ಜಾಗತಿಕ ವೈಪರಿತ್ಯಗಳಿಗೆ ಪಂಚತತ್ವಗಳ ವೈರುದ್ಯಗಳು ಕಾರಣ:   ಡಾ.ಎಸ್.ಬಿ.ಹಂದ್ರಾಳ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು16: ಜಾಗತಿಕ ವೈಪರಿತ್ಯಗಳಿಗೆ ಹಾಗೂ ಅವುಗಳ ಸಮತೋಲನಕ್ಕೆ ಯೋಗ ಮುದ್ರೆಗಳು ಸಹಕಾರಿಯಾಗಲಿವೆ ಎಂದು ಖ್ಯಾತ ವೈದ್ಯ ಹಾಗೂ ಪತಂಜಲಿ ಯೋಗ ಸಮಿತಿಯ ರಾಜ್ಯ ಸಮಿತಿ ಸದಸ್ಯ ಡಾ.ಎಸ್.ಬಿ.ಹಂದ್ರಾಳ ಹೇಳಿದರು. 
ಪತಂಜಲಿ ಯೋಗ ಸಮಿತಿಯ ಫ್ರೀಡಂ ಪಾರ್ಕ್‍ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ವಿಶೇಷ ಮಾಸಿಕ ಯೋಗ ತರಬೇತಿ ಶಿಬಿರ”ದಲ್ಲಿ ಯೋಗ ಜ್ಞಾನ, ಪ್ರಾಣಾಯಾಮ ಸೇರಿದಂತೆ ಪಂಚಭೂತಗಳ ಹಾಗೂ ಪಂಚಲಿಂಗಗಳ ಮಹತ್ವ, ಅವುಗಳ ನಿಯಂತ್ರಣಕ್ಕೆ ನಾವು ಮಾಡಬಹುದಾದ ಪರಿಹಾರೋಪಾಯಗಳು ಹಾಗೂ ಮುದ್ರಿಕೆಗಳ ಮೂಲಕ ಪರಿಸರದ ಮೇಲಾಗುವ ದೌರ್ಜನ್ಯಗಳನ್ನು ತಡೆದು, ಒಂದು ಉತ್ತಮ ವಾತಾವಣವನ್ನು ನಿರ್ಮಾಣ ಮಾಡಲುವಲ್ಲಿ ನಮ್ಮಗಳ ಪಾತ್ರ ಕುರಿತು ವಿವರವಾಗಿ ತಿಳಿಸಿದರು.
ನೀರು, ಆಹಾರ, ಪಕೃತಿಯ ದುರುಪಯೋಗ, ಪರಿಸರದ ಮೇಲೆ ನಾವು ಮಾಡುತ್ತಿರುವ ಹಾನಿ ಎಲ್ಲಾ ಬದಲಾವಣೆಗಳಿಗೆ ಕಾರಣವಾಗಲಿದ್ದು ಪರಿಸರದ ಶುಭ್ರತೆ ಹಾಗೂ ಸಮತೋಲನವನ್ನು ಕಾಪಾಡಬೇಕಾಗಿರುವುದು ಅಗತ್ಯವಾಗಿದೆ ಎಂದರು ಇವು ಸಾದ್ಯವಾಗಬೇಕಾದರೆ ನಮ್ಮ ಮನೋನ ನಿರ್ಗಹವೂ ಅಗತ್ಯ ಇಂತಹ ಶಕ್ತಿಯನ್ನು ಯೋಗ ಧ್ಯಾನ, ಪ್ರಾಣಯಾಮಗಳು ನೀಡಬಲ್ಲವು ನಾವು ಬ್ರಾಹ್ಮಿ ಮೂರ್ತ ಮಾಡುವ ಪಂಚತತ್ವಗಳಾದ ವಾಯುತತ್ವ, ಜಲತತ್ವ, ಪೃಥ್ವ್ವಿತತ್ವ, ಆಕಾಶತತ್ವ, ಹಾಗೂ ತತ್ವ ಜಾಗೃತಿಗೆ ಇರುವ ದೇವಸ್ಥಾನಗಳ ದರ್ಶನ ಸಕಾರಾತ್ಮಕ ಚಿಂತನೆಗಳು ಮೂಡಲು ಸಾದ್ಯ ಎಂದರು.
ಇದೆ ಸಂದರ್ಭದಲ್ಲಿ ಹಿರಿಯ ಯೋಗಸಾಧಕಿ ಮಂಗಳಮ್ಮ ಹಾಗೂ ವೀರಯ್ಯ ದಂಪತಿಗಳ 50 ವರ್ಷಗಳ ವೈವಾಹಿಕ ಜೀವನ ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಗುರು ನಮನದ ದ್ಯೋತಕವಾಗಿ ಡಾ.ಎಸ್.ಬಿ.ಹಂದ್ರಾಳರವರನ್ನು ಇದೆ ಸಂದರ್ಭದಲ್ಲಿ ಗೌರವಿಸಲಾಯಿತು.
ರಾಜ್ಯ ಯುವ ಪ್ರಭಾರಿ ಕಿರಣ್‍ಕುಮಾರ, ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಸಂಚಾಲಕ ಶ್ರೀರಾಮ, ಫ್ರೀಡಂ ಪಾರ್ಕ್ ಉಸ್ತುವಾರಿ ಅನಂತ ಜೋಶಿ. ಹಿರಿಯ ಯೋಗಸಾಧಕರು ರಾಜ್ಯ ಕಾರ್ಯಕಾರಿಣ ಸದಸ್ಯರಾದ ಡಾ.ಎಫ್.ಟಿ.ಹಳ್ಳಿಕೇರಿ, ರಾಜೇಶ್ ಕರ್ವಾ, ಶಿವಮೂರ್ತಿ, ಅಶೋಕ ಚಿತ್ರಗಾರ, ವಿಠೋಬಣ್ಣ, ಚಂದ್ರಿಕಾಶ್ರೀರಾಮ, ಮಲ್ಲಿಕಾರ್ಜುನ್, ಡಾ.ಮಲ್ಲಿಕಾರ್ಜುನ, ಗಂಗಾವತಿಯ ಓಕಾಂರ್‍ಆಚಾರಿ, ಚನ್ನಪ್ಪ ಹಳ್ಳಳಿ, ರಾಘವೇಂದ್ರ ಜಮಖಂಡಿ ಸೇರಿದಂತೆ ನಗರದ ವಿವಿಧ ಕೇಂದ್ರಗಳ ಸಂಚಾಲಕರು, ಮುಖ್ಯಸ್ಥರು ನೂರಾರು ಸಂಖ್ಯೆಯ ಯೋಗಾಸಕ್ತರು ವಿಶೇಷ ಶಿಬಿರದಲ್ಲಿ ಪಾಲ್ಗೊಂಡಿದ್ದರು.