ಜಾತಿಜನಗಣತಿಯಿಂದ ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ

ಕೋಲಾರ,ಅ,೩೦:ರಾಜ್ಯದಲ್ಲಿ ಶೈಕ್ಷಣಿಕವಾಗಿ, ಅರ್ಥಿಕವಾಗಿ, ಅರೋಗ್ಯ . ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳು ಸಮನಾಗಿ ಹಂಚಿಕೆಯಾಗ ಬೇಕಾದರೆ ಜಾತಿ ಹಾಗೂ ಜನ ಗಣತಿ ಅತ್ಯವಶ್ಯಕವಾಗಿದೆ. ಇದರಿಂದ ಶೋಷಿತ ಹಿಂದುಳಿ ಸಮುದಾಯಗಳಿಗೆ ಉಂಟಾಗುತ್ತಿದ್ದ ಅನ್ಯಾಯಕ್ಕೆ ನ್ಯಾಯ ದೊರಕಿಸಿದಂತಾಗಲಿದೆ ಎಂದು ಮಾಲೂರು ಮಾಜಿ ಶಾಸಕ ಎ.ನಾಗರಾಜ್ ಅಭಿಪ್ರಾಯ ಪಟ್ಟರು,
ನಗರದ ಸಾಯಿಧಾಮ ಹೋಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಅತಿ ಹಿಂದುಳಿದ ವರ್ಗಗಳ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿ ಜಾತಿ ಜನಗಣತಿ ಮೀಸಲಾತಿ ಹಂಚಿಕೆಗೆ ಪೂರಕವಾಗಿದೆ. ಸುಪ್ರಿಂ ಕೋರ್ಟ್ ಪ್ರಕಾರ ಮೀಸಲಾತಿ ಶೇ ೫೦ಕ್ಕಿಂತ ಮೀರಬಾರದು ಎಂಬ ಅದೇಶವಿದೆ. ಅದರೆ ತಮಿಳು ನಾಡು ಸೇರಿದಂತೆ ಕೆಲವು ರಾಜ್ಯಗಳು ನಿಗಧಿತ ಪ್ರಮಾಣಕ್ಕಿಂತ ಮೀಸಲಾತಿ ಹೆಚ್ಚಾಗಿ ಜಾರಿ ಗೊಳಿಸಿರುವುದನ್ನು ಕಾಣ ಬಹುದಾಗಿದೆ, ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ಮೀಸಲಾತಿ ಹಂಚಿಕೆ ಸಮಸ್ಯೆಯಾಗಿ ಕಾಡಲಿದೆ ಎಂದರು,
ರಾಜ್ಯದಲ್ಲಿ ಜಾತಿಯ ಜನಗಣತಿ ಅದಲ್ಲಿ ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಸಾಧ್ಯ ಹಾಗಾಗಿ ಅತಿ ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸಲು ಕಾಂಗ್ರೇಸ್ ರಾಷ್ಟ್ರೀಯ ನಾಯಕ ಬಿ.ಕೆ.ಹರಿಪ್ರಸಾದ್ ಪ್ರವಾಸ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಇವರ ನೇತ್ರತ್ವದಲ್ಲಿ ಹಿಂದುಳಿದ ವರ್ಗಗಳು ಸಂಘಟಿತರಾಗ ಬೇಕಾಗಿದೆ ಎಂದು ತಿಳಿಸಿದರು,
ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಶ್ರೀಕೃಷ್ಣ ಪ್ರಸ್ತಾವಿಕವಾಗಿ ಮಾತನಾಡಿ ಜಾತಿಜನಗಣತಿ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿ ಶೋಷಿತ ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ದೆಸೆಯಲ್ಲಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರು ಹಿಂದುಳಿದ ಧನಿಯಾಗಿದ್ದಾರೆ. ಅವರಿಗೆ ನಮ್ಮೆಲ್ಲಾರ ಬೆಂಬಲವನ್ನು ನೀಡುವ ಮೂಲಕ ಶಕ್ತಿ ತುಂಭ ಬೇಕಾಗಿದೆ ಎಂದರು,
ಓಬಿಸಿ ಮುಖಂಡ ಮುನಿರಾಜು ಮಾತನಾಡಿ ಅತಿಹಿಂದುಳಿದ ವರ್ಗಗಳಿಗೂ ಸಮಾಜದಲ್ಲಿ ಸ್ಥಾನಮಾನಗಳ ಅವಕಾಶ ಕಲ್ಪಿಸುವ ದೆಸೆಯಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಕಲ್ಪಿಸ ಬೇಕಾಗಿದೆ. ಎಲ್ಲರೂ ಸಂಘಟಿತರಾಗುವ ಮೂಲಕ ಸಾಧನೆಗೈಯ್ಯ ಬೇಕಾಗಿದೆ ಎಂದರು.
