ಜಾತಿವಾರು ಜನಗಣತಿ ನಡೆಸಲು ಸುಪ್ರೀಂ ಸಮ್ಮತಿ

ನವದೆಹಲಿ/ ಪಾಟ್ನಾ,ಜ.20- ಬಿಹಾರದಲ್ಲಿ ಜಾತಿವಾರು ಜನಗಣತಿ ನಡೆಸಲು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ.

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಆರ್ ಜೆಡಿ ಮೈತ್ರಿ ಸರ್ಕಾರ ನಡೆಸಲು ಉದ್ದೇಶಿಸಿದ್ದ ಜಾತಿವಾರು ಜನಗಣತಿ ಪ್ರಶ್ನಿಸಿ ಕೆಲ ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜನಗಣತಿ ಮಾಡಲು ಸಮ್ಮತಿ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ, ಅದು ಎಲ್ಲರ ಹಿತಾಸಕ್ತಿಗೆ ಪೂರಕವಾಗಲಿದೆ ಎಂದು ಹೇಳಿದ್ದಾರೆ.

ಜಾತಿವಾರು ಜನಗಣತಿ ಕೇಂದ್ರ ಸರ್ಕಾರದ ಕೆಲಸ. ಆ ಕೆಲಸವನ್ನು ಮಾಡದ ಹಿನ್ನೆಲೆಯಲ್ಲಿ ಜನಗಣತಿಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿ ಎಲ್ಲದರ ಬಗ್ಗೆ ಜ್ಞಾನವಿದ್ದರೆ ಜನರ ಅಭಿವೃದ್ಧಿ ಸುಲಭ ಎಂದು ತಿಳಿಸಿದ್ದಾರೆ.

ಬಿಹಾರದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಶಾಸಕನಾಗಿದ್ದಾಗಿನಿಂದಲೂ ಜನರ ಸಮಸ್ಯೆ ಆಲಿಸುತ್ತಾ ಬಂದಿದ್ದೇನೆ. ಸ್ಥಳಗಳಿಗೆ ಭೇಟಿ ಜನರೊಂದಿಗೆ ಕುಳಿತು ಅವರ ಸಮಸ್ಯೆ ರಿಹರಿಸುತ್ತೇನೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಯಾವಾಗಲೂ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ರೈಲ್ವೆ ಸಚಿವನಾಗಿದ್ದಾಗ ಜನರಿಗೆ ಹಲವಾರು ಉದ್ಯೋಗಗಳನ್ನು ನೀಡುತ್ತಿದ್ದೆವು. ಸಂಸತ್ತಿನಲ್ಲಿ ರೈಲು ಬಜೆಟ್ ಮಂಡಿಸಿದಾಗ ಎಲ್ಲ ಪತ್ರಿಕೆಗಳಲ್ಲೂ ಚರ್ಚೆಗಳು ನಡೆದಿದ್ದವು. ಸದನದಲ್ಲಿ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸಬೇಕೆಂದು ಬಯಸುತ್ತೇನೆ. ಅದಕ್ಕೆ ಬಹಳ ಮಹತ್ವವಿದೆ ಎಂದಿದ್ದಾರೆ.

ಪ್ರಚಾರಕ್ಕಾಗಿ ಅರ್ಜಿ:ತೇಜಸ್ವಿ ಯಾದವ್

ಜಾತಿಗಣತಿ ವಿರೋದಿಸಿ ಕೆಕವರು ಕೇವಲ ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ರಾಜ್ಯದಲ್ಲಿ ಎಲ್ಲಿಯವರೆಗೆ ಜಾತಿವಾರು ಸಮೀಕ್ಷೆ ನಡೆಯುವುದಿಲ್ಲವೋ ಅಲ್ಲಿಯವರೆಗೆ ಯಾರಿಗೆ ಮೀಸಲಾತಿ ನೀಡಬೇಕು ಎಂದು ತಿಳಿಯುವುದು ಹೇಗೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದು ಬಿಹಾರ ಸರ್ಕಾರಕ್ಕೆ ಸಂದ ಜಯ ಎಂದಿದ್ದಾರೆ.

ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ: ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿ ಶೀಘ್ರ ಪೂರ್ಣಗೊಳಿಸಿ ಅದರ ಆದಾರದ ಮೇಲೆ ಜನರಿಗೆ ಸೌಲಭ್ಯ ನೀಡಲಿದ್ದೇವೆ ಎಂದಿದ್ದಾರೆ.