ಜಾಗತೀಕರಣದ ನೆಪ : ಹಟ್ಟಿ ಗೋಲ್ಡ್ ಕಂಪನಿ ಖಾಸಗೀಕರಣ – ಬಿಎಸ್ಪಿ ಖಂಡನೆ

ಮಾನ್ವಿ.ಮೆ.೨೮- ಜಾಗತೀಕರಣ ನೆಪದಲ್ಲಿ ಹಟ್ಟಿ ಗೋಲ್ಡ್ ಕಂಪೆನಿಯನ್ನು ಖಾಸಗೀಕರಣಗೊಳಿಸಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ರಾಯಚೂರು ಜಿಲ್ಲಾ ಬಹುಜನ ಸಮಾಜ ಪಕ್ಷ ಖಂಡಿಸುತ್ತಾ ತಹಶೀಲ್ದಾರ್ ಮುಖಾಂತರ ಮುರುಗೇಶ್ ನಿರಾಣಿ ಗಣಿ ಮತ್ತು ಭೂ ವಿಜ್ಞಾನ ಸಚಿವರು ಕರ್ನಾಟಕ ಸರಕಾರ ವಿಧಾನಸೌಧ ಇವರಿಗೆ ಮನವಿ ಮಾಡಲಾಯಿತು.
ನಂತರ ಮಾತನಾಡಿದ ರಾಯಚೂರು ಲೋಕಸಭಾ ಉಸ್ತುವಾರಿಗಳಾದ ಶ್ಯಾಮಸುಂದರ್ ಕುಂಬ್ದಾಳ ರವರು ಕರ್ನಾಟಕ ರಾಜ್ಯದಲ್ಲಿ ಖನಿಜ ಸಂಪತ್ತು ಗುರುತಿಸುವಿಕೆ ಹಾಗೂ ಹೊರತೆಗೆಯುವಿಕೆ ಸಂಬಂಧ ಸಚಿವರಾದ ತಾವುಗಳು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದಲ್ಲಿರುವ ಖನಿಜ ಸಂಪತ್ತನ್ನು ಗುರ್ತಿಸಲು ಹೇಳಿಕೆ ನೀಡಿದಾಗ ಹಟ್ಟಿ ಚಿನ್ನದ ಗಣಿಯನ್ನು ಜಾಗತಿಕವಾಗಿ ಗುರುತಿಸಲು ಟೆಂಡರ್ ಕರೆಯುವುದಾಗಿ ಇದೇ ತಿಂಗಳು ೨೪ ರಂದು ಪತ್ರಿಕಾ ಹೇಳಿಕೆಯನ್ನು ನೀಡಿರುತ್ತೀರಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಸರುವಾಸಿಯಾದ ಚಿನ್ನ ಎಂದರೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಬಂಗಾರಕ್ಕೆ ಅಧಿಕ ಬೆಲೆ ಇರುವ ಸಂದರ್ಭದಲ್ಲಿ ಜಾಗತಿಕ ಮಟ್ಟಕ್ಕೆ ಗುರುತಿಸುವುದು ಶ್ಲಾಂಘನೀಯ.
ಫೆಬ್ರವರಿ ೨೬ ರಂದು ಹಟ್ಟಿಚಿನ್ನದಗಣಿಗೆ ಭೇಟಿ ನೀಡಿದ ಸಚಿವರು ಕರ್ನಾಟಕ ಗೋಲ್ಡ್ ಮೈನ್ಸ್ ಕಂಪನಿ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದಾರಲ್ಲದೇ ಅಧಿವೇಶನದಲ್ಲಿ ಪ್ರಸ್ತಾವನೆಯನ್ನು ಮಾಡಿದ್ದರು.ಇಲ್ಲಿಯ ಆಡಳಿತ ಮಂಡಳಿಗೆ ಜಾಗತಿಕವಾಗಿ ಗುರುತಿಸಲು ಬೇಕಾದ ನೀಲನಕ್ಷೆ (ಡಿಪಿಆರ್) ತಯಾರಿಸಲು ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದರು.ಹೆಚ್ಚಿನ ಚಿನ್ನ ಉತ್ಪಾದನೆಗೆ ಒತ್ತು ಕೊಡುವ ದೃಷ್ಟಿಯಿಂದಲೂ ಚಿಂತನೆ ನಡೆಸಿರುವುದು ಸ್ವಾಗತಾರ್ಹ ಈಗ ಹಟ್ಟಿ ಚಿನ್ನದ ಗಣಿಯ ೧.೫ ವರುಷಕ್ಕೆ ಚಿನ್ನವನ್ನು ಹೊರತೆಗೆಯಲಾಗುತ್ತಿದ್ದು ಜಾಗತಿಕವಾಗಿ ಗುರುತಿಸಿದರೆ ೧ವರ್ಷಕ್ಕೆ ೫ಟನ್ ಉತ್ಪಾದನೆ ಕೈಗೊಳ್ಳುವ ಯೋಜನೆಯ ಉದ್ದೇಶವಾಗಿರುತ್ತದೆ.
