
ದುರುಗಪ್ಪ ಹೊಸಮನಿ
ಲಿಂಗಸುಗೂರು,ಜು.೨೬-
ಪಟ್ಟಣದಲ್ಲಿ ಇರುವ ಬೆಂಗಳೂರು ಬೈಪಾಸ್ ರಸ್ತೆ ರಾಯಚೂರು ಮುಖ್ಯ ರಸ್ತೆ ಗುಲ್ಬರ್ಗ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಹೊಂಡ ನಿರ್ಮಾಣ ಆಗಿದೆ. ಆದರೆ ಚುನಾಯಿತ ಜನಪ್ರತಿನಿಧಿಗಳು ಜಾಣ ಕುರುಡರಾಗಿ ಮೌನವಾಗಿದ್ದಾರೆ.
ಅಭಿವೃದ್ಧಿ ಚಿಂತಕ ಶಾಸಕ ವಜ್ಜಲ್ ಮೌನ:
ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪ ಡಿ.ವಜ್ಜಲ್‌ರವರು ಅಭಿವೃದ್ಧಿ ಚಿಂತಕ ಎಂದು ಹೆಸರಾದರು ಕೂಡ ನಗರದ ರಸ್ತೆಗಳ ದುರಸ್ತಿ ಕಾಮಗಾರಿಗೆ ಮುಂದಾಗದದೆ ಇರುವುದು ಖೇದಕರ ವಿಷಯವಾಗಿದೆ ಇದಕ್ಕೆ ಮೌನ ವಹಿಸಿರುವುದು ನೋಡಿದರೆ ಜನತೆಗೆ ತಪ್ಪು ಸಂದೇಶ ರವಾನೆ ಯಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ರಸ್ತೆಗಳ ದುರಸ್ತಿ ಕಾರ್ಯ ಮಾಡಲು ಮುಂದಾಗದೆ ಇದ್ದರೆ ಶಾಸಕರು ಅಭಿವೃದ್ಧಿ ಚಿಂತಕ ಶಾಸಕ ಹೆಸರಿಗೆ ಕಳಂಕ ಬರುತ್ತದೆ ಕೂಡಲೇ ಶಾಸಕರು ಎಚ್ಚೆತ್ತುಕೊಂಡು ನಗರದ ರಸ್ತೆಗಳ ದುರಸ್ತಿ ಕಾರ್ಯ ಮಾಡಬೇಕು ಎಂಬುದು ನಾಗರಿಕರ ಒತ್ತಾಯಿಸಿದ್ದಾರೆ.
ಹೊನ್ನಳ್ಳಿ ರಸ್ತೆಯಿಂದ ಮಸ್ಕಿ ತಾಲ್ಲೂಕಿನ ಮುದ್ದಬಾಳ ಕ್ರಾಸ್ ವರೆಗೆ ರಸ್ತೆ ಟೆಂಡರ್ ಕಾಮಗಾರಿ ಮೇಲ್ದರ್ಜೆಗೆ ಏರಿಸಿ ಕಾಮಗಾರಿ ಪ್ರಾರಂಭ ವಾದರು ಕೂಡ ಇಲ್ಲಿಯವರೆಗೆ ಲಿಂಗಸುಗೂರ ನಗರದ ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ ಮಾಡದೆ ರಸ್ತೆಗಳಲ್ಲಿ ತಗ್ಗು ಗುಂಡಿಗಳ ತಾಣಗಳು ಚಿತ್ರಗಳು ಬಹುತೇಕ ಕಾಣಸಿಗುತ್ತವೆ.
ನಗರದ ಜನತೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆಲ್ಲಾ ಕಾರಣ ಅದಿಕಾರಿಗಳ ಬೇಜವಾಬ್ದಾರಿತನ ಆಡಳಿತವು ನಗರದ ರಸ್ತೆಗಳಲ್ಲಿ ಬಹುತೇಕ ಒಳ ರಸ್ತೆ ಹಾಳಾಗಿ ಹೋಗಿದೆ ಇಲ್ಲಿ ಪುರಸಭೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತು ಸಾರ್ವಜನಿಕರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಗ್ಗು ಗುಂಡಿಗಳ ಸಾಕ್ಷಿಯಾಗಿದೆ.
