ಜಾಗೃತತೆಯಿಂದ ರೋಗ ತಡೆಗಟ್ಟಲು ಸಾಧ್ಯ; ಡಾ.ಪ್ರಭು ಸಾಹುಕಾರ್.               

ಸೊರಬ.ಮೇ.18: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ರೆಡ್ ರಿಬ್ಬನ್ ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ರೆಡ್ ಕ್ರಾಸ್ ಯುವ ಘಟಕ, ಮತ್ತು ಸಾರ್ವಜನಿಕ ಆಸ್ಪತ್ರೆ ಇವರುಗಳ ಸಹಯೋಗದಲ್ಲಿ ರಕ್ತದಾನ ಹಾಗೂ ಹೆಚ್.ಐ.ವಿ. ಏಡ್ಸ್ ನಿಯಂತ್ರಣ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು  ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪ್ರಭು ಸಾಹುಕಾರ್  ಉದ್ಘಾಟಿಸಿ ಮಾತನಾಡಿದ ಅವರು ಹೆಚ್.ಐ.ವಿ. ಸೊಂಕು ವಿದೇಶದಲ್ಲಿ ಮೊದಲು ಕಂಡು ಬಂದಿತು,ಅ ಸುರಕ್ಷಿತ  ಲೈಂಗಿಕ ಕ್ರಿಯೆಯಿಂದಾಗಿ ಈ ರೋಗ  ಹರಡುತ್ತದೆ ಇದನ್ನು  ತಡೆಯಲು  ಅನೇಕ  ಮಾರ್ಗಗಳಿವೆ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ  ಜಾಗೃತಗೊಳ್ಳುವ ಅಗತ್ಯವಿದೆ  ಎಂದರು.ಈ ಕುರಿತು ವಿದ್ಯಾರ್ಥಿಗಳೊಂದಿಗೆ ಈ ಕುರಿತು ಸಂವಾದ ನಡೆಸಿದರು.ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಎನ್ .ಹೇಮಲತಾ,ಮೇಘರಾಜ್ ಚನ್ನಾಪುರ, ಬಸವರಾಜ್.ಆರ್.ವಿ, ಎನ್ಎಸ್ಎಸ್ ಕಾರ್ಯಕ್ರಮ ಧಿಕಾರಿಗಳಾದ ಶಂಕರ್ ನಾಯಕ್,ಡಾ.ಮೋಹನ್ ಕುಮಾರ್, ಡಾ.ನೇತ್ರಾವತಿ, ಸಂತೋಷ್, ಮಹೇಶ್ವರಿ,ರಾಜಶೇಖರ್ ಗೌಡ, ರಾಘವೇಂದ್ರ, ಹನುಮಂತಪ್ಪ, ಪವಿತ್ರ,ಜಾಹೀರ್ ಖಾನ್, ಮಂಜುನಾಥ್ ಸೇರಿದಂತೆ ಮೊದಲಾದವರಿದ್ದರು.