ಹಟ್ಟಿ ಚಿನ್ನದ ಗಣಿಯಲ್ಲಿ ೧ವರ್ಷಕ್ಕೆ ೫ಟನ್ ಚಿನ್ನ ಉತ್ಪಾದನೆ ಮಾಡಲು ಖನಿಜ ಸಂಪತ್ತು ಅಡಗಿರುವ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸಬೇಕು.ನಿರ್ದೇಶಕರ ಮಂಡಳಿಯ ಸಭೆ ಕರೆದು ಸರಕಾರದ ಮಟ್ಟದಲ್ಲಿ ಈ ತೀರ್ಮಾನ ಆಗಬೇಕು. ಗಣಿಯಲ್ಲಿರುವ ಮೂಲಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿಗೆ ಆದ್ಯತೆಯನ್ನು ನೀಡಬೇಕು. ಸಿಬ್ಬಂದಿಗಳಿಗೆ ಹಾಗೂ ಗಣಿ ಕಾರ್ಮಿಕರ ವೇತನ ಅಲ್ಲಿ ದುಡಿಯುವ ಕಾರ್ಮಿಕರಿಗೆ ವಿಮಾ, ವೈದ್ಯಕೀಯ, ಶಿಕ್ಷಣ, ಮನೆಗಳು ನಿರ್ಮಾಣ, ಸೌಲಭ್ಯ,ಹಾಗೂ ಗಣಿ ಹಸಿರೀಕರಣ ಇವುಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು,ಕರ್ನಾಟಕದಲ್ಲಿರುವ ಏಕೈಕ ಚಿನ್ನದ ಉತ್ಪಾದನೆ ಕೇಂದ್ರವಾಗಿರುವ ಹಟ್ಟಿ ಚಿನ್ನದ ಗಣಿಯನ್ನು ಸರ್ಕಾರವೇ ಮುಂದುವರಿಸಿಕೊಂಡು ಹೋಗಬೇಕು.
ಜಾಗತೀಕರಣದ ನೆಪದಲ್ಲಿ ಕಂಪೆನಿಯಲ್ಲಿ ಖಾಸಗೀಕರಣಗೊಳಿಸುವ ಹುನ್ನಾರವನ್ನು ಸರ್ಕಾರವು ಕೈಬಿಡಬೇಕು ಇಷ್ಟು ವರ್ಷಗಳಿಂದಲೂ ಕಂಪೆನಿಯನ್ನು ನಂಬಿ ಬದುಕುತ್ತಿರುವ ಅವಲಂಬಿತರ ಕುಟುಂಬಗಳಿಗೆ ಅನ್ಯಾಯವಾಗದಂತೆ ಸರ್ಕಾರ ಗಮನಿಸಬೇಕು. ಹಟ್ಟಿ ಗೋಲ್ಡ್ ಕಂಪೆನಿಯನ್ನು ಪುನಶ್ಚೇತನಕ್ಕೆ ಬೇಕಾಗುವ ಎಲ್ಲಾ ರೀತಿಯ ನೆರವನ್ನು ಹಾಗೂ ಕಾರ್ಮಿಕರ ಭವಿಷ್ಯವನ್ನು ರೂಪಿಸಲು ಸರ್ಕಾರ ಮುಂದಾಗಬೇಕು. ಜಾಗತೀಕರಣದ ನೆಪದಲ್ಲಿ ಕಂಪೆನಿಯನ್ನು ಖಾಸಗೀಕರಣಗೊಳಿಸಲು ಹೊರಟಿರುವ ಸರ್ಕಾರದ ಈ ಕ್ರಮವನ್ನು ಬಹುಜನ ಸಮಾಜ ಪಕ್ಷ ಖಂಡಿಸುತ್ತಾ ತಮಗೆ ಮನವಿ ಮಾಡಿತು.
ಈ ಸಂದರ್ಭದಲ್ಲಿ ಹನುಮಂತರಾಯ ಕಪಗಲ್ ಜಿಲ್ಲಾ ಉಪಾಧ್ಯಕ್ಷರು, ಚನ್ನಬಸವ ಜಗ್ಲಿ ಜಿಲ್ಲಾಕಾರ್ಯದರ್ಶಿ, ಇಮಾಂಸಾಬ್ ತಾಲ್ಲೂಕು ಅಧ್ಯಕ್ಷರು, ಚಂದ್ರಶೇಖರ್ ಬಿ ಕಾರ್ಯದರ್ಶಿಗಳು, ಬಸುರಾಜ ಜಾನೇಕಲ್, ರಮೇಶ್ ಗಡಿಗೆಟ್ಟ, ವಿರುಪನಗೌಡ ಕೋನಾಪುರಪೇಟೆ ಉಪಸ್ಥಿತರಿದ್ದರು.