ಜಾಣತನದಿಂದ ರೈತರನ್ನು ನಾಶಮಾಡಲು ಕೆಂದ್ರ ಸರಕಾರ ಹೊಂಚು ಹಾಕುತ್ತಿದೆಃ ಶ್ರೀನಾಥ್ ಪೂಜಾರಿ

ವಿಜಯಪುರ, ಮೇ.27-ಅನ್ನ ನೀಡುವ ರೈತ ಅರ್ಧ ವರ್ಷ ಹಲವಾರು ತಿಂಗಳುಗಳಿಂದಲೇ ಬೀದಿಯಲ್ಲಿ ಕೂತಿದ್ದರೂ, ಐನೂರಕ್ಕೂ ಹೆಚ್ಚು ರೈತರ ಪ್ರಾಣ ತೆತ್ತಿದ್ದರೂ, ಕೊರೊನಾ ಪಿಡುಗಿನಲ್ಲಿ ಅನ್ನ ನೀಡುವವರನ್ನು ದೆಹಲಿ ಬೀದಿಯಲ್ಲಿ ಬಿಟ್ಟು, ರೈತರೊಂದಿಗೆ ಮಾತುಕತೆಯನ್ನು ಸಹ ಮಾಡದಂತಹ ಬಹಳ ಜಾಣತನದಿಂದ ರೈತರನ್ನು ನಾಶಮಾಡಲು ಕೆಂದ್ರ ಸರಕಾರ ಹೊಂಚು ಹಾಕುತ್ತಿದೆ ಎಂದು ನ್ಯಾಯವಾದಿ ಶ್ರೀನಾಥ್ ಪೂಜಾರಿ ಅಕ್ರೊಶ ವ್ಯಕ್ತ ಪಡಿಸಿದರು.
ಬುಧವಾರ ದೆಹಲಿಯಲ್ಲಿ ರೈತರು ಕರೆಕೊಟ್ಟಿರುವ ಮೇ 26 ಕರಾಳ ದಿನ ಬೆಂಬಲಿಸಿ ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ತಮ್ಮ ಹೊಲದಲ್ಲಿ ಎತ್ತುಗಳೊಂದಿಗೆ ಕಪ್ಪು ಬಾವುಟ ಪ್ರದರ್ಶಿಸಿ ಘೊಶಣೆ ಕೂಗಿ ಪ್ರತಿಭಟನೆ ನಡೆಸಿದ ಅವರು, ರೈತರು ತಮ್ಮ ಹಕ್ಕು ಉಳಿಸಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ಬಂದಿದ್ದು ನಾಚಿಕೆ ಪಡುವ ವಿಷಯ. ದೇಶದ ಬೆನ್ನೆಲುಬ ರೈತ ಅಂತಹ ರೈತನನ್ನು ಸರಕಾರ ಇಂದು ಬೀದಿಗೆ ತಂದಿದೆ. ಅವನ ಕಷ್ಟವನ್ನು ಕೇಳದಂತೆ ಕಿವಿ, ಕಣ್ಣು ಮುಚ್ಚಿಕೊಂಡು ಕುಳಿತಿರುವ ಕೆಂದ್ರ ಸರಕಾರಕ್ಕೆ ಧಿಕ್ಕಾರ. ಈ ದಿನವನ್ನು ಕರಾಳ ದಿನವಾಗಿ ಆಚರಿಸುತ್ತಿರುವ ರೈತರೊಂದಿಗೆ ನಾವಿದ್ದೇವೆ, ಕೂಡಲೆ ಕೆಂದ್ರ ಸರಕಾರ ರೈತರ ಬೇಡಿಕೆ ಈಡೇರಿಸಿ ಭಾರತದ ಜನರ ವಿರುದ್ಧ ನಿಲ್ಲುವುದನ್ನು ಬಿಡಬೇಕೆಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಬಸವ ಸೈನ್ಯದ ಜಿಲ್ಲಾ ಪ್ರಮುಖ ಶಾಂತವಿರ ತಾಲಬಾವಡಿ ಮಾತನಾಡಿ, ಭಾರತ ದೇಶದ ರೈತರನ್ನು ಭಿಕ್ಷುಕರಂತೆ ಕಾಣುತ್ತ, ದೇಶವನ್ನು ಬಂಡವಾಳಶಾಹಿಗಳಿಗೆ ಮಾರಾಟಮಾಡಲು ಹೊರಟಿರುವ ಈ ಕೆಂದ್ರ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮತ್ತೊರ್ವ ನಾಯಕರಾದ ದೆವು ದೊಡ್ಡಮನಿ ಮಾತನಾಡಿ, ನಮ್ಮ ದೇಶ ಕೃಷಿ ಆಧಾರಿತ ದೇಶವಾಗಿದ್ದು ಕೃಷಿಯನ್ನು ಕನಿಷ್ಠವೆಂದು ಕೃಷಿ ಕ್ಷೇತ್ರವನ್ನು ನಾಶಮಾಡಲು ಹೊರಟಿರುವ ಈ ಕೆಂದ್ರ ಸರಕಾರವೇ ನಾಶವಾಗಿ ಹೊಗಲಿದೆ ಎಂದು ಅಕ್ರೊಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಕೆಶ ಕುಮಟಗಿ, ಅಬ್ದುಲ್ ಹಮೀದ್ ಇನಾಮದಾರ ಶರಣು ಅರಳಗೂಂಡಗಿ, ಸತೀಶ ಮುಂತಾದವರು ಉಪಸ್ಥಿತರಿದ್ದರು.