ಹದಗೆಟ್ಟಿರುವ ಪ್ರಮುಖ ರಸ್ತೆಗಳು. ದುರಸ್ತಿಗೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಗುಂಡಿ ಬಿದ್ದು ಪಟ್ಟಣದ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ರಸ್ತೆಗಳ ಮಾನ ಮುಚ್ಚಲು ಅದಿಕಾರಿಗಳ ನಿರ್ಲಕ್ಷ್ಯ:
ಪಟ್ಟಣದ ಪ್ರಮುಖ ರಸ್ತೆಗಳಾದ ಗುಲ್ಬರ್ಗ ರಸ್ತೆ ರಾಯಚೂರು ರಸ್ತೆ ಲಿಂಗಸುಗೂರ ಪಟ್ಟಣದ ಬೆಂಗಳೂರು ಬೈಪಾಸ ರಸ್ತೆ ಪ್ರಮುಖ ಸರ್ಕಲ್‌ಗಳಲ್ಲಿ ಗುಂಡಿ ಬಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ಒಡಾಡುವ ಬಸವ ಸಾಗರ ಸರ್ಕಲ್‌ಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಯಾವ ಕ್ಷಣದಲ್ಲಿ ಯಾವ ಅನಾಹುತವಾಗುತ್ತದೆ ಎಂದು ಜೀವ ಭಯದಲ್ಲಿ ಸಂಚಾರಿಸುವ ವಾಹನ ಸವಾರರು ಹಾಗೂ ಭಾರಿ ಪ್ರಮಾಣದ ವಾಹನಗಳು ಯಾವ ಅನಾಹುತಕ್ಕೆ ಒಳಗಾಗುತ್ತವೆ ರಸ್ತೆಗಳು ತೀವ್ರ ಹದಗೆಟ್ಟಿದ್ದು, ರಸ್ತೆಯಲ್ಲಿನ ಗುಂಡಿಗಳು ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತವೆ. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ರಸ್ತೆ ಸೇರಿದಂತೆ ಬಹಳಷ್ಟು ಒಳ ರಸ್ತೆಗಳು ಗುಂಡಿ ಬಿದ್ದಿದ್ದು, ಜನರು ಭಯದಲ್ಲಿ ಓಡಾಡುವಂತಾಗಿದೆ. ರಸ್ತೆಗಳ ಮಾನ ಮುಚ್ಚಲು ಅದಿಕಾರಿಗಳ ನಿರ್ಲಕ್ಷ್ಯ ದಿಂದ ಬೇಜವಾಬ್ದಾರಿತನ ಆಡಳಿತಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.
ದಿನದಿನದಿಂದ ದಿನಕ್ಕೆ ನಗರ ಸಾಕಷ್ಟು ಬೆಳೆಯುತ್ತಿದೆ. ಹೀಗಾಗಿ ನಗರದಲ್ಲಿ ವಾಹನ ದಟ್ಟಣೆ ಸಾಮಾನ್ಯ. ಆದರೆ, ನಗರದ ರಸ್ತೆಯಲ್ಲಿ ಸೃಷ್ಟಿಯಾಗಿರುವ ದೊಡ್ಡ ಗುಂಡಿಗಳಿಂದ ಚಾಲಕರು ಜೀವಭಯದಿಂದ ವಾಹನ ಚಾಲನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ತುಂಬ ಗುಂಡಿಮಯ: ನಗರದ ಕೆಲ ಪ್ರಮುಖ ರಸ್ತೆಗಳು ಸೇರಿದಂತೆ ಒಳ ರಸ್ತೆಗಳಲ್ಲಿ ರಸ್ತೆಗಳನ್ನು ಹುಡುಕಿ ವಾಹನ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ. ಹೀಗಾಗಿ ರಸ್ತೆ ಮಧ್ಯೆ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ಅಸಾಧ್ಯದ ಪರಿಸ್ಥಿತಿ ತಂದೊಡ್ಡಿವೆ. ನೀರು ಹರಿದುಹೋಗಲು ಜಾಗವಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ.
ರಸ್ತೆಯ ಮೇಲ್ಪದರಗಳು ಕಿತ್ತು ಮತ್ತೆ ಗುಂಡಿ ಬಿದ್ದಿದ್ದವು. ಇತ್ತೀಚೆಗೆ ನಿರಂತರವಾಗಿ ಒಂದು ವಾರದಿಂದ ಸುರಿದ ಮಳೆಯಿಂದ ಅಲ್ಲಲ್ಲಿ ಗುಂಡಿಗಳಾಗಿದೆ. ಅಧಿಕಾರಿಗಳು ಅವುಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿಲ್ಲ. ನಿತ್ಯ ಈ ರಸ್ತೆಗಳಲ್ಲಿ ಓಡಾಟ ಮಾಡಿದರೂ ದುರಸ್ತಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ರಸ್ತೆ ದುರವಸ್ಥೆ ಬಗ್ಗೆ ಜನಪ್ರತಿನಿಧಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ. ನಗರದ ರಸ್ತೆಗಳ ದುರಸ್ತಿ ಕಾರ್ಯ ಮಾಡಲು ಅಧಿಕಾರಿಗಳು ಮುಂದಾಗುತ್ತಾರೆ ಇಲ್ಲವೊ ನಗರದ ಜನತೆ ಕಾದುನೋಡಬೇಕಾಗಿದೆ.?