ಜಾಗೃತ ಮಹಿಳಾ ಸಮಾವೇಶ

ಹುಬ್ಬಳ್ಳಿ,ಡಿ1 : ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ಜಾಗೃತ ಮಹಿಳೆಯರ ಧಾರವಾಡ ವಿಭಾಗದ ವತಿಯಿಂದ ‘ಶಕ್ತಿ ಸಂಚಯ’ ಬೃಹತ್ ಮಟ್ಟದ ಜಾಗೃತ ಮಹಿಳಾ ಸಮಾವೇಶ ಕಾರ್ಯಕ್ರಮವನ್ನು ಡಿಸೆಂಬರ್ 3 ರಂದು ಬೆ. 9.30 ರಿಂದ ನಗರದ ಗೋಕುಲ್ ರಸ್ತೆಯ ವಾಸವಿ ಮಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಕೃತಿ ಟ್ರಸ್ಟ್ ನ ಕಾರ್ಯದರ್ಶಿ ವೇದಾ ಕುಲಕರ್ಣಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಜಾನಪದ ಕಲಾವಿದರಾದ ಶ್ರೀಮತಿ ಪಾರ್ವತವ್ವ ಹೊಂಗಲ ಅವರು ನೆರವೇರಿಸಲಿದ್ದಾರೆ.

ಸ್ಥಾನಿಯ ಮಹಿಳೆಯರ ಸ್ಥಿತಿಗತಿ, ಪ್ರಶ್ನೆ ಮತ್ತು ಪರಿಹಾರದ ಕುರಿತು ಗೋಷ್ಟಿಗಳು ಜರುಗಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಸಂಚಯದ ಪ್ರಾಂತ ಸಂಯೋಜಕಿ ಆಶಾ ನಾಯಕ, ವಿಭಾಗ ಸಂಯೋಜಕಿ ಶಾಂತಾ ವರ್ಣೇಕರ್, ಸಹ ವಿಭಾಗ ಸಂಯೋಜಕಿ ಡಾ ಸುನಂದಾ ಉಪಸ್ಥಿತರಿದ್ದರು.