ಜಾಗತೀಕ ಮಟ್ಟದಲ್ಲಿ ಕೊರೋನಾ ಮಾನವ ಕುಲಕ್ಕೆ ಮಾರಕವಾಗಿ ಮುಗ್ದ ಜೀವಿಗಳನ್ನು ಬಲಿ ತೆಗೆದುಕೊಂಡಿದೆ: ಹಾಸಿಂಪೀರ ವಾಲಿಕಾರ

ವಿಜಯಪುರ, ಏ.22-ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಕೊರೋನಾ 2ನೇ ಅಲಿಯ 3ನೇ ಜಾಗೃತಿ ಅಭಿಯಾನ ಹಾಗೂ ಉಚಿತ ಮಾಸ್ಕ ವಿತರಣೆಯನ್ನು ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಜರುಗಿತು.
ಕೊರೋನಾ ಅಭಿಯಾನವನ್ನು ಉದ್ಘಾಟಿಸಿ ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ಹಾಸಿಂಪೀರ ವಾಲಿಕಾರ ಮಾತನಾಡಿ ಇಂದು ಜಾಗತೀಕ ಮಟ್ಟದಲ್ಲಿ ಮಹಾಮಾರಿ ಕೊರೋನಾ ರೋಗವು ಮಾನವ ಕುಲಕ್ಕೆ ಮಾರಕವಾಗಿ ಲಕ್ಷಾಂತರ ಮುಗ್ದ ಜೀವಿಗಳನ್ನು ಬಲಿ ತೆಗೆದುಕೊಂಡಿದ್ದು ಮಾನವ ಜನಾಂಗದ ನೈಜ ಬದುಕನ್ನು ತಲ್ಲಣಗೊಳಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ ಎಂದರು.
ಈ ವಿಷಯವನ್ನು ಗಣನೀಗೆ ತೆಗೆದುಕೊಂಡು ಜನಪರವಾಗಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕಗಳನ್ನು ವಿತರಿಸುವ ಹಾಗೂ ಅಭಿಯಾನದ ಜಾಗೃತಿ ಮೂಡಿಸುವ ಸಂಕಲ್ಪ ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಜನಪರ ನಿಲುವುವನ್ನು ಮುಕ್ತ ಕಂಠದಿಂದ ಹೊಗಳಿ ಜಿಲ್ಲೆಯ ಅನೇಕ ಪ್ರಗತಿಪರ ಸಂಘಟನೆಗಳು ಈ ದಿಕ್ಕಿನಲ್ಲಿ ಜನಪರ ಸೇವೆಗೈಯ್ಯಲು ಮುಂದೆ ಬರಲು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ ಉಚಿತವಾಗಿ ಸುಮಾರು 5 ಸಾವಿರ ಮಾಸ್ಕಗಳನ್ನು ವಿತರಿಸಿ ಈ ಮಹಾಮಾರಿಯನ್ನು ದೂರಗೊಳಿಸಲು ಹಾಗೂ ಜೀವಹಾನಿಗಳಿಂದ ಎಚ್ಚರ ವಹಿಸಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕನ್ನು ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಮ್ಮ ಹಾಗೂ ಇನ್ನಿತರ ಜೀವಿಗಳಿಗೆ ಸಹಾಯಕಾರಿಯಾಗಲಿ ಎಂದು ಜನಜಾಗೃತಿ ಮೂಡಿಸುವ ಚಿಂತನಪರ ಮಾತನಾಡಿದರು.
ಅಭಿಯಾನದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಗೌರವಾಧ್ಯಕ್ಷರಾದ ನ್ಯಾಯವಾದಿ ಎಂ.ಎಂ. ಖಲಾಸಿ, ವಿಜಯಕುಮಾರ ಘಾಟಗೆ, ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ವೇದಿಕೆ ಮುಖಂಡರಾದ ರಾಮನಗೌಡ ಮುಚ್ಚಂಡಿ, ವಸಂತರಾವ ಕುಲಕರ್ಣಿ, ಶರಣಗೌಡ ಬಿರಾದಾರ, ಸಾಹೇಬಲಾಲ ನದಾಫ, ಎಲ್ಲಪ್ಪ ಮಾದರ, ಕಾಶೀನಾಥ ಕನ್ನೂರ, ಸಲೀಮ ಮಮದಪೂರ, ಎ.ಎಂ. ಮಮದಾಪೂರ, ಶ್ರೀಕಾಂತ ಹೊಸಮನಿ, ಮಂಜುನಾಥ ಮನಗೊಂಡ, ಸಂಗಮೇಶ ಭಜಂತ್ರಿ, ಆನಂದ ಬಡಚಿ, ಶಂಕ್ರೆಪ್ಪ, ಕಿಶೋರ ಹೂಗಾರ, ನಾಮದೇವ ಬಂಡೇಕರ, ಲಕ್ಷ್ಮಣ ಹೊಸಪೇಟಿ, ರಂಜಿತ ನಡುವಿನಮನಿ, ಸತೀಶ ಭಜಂತ್ರಿ, ಮಹಾದೇವ ಹತ್ತಿಕಾಳ, ಭೀಮರಾಯ ಮುರುಗೋಡ ಉಪಸ್ಥಿತರಿದ್ದರು.