ಜಾಗ ಒತ್ತುವರಿ ಕ್ರಮಕ್ಕೆ ಒತ್ತಾಯ

ರಾಯಚೂರು, ನ.೮, ಬಸವೇಶ್ವರ ವೃತ್ತ ಸಂಕಲ್ಪ ಆಸ್ಪತ್ರೆಯ ಎದುರುಗಡೆ ಕಂದಕ ಜಾಗವನ್ನು ಆಶೋಕಟ್ರಾನ್ಸ್‌ಪೋರ್ಟ್ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಭಾರತ ಡಾ.ಬಿ ಆರ್ ಅಂಬೇಡ್ಕರ್ ಸೇನ್ಯ ಪದಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಮನವಿ ಒತ್ತಾಯಿಸಿದರು.
ನಗರದ ಬಸವೇಶ್ವರ ವೃತ್ತ ಸಂಕಲ್ಪ ಆಸ್ಪತ್ರೆಯ ಎದುರುಗಡೆ ಅಶೋಕ ಟ್ರಾನ್ಸ್‌ಪೋರ್ಟ್ ಮಾಲೀಕರು ಸಾರ್ವಜನಿಕ ಕಂದಕ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ರಾಜಕಾಲುವೆಯನ್ನು ಮಳೆಗಾಲ ಸಮಯದಲ್ಲಿ ಮಳೆ ನೀರು ಸುಗಮವಾಗಿ ಹರಿಯುವಲ್ಲಿ ತುಂಬಾ ತೊಂದರೆಯಾಗುತ್ತದೆ. ಇದರಿಂದ ಮಳೆ ನೀರು ಮನೆಗಳಿಗೆ, ರಸ್ತೆಯ ಮೇಲೆ ನುಗ್ಗುವ ಸಂಭವ ಹೆಚ್ಚಾಗಿರುತ್ತದೆ. ಸಾರ್ವಜನಿಕ ರಾಜಕಾಲುವೆ ಒತ್ತುವರಿ ಮಾಡಿದ ಅಶೋಕ ಟ್ರಾನ್ಸ್‌ಪೋರ್ಟ್ ಅವರ ಪರವಾನಿಗೆಯನ್ನು ರದ್ದುಗೊಳಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಲಾಲಪ್ಪ, ನರಸಪ್ಪ ಹನುಮಂತ ಇತರರು ಇದ್ದರು.