದಾರೆ ಎಲ್ಲವುದಕ್ಕೂ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆಂದು ಆರೋಪಿಸಿದರು.
ಜನಾರ್ದನ ರೆಡ್ಡಿ ಅವರು  ಬಿಜೆಪಿ‌ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ ರೆಡ್ಡಿ, ರಾಜ್ಯಸಭೆಗೆ ಆತ್ಮಸಾಕ್ಷಿ ಯಿಂದ ಮತದಾನ ಹಾಕಿದ್ದಾರೆ. ಅತ್ಮ ಒಳಗೆ ಇರ್ತಾದೆ. ಯಾರ ಆತ್ಮ ಸಾಕ್ಷಿ ಏನು ಅನ್ನೋದು ಗೊತ್ತಾಗಲ್ಲ. ಪಕ್ಷದ ವರಿಷ್ಟರು ನಮ್ಮ ಅಭಿಪ್ರಾಯ ಕೇಳಿದರೆ. ಜನಾರ್ದನ ರೆಡ್ಡಿ ಸೇರಿಸಿಕೊಂಡರೆ ಒಳ್ಳೆಯದು ಎಂದು ಹೇಳ್ತೇವೆ. ಪಕ್ಷ ಸೇರುವುದು ಬಿಡುವುದು ಅವರ ವೈಯಕ್ತಿಕ ವಿಚಾರವೆಂದರು.
ಗ್ಯಾರಂಟಿಗಳಿಂದ ಬಳ್ಳಾರಿಯಲ್ಲಿ ಸೋತಿದ್ದೇವೆ ಹೊರತು ಕೆಆರ್ ಪಿಪಿಯಿಂದಲ್ಲ. ಎಂದು ಪುನರುಚ್ಚರಿಸಿದರು.
ಗೋಷ್ಟಿಯಲ್ಲಿ ಮಾಧ್ಯಮ ವಕ್ತಾರ ಡಾ. ಬಿ.ಕೆ.ಸುಂದರ್ , ಮುಖಂಡರಾದ ಕೆ.ಎ.ರಾಮಲಿಂಗಪ್ಪ, ಗುತ್ತಿಗನೂರು ವಿರೂಪಾಕ್ಷಗೌಡ, ಶಂಕ್ರಪ್ಪ, ಶರಣು ಮೊದಲಾದವರು ಇದ್ದರು.