ಜಾಗೃತಿ ಅಭಿಯಾನಕ್ಕೆ ಸಂಗೀತ ನಿರ್ದೇಶಕ ಚಾಲನೆ

ಬೆಂಗಳೂರು,ಮಾ. ೩೦- ಗೋವಿಥ್‌ರ್‍ಯಾಪಿಡೊ ಅಭಿಯಾನಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಮನ್ ಪಂತ್ ಗೀತೆಗೆ ಧ್ವನಿಯಾಗುವ ಮೂಲಕ ವಿನೂತನ ಚಾಲನೆ ನೀಡಿದ್ದಾರೆ.

ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್, ಜೈಪುರ, ಗೌಹಾಟಿ ಮತ್ತು ಕೊಲ್ಕತಾದಂತಹ ಮುಂಚೂಣಿಯ ಮೆಟ್ರೋಗಳಲ್ಲಿ ಜಾಗೃತಿ ಮೂಡಿಸುವ ಗೀತೆ ಇದಾಗಿದೆ.

ಈ ಅಭಿಯಾನ ಬೈಕ್ ಟ್ಯಾಕ್ಸಿಯ ಅನುಕೂಲಗಳನ್ನು ಕುರಿತು ಅರಿವನ್ನು ಹೆಚ್ಚಿಸುವ ಗುರಿ ಹೊಂದಿದೆ. ಅನುಕೂಲ, ಕೈಗೆಟುಕಬಲ್ಲತೆ, ಪ್ರವೇಶಸಾಧ್ಯತೆ ಮತ್ತು ಲಭ್ಯತೆಗಳ ನಾಲ್ಕು ಬಳಕೆಯ ಮಾನದಂಡ ಆಧರಿಸಿ ಈ ಜಾಗೃತಿ ಅಭಿಯಾನ ಆರಂಭವಾಗಲಿದೆ

ಪ್ರತಿನಿತ್ಯದ ಪ್ರಯಾಣಿಕರು ಪ್ರತಿ ನಗರದಲ್ಲಿ ಸುರಕ್ಷಿತ ಮತ್ತು ಕೈಗೆಟುಕುವ ಆಯ್ಕೆ ಎದುರು ನೋಡುತ್ತಿರುವ ಹಿನ್ನೆಲೆಯಲ್ಲಿ ಬೈಕ್ ಟ್ಯಾಕ್ಸಿ ಒದಗಿಸುವ ಹಲವು ಅನುಕೂಲಗಳ ಕುರಿತು ಅರಿವನ್ನು ಮೂಡಿಸುವುದಾಗಿದೆ ಎಂದು ರಾಪಿಡ್ ನಅಮಿತ್ ವರ್ಮಾ ಹೇಳಿದ್ದಾರೆ.ಪ್ರಯಾಣಿಕರು ಅವರ ಪ್ರಯಾಣಕ್ಕೆ ಹೆಚ್ಚಿನ ಗಂಟೆಗಳು ಕಾಯಲಾರರು ಮತ್ತು ಅವರ ತಾಣ ತಲುಪಲು ಜಗಳವಾಡುವ ಅಗತ್ಯವಿಲ್ಲ ಮತ್ತು ಸರಳವಾಗಿ ರೈಡ್ ಬುಕ್ ಮಾಡಿದರೆ ಅವರು ಅತ್ಯಂತ ದಕ್ಷ ಮತ್ತು ಸುರಕ್ಷಿತ ರೀತಿಯಲ್ಲಿ ತಮ್ಮ ತಾಣ ಸೇರಿಕೊಳ್ಳುತ್ತಾರೆ”