ಜಾಗಿಂಗ್ ಸೋಗಿನಲ್ಲಿ ಬಂದು ಮಧ್ಯರಾತ್ರಿ ಚಿನ್ನದ ಅಂಗಡಿ ದೋಚಿದ ಕಳ್ಳರು

ಕಲಬುರಗಿ,ಜು.27: ಕಳ್ಳರು ಜಾಗಿಂಗ್ ಸೋಗಿನಲ್ಲಿ ಬಂದು ಚಿನ್ನದ ಅಂಗಡಿಗೆ ಕನ್ನ ಹಾಕಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ವರದಿಯಾಗಿದೆ. ಅಂಗಡಿ ಶೆಟರ್ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಕದ್ದೊಯ್ದಿರುವ ದೃಶ್ಯಗಳು ಸಿಸಿಟಿವ್ಹಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಾಡಿ ಪಟ್ಟಣದಲ್ಲಿನ ಸಂತೋಷ್ ಮಾಳಿ ಎಂಬುವವರಿಗೆ ಸೇರಿದ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳರು ದುಷ್ಕøತ್ಯ ಎಸಗಿದ್ದಾರೆ. ಗುರುವಾರ ಬೆಳಗಿನ ಜಾವ 3-30ರ ಸುಮಾರಿಗೆ ಜಾಗಿಂಗ್ ಸೋಗಿನಲ್ಲಿ ಬಂದಿದ್ದ ಖದೀಮರು ಅಂಗಡಿಯ ಶೆಟರ್ ಮುರಿದು ಇಬ್ಬರು ಕಳ್ಳರು ಒಳ ನುಸುಳಿದ್ದಾರೆ. ನಂತರ ಲಕ್ಷಾಂತರ ರೂ.ಗಳ ಮೌಲ್ಯದ ಚಿನ್ನಾಭರಣ ಕದ್ದು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳರು ನಿರ್ಭಯವಾಗಿ ಕಳ್ಳತನ ಮಾಡಿದ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಪೋಲಿಸರು ಪರಿಶೀಲಿಸಿದರು. ಈ ಕುರಿತು ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಕಳ್ಳರ ಬಂಧನಕ್ಕೆ ಪೋಲಿಸರು ಜಾಲ ಬೀಸಿದ್ದಾರೆ.