ಜಾಗಿರ್ ವೆಂಕಟಾಪುರ:ಮಾಸ್ಕ್ ಸಾನಿಟೈಸರ್ ವಿತರಣೆ

ರಾಯಚೂರು, ಮೇ.೨- ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ದೆಹಲಿ. ರಾಯಚೂರು ಜಿಲ್ಲಾ ಘಟಕದ ವತಿಯಿಂದ. ತಾಲೂಕಿನ ಜಾಗಿರ್ ವೆಂಕಟಾಪುರ ಗ್ರಾಮದಲ್ಲಿ ಫೇಸ್ ಮಾಸ್ಕ್ ಮತ್ತು ಸಾನಿಟೈಸರಗಳನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸೈಯದ್ ಸಾದಿಕ್ ಮಾತನಾಡಿ.ಕೂರೊನಾ ೨ ನೇ ಅಲೆ ವೇಗವಾಗಿ ಹರಡುತ್ತಿದ್ದು. ಜನರು ಅನಗತ್ಯವಾಗಿ ಹೊರಗಡೆ ಓಡಡಬಾರದು.ತಪ್ಪದೆ ಫೇಸ್ ಮಾಸ್ಕ್ ಧರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಾಗೇಶ ಸಾಹುಕಾರ, ತಾಲೂಕ್ ಅದ್ಯಕ್ಷ ಎಂ. ಜೆ ಶಾಹಿದ್, ತಾಲೂಕ್‌ಉಪಅಧ್ಯಕ್ಷ ಎಂ.ಡಿ ಆಏಜಾಜ್, ಉಡಮಗಲ್ ಪಂಚಾಯತಿ ಕಾರ್ಯದರ್ಶಿ ಡಿ.ಶಾಂತಪ್ಪ,ಗ್ರಾಮ ಪಂಚಾಯತಿ ಸದಸ್ಯರಾದ ಮಹಾರಾಜ ಭಗವಾನ್, ಸೋಮನಗೌಡ,ಹನುಮಂತ, ಪದಾಧಿಕರಿಗಳು ಮೋಹನ್ ಸ್ವಾಮಿ ,ಶರಣಪ್ಪ, ಎಸ್,ಕೆ,ಎಸ್,ಗ್ರಾಹಕ ಸೇವಾ ಕೇಂದ್ರ ,ಮಹಿಬೂಬ್ ಮುಲ್ಲಾರ್,ಸೇರಿದಂತೆ ಇತರರು ಉಪಸ್ಥಿತರಿದ್ದರು.