ಜಾಗತಿಕ ಬೆಳೆವಣಿಗೆಯಲ್ಲಿ ರೈತರ ಪಾತ್ರ ಮಹತ್ತರವಾಗಿದೆ: ಸಿದ್ದರಾಮಯ್ಯ ಸ್ವಾಮಿ

ಬೀದರ: ಡಿ.24: ಮಾನವನ ಏಳಿಗೆ ಮಾನವನ ಸಂಸ್ಕøತಿಯ ಬೆಳವಣಿಗೆಯಲ್ಲಿ ರೈತನ ಪಾಲು ಅತ್ಯಧಿಕವಾಗಿದೆ ರೈತ ನಮ್ಮ ಮನುಕುಲದ ಹಾಗೂ ಜಾಗತಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದಾನೆ ನಮ್ಮ ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತನನ್ನು ಪ್ರತಿದಿನ ನಾವು ನೆನೆಸಬೇಕಾಗುತ್ತದೆ ಎಂದು ಬೀದರ್ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ದರಾಮಯ್ಯ ಸ್ವಾಮಿ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರ ಬೀದರ್ ಕೃಷಿ ಇಲಾಖೆ ಹಾಗೂ ಬೀದರ್ ತಾಲೂಕು ಕೃಷಿಕ ಸಮಾಜ ಕಾರ್ಯಕಾರಣಿ ಮತ್ತು ಮೈರಾಡ ಸಂಸ್ಥೆ ಬೀದರ್ ಜಂಟಿಯಾಗಿ ಆಯೋಜಿಸಿದ ರಾಷ್ಟ್ರೀಯ ರೈತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ರೈತರಿಗೆ ನಾವು ಹೆಚ್ಚಿನ ಗೌರವ ನೀಡಬೇಕಾಗುತ್ತದೆ ರೈತರನ್ನು ಅವರ ಕೆಲಸವನ್ನು ಸ್ಮರಿಸುವ ನಿಟ್ಟಿನಲ್ಲಿ ಭಾರತದ ಐದನೇ ಪ್ರಧಾನ ಮಂತ್ರಿಗಳಾದ ಚೌದರಿ ಚರಣ ಸಿಂಗ್ ರವರ ಹುಟ್ಟುಹಬ್ಬದ ನಿಮಿತ್ತ ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಅವರು ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಕಾನೂನುಗಳನ್ನು ತಂದು ರೈತರು ಅದರಲ್ಲೂ ಕೂಡ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿಯಲ್ಲಿ ಸುಧಾರಣೆಯನ್ನು ತಂದಿದ್ದಾರೆ ಎಂದರು
ರೈತರನ್ನು ನಿಜವಾಗಿಯೂ ನಾವು ಗೌರವಿಸುವುದು ಆಗಬೇಕಾದಲ್ಲಿ ಇಂದು ರೈತರ ಕುರಿತಾದಂತಹ ಅನೇಕ ಕಾರ್ಯಕ್ರಮಗಳು ಜಿಲ್ಲಾ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಆಶುಭಾಷಣ ಹಾಗೂ ಗಾಯನ ಸ್ಪರ್ಧೆ ಏರ್ಪಡಿಸಿ ರೈತರ ಕಾರ್ಯಗಳನ್ನು ಶ್ಲಾಗಿಸುವ ಕೆಲಸ ಆಗಬೇಕಿದೆ ಬರುವ ವರ್ಷ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಾವ ರೀತಿ ನಾವು ಡಾಕ್ಟರ್ಸ್ ದಿನಾಚರಣೆ, ಇಂಜಿನಿಯರ್ಸ್ ದಿನಾಚರಣೆ ಆಚರಿಸುವ ರೀತಿಯಲ್ಲಿ ರೈತ ದಿನಾಚರಣೆಯನ್ನು ಕೂಡ ಅದ್ದೂರಿಯಾಗಿ ರಂಗಮಂದಿರದಲ್ಲಿ ಆಚರಿಸುವಂತಾಗಬೇಕು ಎಂದು ಹೇಳಿದರು.
ನಾಗಯ್ಯ ಸ್ವಾಮಿ ಮಾತನಾಡಿ ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಿ, ಜೊತೆಗೆ ಮಣ್ಣು ಪರೀಕ್ಷೆ ಮಾಡೋದರ ಮೂಲಕ ಕಡಿಮೆ ಖರ್ಚು ಮಾಡಿ ಹೆಚ್ಚಿನ ಆದಾಯ ರೈತರು ಪಡೆಯಬೇಕೆಂದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಕೆ ಅನ್ಸಾರಿ ಮಾತನಾಡಿ ಕೃಷಿ ಇಲಾಖೆಯಲ್ಲಿ ಸಾಕಷ್ಟು ಸೌಲಭ್ಯಗಳು ರೈತರಿಗಾಗಿ ಲಭ್ಯವಿದ್ದು ಇವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಗತಿಪರ ರೈತ ವೈಜಿನಾಥ ಭಯ ಮಾತನಾಡಿ ಕೃಷಿ ವಿಜ್ಞಾನ ಕೇಂದ್ರ ಬೀದರ್ ರೈತರಿಗೆ ತಾಂತ್ರಿಕತೆಗಳನ್ನ ಸಮಯಕ್ಕೆ ಸರಿಯಾಗಿ ಒದಗಿಸುತ್ತದೆ ಹಾಗಾಗಿ ರೈತ ಬಾಂಧವರು ಕೃಷಿ ವಿಜ್ಞಾನ ಕೇಂದ್ರದೊಂದಿಗೆ ನಿಕಟ ಸಂಬಂಧದಿಂದ ಇರಬೇಕೆಂದರು.
ಕೃಷಿ ಕೇಂದ್ರ ಬೀದರ್‍ನ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಸುನಿಲ್ ಕುಮಾರ್ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರ ಬೀದರ್ ಅನೇಕ ತಾಂತ್ರಿಕತೆಗಳನ್ನು ರೈತರಿಗೆ ಒದಗಿಸುತ್ತದೆ ರೈತ ಬಾಂಧವರು ಕೃಷಿ ವಿಜ್ಞಾನ ಕೇಂದ್ರ ಬೀದರ್ ಹಾಗು ಕೃಷಿ ವಿಶ್ವವಿದ್ಯಾಲಯದಲ್ಲಿ ಆದ ಹೊಸ ಹೊಸ ತಾಂತ್ರಿಕತೆಗಳನ್ನು ತಮ್ಮ ಕ್ಷೇತ್ರದಲ್ಲಿ ಅಡವಡಿಸಿಕೊಳ್ಳುವ ಮೂಲಕ ಆದಾಯವನ್ನು ವೃದ್ಧಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಿಲೇನಿಯರ್ ರೈತ ರಾಷ್ಟ್ರ ಪ್ರಶಸ್ತಿ ವಿಜೇತ ಬಸವಕಲ್ಯಾಣ ತಾಲೂಕಿನ ಗೊಗ್ಗ ಗ್ರಾಮದ ಶ್ರೀ ನಾಮದೇವ್ ಮೇತ್ರಿ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿ ಸತೀಶ್ ಷಟ್ಕರ್, ರೈತ ಬಾಂಧವರ ಕೇಂದ್ರದ ಬೀಜ ವಿಜ್ಞಾನಿಗಳ ಡಾಕ್ಟರಗಳು, ರೈತರು ಉಪಸ್ಥಿತರಿದ್ದರು.