ಜಾಗೃತಿ ಗೀತೆಗಳು, ಬೀದಿ ನಾಟಕ ಪ್ರದರ್ಶನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.07: ಭಾರತ  ಸರಕಾರ ಚುನಾವಣಾ ಆಯೋಗ  ಕರ್ನಾಟಕ ಸರ್ಕಾರ ಜಿಲ್ಲಾಡಳಿತ ,ಜಿಲ್ಲಾ ಪಂಚಾಯಿತಿ ವಿಜಯನಗರ ಹಾಗೂ ತಾಲೂಕು ಪಂಚಾಯಿತಿ ವಿಜಯನಗರ ಜಿಲ್ಲೆ  ,ಗ್ರಾಮ ಪಂಚಾಯತಿಯ ಹಂಪಿ ವತಿಯಿಂದ, ಹಂಪಿ ವಿರೂಪಾಕ್ಷೇಶ್ವರ ಜಾತ್ರ ಪ್ರಯುಕ್ತ ಮತದಾನದ ಮಹತ್ವ ಕುರಿತು ,ಚಿಗುರು ಕಲಾತಂಡದ ವತಿಯಿಂದ, ಬೀದಿ ನಾಟಕ ಜಾಗೃತಿ ಗೀತೆಗಳು ಮೂಲಕ ಕಾರ್ಯಕ್ರಮ ನಡೆಸಿಕೊಡಲಾಯಿತು ,
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹೊಸಪೇಟೆ ತಾ.ಪಂ  ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ್ ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಪಿಡಿಓ ಉಮೇಶ್ ಜಾಹಾಗೀರದಾರ್ ವಹಿಸಿಕೊಂಡರು ಹಂಪಿ, ಜಿ ಡಿ ಹೆಮಗಿರಿ  ಹನುಮಂತ,  ವಿರೂಪಾಕ್ಷಿ,, ನಾಗರಾಜ್, ತಾ. ಪಂ., ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಕಲಾವಿದರಾದ ಹುಲುಗಪ್ಪ ಎಸ್ಎಂ ಹನುಮಯ್ಯ ತಿಮ್ಮಲಾಪುರ ಆನಂದ ಕಲ್ಕಂಬ ಎಚ್ ಸುಂಕಪ್ಪ ಹೊಸ ಯರೆಗುಡಿ ಅಶ್ವಿನಿ ಹೇಮಂತ್ ರಾಜು ಇನ್ನು ಮುಂತಾದ ಕಲಾವಿದರಿಂದ ಕಾರ್ಯಕ್ರಮ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು.