ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರ ಕ್ಯೂ

filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 85.0; hist255: 0.0; hist252~255: 0.0; hist0~15: 0.0;

ಕೆಜಿಎಫ್:ಮೇ:೨೩: ‘ರೇಷನ್ ಬೇಕೆ ಜಾತಿ ಪ್ರಮಾಣ ಪತ್ರ ತನ್ನಿ’ ಇದು ರೇಷನ್ ಡಿಪೋ ಮಾಲಿಕರು ಪಡಿತರ ಚೀಟಿದಾರರಿಗೆ ಹೇಳುತ್ತಿರುವುದರಿಂದ ರೇಷನ್ ಕಾರ್ಡ್‌ದಾರರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಅರ್ಜಿ ಹಿಡಿದುಕೊಂಡು ಸರದಿ ಸಾಲಿನಲ್ಲಿ ನೂರಾರು ಸಂಖ್ಯೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ .
ರಾಜ್ಯ ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದಲ್ಲಿ ರೇಷನ್ ಡಿಪೋಗಳಿಂದ ಆಹಾರ ಧಾನ್ಯವನ್ನು ಪಡೆಯುತ್ತಿರುವ ಪರಿಶಿಷ್ಟಜಾತಿ ಮತ್ತು ಪರಿಶಿಷ್ಠ ಪಂಗಡ ಕುಟುಂzಬದವರು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಅಪಡೇಟ್ ಮಾಡಿಸಬೇಕು ಎಂಬ ಆದೇಶ ಹೊರಡಿಸಿರುವುದರಿಂದ ಪಡಿತರ ಚೀಟಿದಾರರು ಆತಂಕಕ್ಕೆ ಒಳಗಾಗಿದ್ದು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಸರದಿ ಸಾಲಿನಲ್ಲಿ ನಿಂತು ಹರಸಾಹಸ ಪಡುತ್ತಿದ್ದಾರೆ .
ಹಲವು ವರ್ಷಗಳಿಂದ ಆಹಾರ ಧಾನ್ಯಗಳನ್ನು ಪಡೆಯುತ್ತಿರುವ ಬಡ ಕುಟುಂಬಗಳು ಸರ್ಕಾರದ ಆದೇಶದಿಂದ ಆತಂಕದಲ್ಲಿ ಮುಳುಗಿದ್ದು ಅದರಲ್ಲೂ ಸ್ಲಂಗಳಲ್ಲಿ ವಾಸ ಮಾಡುವ ಕಡುಬಡ ಕುಟುಂಬಗಳು ತಲೆಮೇಲೆ ಕೈಹೊತ್ತು ಕೂರುವಂತೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕಾದರೆ ತಂದೆ ತಾಯಿ ಸಂಬಂದಿಕರ ಟಿಸಿ ಅಥಾವ ಇತರೆ ದಾಖಲೆಗಳನ್ನು ಸಲ್ಲಿಸಬೇಕು ಆದರೆ ಸ್ಲಂಗಳಲ್ಲಿ ವಾಸ ಮಾಡುತ್ತಿರುವ ಕಡು ಬಡ ಕುಟುಂಬಗಳ ಹಿರಿಯರು ಯಾರು ಸಹ ವಿಧ್ಯಾವಂತರಲ್ಲ ಶಾಲೆಯ ದಾಖಲೆಗಳನ್ನು ತನ್ನಿ ಎಂದು ತಾಲ್ಲೂಕು ಕಚೇರಿಯಲ್ಲಿ ಕೇಳಿದರೆ ನಾವು ಎಲ್ಲಿಂದ ತಂದು ನೀಡುವುದು ನಮ್ಮ ತಂದೆ ತಾಯಿ ನಮ್ಮ ಸಂಬಂದಿಕರು ಯಾರು ಸಹ ಓದಿಲ್ಲ ನಾವು ಕೂಲಿ ಕೆಲಸ ಮಾಡಿಕೊಂಡು ಸ್ಲಂಗಳಲ್ಲಿ ಬದುಕು ನಡೆಸುತ್ತಿದ್ದೇವೆ ಶಾಲಾ ದಾಖಲೆ ನೀಡಿದರೆ ಅಂದರೆ ನಾವು ಯಾವ ಶಾಲಾದಾಖಲೆ ನೀಡುವುದು ಎಂಬ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ ಈ ತಿಂಗಳ ಆಹಾರ ಧಾನ್ಯವನ್ನು ಪಡಿತರ ಚೀಟಿದಾರರು ಪಡೆಯಲು ಸಾಧ್ಯವಾಗದಿದ್ದರೆ ಪ್ರತಿಭಟನೆ ಹೋರಾಟಗಳು ನಡೆಯುವ ಸಂಭವವಿರುವುದರಿಂದ ಸಮಸ್ಯೆಯನ್ನು ಬಗೆಹರಿಸಬೇಕಿದೆ.
ಚಿತ್ರ:೦೨: ಜಾತಿ ಆದಾಯ ಪ್ರಮಾಣ ಪತ್ರ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವ ಸಾರ್ವಜನಿಕರು