
ಅರಕೇರಾ,ಆ.೦೬- ಸಮಾಜದಲ್ಲಿ ಜಾಗೃತಿಯಿಂದ ಜನರು ಬದುಕಬೇಕು. ನಮಗೆ ನೀಡಿದ ಹಕ್ಕುಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗುರುಲಿಂಗಮ್ಮ ಹೇಳಿದರು.
ಪಟ್ಟಣದ ಹಿರೇಮಠದ ಅಂಗಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾಜಿಕ ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯವಿವಾಹ, ಸ್ವಚ್ಛತೆ, ಶೌಚಾಲಯ, ನೀರನ ಮಹತ್ವವನ್ನು ಬೀದಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಕಲಿಯುವ ಮತ್ತು ನಲಿಯುವ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳಿಸಿ. ಬಾಲ್ಯ ವಿವಾಹ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಾಮಾರ್ಥ್ಯದ ಮೇಲೆ ಅಡ್ಡಪರಿಣಾಮ ಬೀರುತ್ತವೆ. ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅಸ್ವಚ್ಛತೆಯಿದ್ದರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಬಹಿರ್ದೆಸೆಗೆ ಅವಕಾಶ ಕೊಡಬಾರದು. ಅನಾವಶ್ಯಕವಾಗಿ ನೀರನ್ನು ಹೊರಬಿಡಬಾರದು. ಮಿತವಾಗಿ ನೀರು ಬಳಸಿ ಗ್ರಾಮವನ್ನು ಅಭಿವೃದ್ಧಿಪಡಿಸಬೇಕು ಎಂದು ಜನದ್ವನಿ ಕಲಾತಂಡದಿಂದ ಬೀದಿ ನಾಟಕದಲ್ಲಿ ವಿವಿಧ ಚಟುವಟಿಕೆಗಳನ್ನು ಮಾಡುವ ಮೂಲಕ ಜಾಗೃತಿ ಮೂಡಿಸಿದರು.
ಪ್ರಮುಖರಾದ ಮೃತ್ಯುಂಜಯ್ಯ ಸ್ವಾಮಿ ಹಿರೇಮಠ, ಎಸ್‌ಕೆಡಿಆರ್‌ಡಿಪಿ ವಲಯ ಮೇಲ್ವಿಚಾರಕ ಅಮೀತ್, ಕಲಾತಂಡದ ಬೂದೆಪ್ಪ ಮ್ಯಾತ್ರಿ, ಯಲ್ಲಪ್ಪ ಮಲ್ಲದಕಲ್, ಸಂಗಮೇಶ ಮ್ಯಾತ್ರಿ ಗಬ್ಬೂರು, ಮಲ್ಲಮ್ಮ ಕಲ್ಮಲಾ, ಗಂಗಾಧರ, ಸೇವಾ ಪ್ರತಿನಿಧಿ ಶಾರದಮ್ಮ, ಬಸ್ಸಮ್ಮ ಇತರರಿದ್ದರು.