ಜಾತಿಗಣತಿ ವರದಿ ಸ್ವೀಕಾರ:ವಿಜಯೋತ್ಸವ

ಕಲಬುರಗಿ,ಮಾ 1: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ
2015 ರಲ್ಲಿ ಸಿದ್ಧಪಡಿಸಲಾದ ಜಾತಿವಾರು ಜನಗಣತಿ(ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ) ವರದಿಯನ್ನು ಸಲ್ಲಿಸಿದ್ದಕ್ಕಾಗಿ ನಗರದ ಜಗತ್ ವೃತ್ತ ದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ,ಪಟಾಕಿ ಹಾರಿಸಿ ವಿಜಯೋತ್ಸವವನ್ನು ಆಚರಿಸಲಾಯಿತು.
ಮುಖಂಡರಾದ ಮಹಾಂತೇಶ ಕೌಲಗಿ,ಬಸವರಾಜ್ ಬೂದಿಹಾಳ,ಸಿದ್ದಪ್ಪ ಜಾಲಗಾರ ,ಸಾಯ್ಬಣ್ಣ ಹೇಳವರ್, ಚಂದು ಪವಾರ್, ರೇವಣಸಿದ್ದಪ್ಪ ಸಾತ್ನೂರ್, ಮೈಬೂಬ್ ಸಾಬ್ ರಾಜೇಂದ್ರ ಬಂಡ್ಗಾರ್, ವಿನೋದ್ ಕಾರ್ಪೆಲ್, ಮಹಾರಾಯ ಉಸಿ, ದಸ್ತಗಿರ್ ಸಾಬ್ ನದಾಫ್, ಬಸವರಾಜ್ ಹರವಾಳ ,ರುಕ್ಮಣ್ಣ ಮಡಿವಾಳ ,ಶರಣು ಸೂರ್ಯವಂಶಿ, ಚಂದ್ರಶೇಖರ್ ಗೊಂದಳಿ, ಲಕ್ಷ್ಮಣ್ ಪೂಜಾರಿ, ಹನುಮಂತ ಪೂಜಾರಿ, ಕಾಶೀನಾಥ್ ಕಂದ ಗೋಳ,ಶರಣಪ್ಪ ಕೆಸರಟಗಿ, ಮಲ್ಲೇಶಿ ಯಾದವ್ ,ಶ್ರೀಮಂತ ಹೇಳಪ್ಪ ಮರ್ತೂರ್ ಹಲವಾರು ಸಮಾಜದ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜಯೋತ್ಸವದಲ್ಲಿ ಭಾಗಿಯಾದರು.