ಜಾಗೃತಿಯಿಂದ ಕಾರ್ಯನಿರ್ವಹಿಸಿ

ಸಿರವಾರ.ಜ.೫- ವಿದ್ಯುತ್ ಕೆಲಸ ನಿರ್ವಹಿಸುವಾಗ ಜಾಗೃತಿಯಿಂದ ನಿರ್ವಹಿಸಬೇಕು ಎಂದು ಸಿರವಾರ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಭನ್ನಯ್ಯ ಹೇಳಿದರು.
ಪಟ್ಟಣದ ಜೆಸ್ಕಾಂ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುವ ಮಾರ್ಗದಾಳುಗಳಿಗೆ ಇಲಾಖೆ ವತಿಯಿಂದ ನೀಡುವ ಸಮವಸ್ತ್ರ ಹಾಗೂ ಸಲಕರಣೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ವಿದ್ಯುತ್ ಎಲ್ಲಾರಿಗೂ ಇಂದು ಅವಶ್ಯಕವಾಗಿ ಬೇಕಾಗಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯವಾದಗ ಹಾಗೂ ವಿದ್ಯುತ್ ಕೊಡುವ ಒತ್ತಡದಲ್ಲಿ ಕೆಲಸ ಮಾಡುವಾಗ ಕೇಲ ಸಂದರ್ಭದಲ್ಲಿ ಜಾಗುರುಕತೆ ವಹಿಸದೆ ಇರುವುದರಿಂದ ಅನೇಕ ಕಡೆ ಅಪಘಾತಗಳು ಸಂಭವಿಸುತ್ತಿವೆ.
ಮಾರ್ಗದಾಳುಗಳು ವಿದ್ಯುತ್ ಲೈನ್‌ಗಳ ಮಾಹಿತಿ ತಿಳಿದು ಕೆಲಸ ಮಾಡಿ. ಗ್ರಾಹಕರೆ ದೇವರು ಅವರೊಂದಿಗೆ ಉತ್ತಮ ಸಂಬಂದ ಇರಬೇಕು ಎಂದರು. ಜೆಟಿಓ ಮೋಹನ ಸಿಂಗ್, ಪ್ರಭಾರಿ ಶಾಖಾಧಿಕಾರಿ ಸೈಯದ್ ಸಾಬ್, ಮಾರ್ಗದಾಳುಗಳಾದ ಚಂದ್ರಮೋಹನ್, ಪ್ರವೀಣ್, ದುರುಗಪ್ಪ, ಬಸವರಾಜ, ಅಶೋಕ, ಸಂತೋಷ, ಪಾಷ ಸೇರಿದಂತೆ ಇನ್ನಿತರರು ಇದ್ದರು.