ಜಾಗತಿಕ ಶಾಂತಿ ಜಿ-೭ ದೇಶಗಳ ಸಂಕಲ್ಪ

ಟೋಕಿಯೋ.ಮೇ.೨೧- ‘ಜಾಗತಿಕ ಶಾಂತಿ, ಸ್ಥಿರತೆ, ಸಮೃದ್ಧಿ ಜಿ-೭ ದೇಶಗಳ ಸಾಮಾನ್ಯ ಉದ್ದೇಶ’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಯಾವುದೇ ವಿವಾದ, ಉದ್ವಿಘ್ನತೆಯನ್ನು ಶಾಂತಿಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದರಲ್ಲಿ ಭಾರತ ನಂಬಿಕೆ ಹೊಂದಿದೆ ಎಂದೂ ಹೇಳಿದ್ದಾರೆ.
ಜಪಾನ್‌ನ ಹಿರೋಶಿಮಾದಲ್ಲಿ ಜಿ-೭ ಶೃಂಗಸಭೆಯಲ್ಲಿ ಮಾತನಾಡಿದ ಅವರು ಘರ್ಷಣೆಯನ್ನು ರಾಜಕೀಯ ಅಥವಾ ಆರ್ಥಿಕ ಸಮಸ್ಯೆಯಾಗಿ ನೋಡುವುದಿಲ್ಲ ಬದಲಾಗಿ ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ಸಮಸ್ಯೆಯಾಗಿದೆ ಎಂದಿದ್ದಾರೆ.
ಯಾವುದೇ ಪ್ರದೇಶದಲ್ಲಿ ಉದ್ವಿಗ್ನತೆಯ ನಡುವೆ ಅಭಿವೃದ್ಧಿಶೀಲ ರಾಷ್ಟ್ರಗಳು ಹೆಚ್ಚು ಪರಿಣಾಮ ಬೀರುತ್ತವೆ ಎಂದು ಹೇಳಿದ ಅವರು ಪ್ರಸ್ತುತ ಪರಿಸ್ಥಿತಿ ರಾಜಕೀಯ ಅಥವಾ ಆರ್ಥಿಕತೆಯ ವಿಷಯವಲ್ಲ, ಆದರೆ ಮಾನವೀಯತೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
‘ಪ್ರಸ್ತುತ ಪರಿಸ್ಥಿತಿ ರಾಜಕೀಯ ಅಥವಾ ಆರ್ಥಿಕತೆಯ ವಿಷಯವಲ್ಲ, ಆದರೆ ಮಾನವೀಯತೆಯ ಸಮಸ್ಯೆ’ ಎಂದು ರಷ್ಯಾ-ಉಕ್ರೇನ್ ಸಂಘರ್ಷದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂದರ್ಶಕ ಪುಸ್ತಕಕ್ಕೆ ಸಹಿ:
ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಪರಮಾಣು ದಾಳಿಯಲ್ಲಿ ಮಡಿದವರ ನೆನಪಿಗಾಗಿ ನಿರ್ಮಿಸಲಾದ ಹಿರೋಷಿಮಾದ ಶಾಂತಿ ಸ್ಮಾರಕ ವಸ್ತುಸಂಗ್ರಹಾಲಯಕ್ಕೂ ಪ್ರಧಾನಿ ಭೇಟಿ ನೀಡಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು.

ಉಕ್ರೇನ್ ನೆರವು: ಭರವಸೆ
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಅವರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಉಕ್ರೇನ್ ಜೊತೆ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.
ಕ್ವಾಡ್ ನಾಯಕರು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಉಕ್ರೇನ್ ಯುದ್ಧ ಕೊನೆಗೊಳಿಸಬೇಕೆಂದು ಕರೆ ನೀಡಿದ ಅವರು ಇದು ಯುದ್ಧದ ಯುಗವಾಗಿರಬಾರದು ಎಂದು ಪ್ರತಿಪಾದಿಸಿದ್ದಾರೆ.
ಜಪಾನ್ ಭೇಟಿ ಫಲಪ್ರದವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ಪಪುವಾ ನ್ಯೂಗಿನಿಯಾಗೆ ತೆರಳಿದರು.