ದಿವಾಕರ್ ಮಾತನಾಡಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶೋಷಿತರ ಅಭಿವೃದ್ದಿಯ ಹರಿಕಾರ ಮಾಜಿ ಮುಖ್ಯ ಮಂತ್ರಿ ಶ್ರೀ ದೇವರಾಜ್ ಅರಸ್ ಅವರ ನಂತರ ಹಿಂದುಳಿದ ಪರ ಧವನಿಯಾಗಿರುವ ಹರಿಪ್ರಸಾದ್ ಅವರು ಕಳೆದ ೫೦ ವರ್ಷಗಳ ರಾಜಕೀಯದ ಅನುಭವದಲ್ಲಿ ಬೇರು ಮಟ್ಟದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುವರು. ಅವರ ಧ್ವನಿಗೆ ನಮ್ಮಗಳ ಧ್ವನಿಗೊಡಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸ ಬೇಕಾಗಿದೆ ಎಂದರು.
ಕೆಲವು ಮೇಲ್ವರ್ಗದವರು ಹಿಂದುಳಿದ ಜಾತಿಗೆ ಸೇರ್ಪಡೆ ಮಾಡ ಬೇಕೆಂಬ ಒತ್ತಡದಿಂದಾಗಿ ಓಬಿಸಿ ವರ್ಗದವರಿಗೆ ವಂಚನೆಯಾಗಲಿದೆ ಇದಕ್ಕೆ ಅವಕಾಶ ನೀಡದೆ ನಮ್ಮ ಹಕ್ಕುಗಳಿಗೆ ನಾವು ಹೋರಾಡ ಬೇಕಾಗಿದೆ ಎಂದು ಕರೆ ನೀಡಿದರು,
ಜಿಲ್ಲಾ ಕಾಂಗ್ರೇಸ್ ಓಬಿಸಿ ವಿಭಾಗದ ಮಾಜಿ ಅಧ್ಯಕ್ಷ ಆಶೋಕ್ ಮಾತನಾಡಿ ಇಂಥಹ ಸಂದರ್ಭದಲ್ಲಿ ಹರಿಪ್ರಸಾದ್ ಹಿಂದುಳಿದವರ ಧ್ವನಿಯಾಗಿ ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದರು. ತಾ.ಪಂ. ಮಾಜಿ ಸದಸ್ಯ ಯುವರಾಜ್ ಮಾತನಾಡಿ ಮೀಸಲಾತಿ ರಾಜಕೀಯ ಸ್ಥಾನ ಮಾನಗಳಿಗೆ ಮಾತ್ರವಲ್ಲ ಉನ್ನತ ಅಧಿಕಾರಿಗಳ ಸ್ಥಾನಗಳಲ್ಲೂ ಮೀಸಲಾತಿ ಸೌಲಭ್ಯಗಳು ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಎಚ್ಚೆತ್ತುಗೊಂಡು ಸಾಮಾಜಿಕ ನ್ಯಾಯಕ್ಕಾಗಿ ಜಾಗೃತರಾಗುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು,
ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಸ್ ಪಾಷ, ಮಾಜಿ ಸದಸ್ಯ ಸಿ. ಸೋಮಶೇಖರ್, ಲಾಲ್ ಬಹುದ್ದೂರ್ ಶಾಸ್ತ್ರಿ, ಹಿಂದುಳಿದ ವರ್ಗಗಳ ನಾಯಕ ಯಕ್ಬಾಲ್ ಆಹಮದ್, ನಾಗರಾಜ್, ರಾಮಮೂರ್ತಿ ನಾಯ್ಡು ಮುಂತಾದವರು ಮಾತನಾಡಿದರು,