ಜಾಗತಿಕ ತಲ್ಲಣಗಳಿಗೆ ಬುದ್ಧನ ಶಾಂತಿ ಸಂದೇಶ ಅಗತ್ಯ

ಕಲಬುರಗಿ,ಮೇ.26: ಹಿಂಸೆ, ಅನ್ಯಾಯ, ಅಶಾಂತಿ, ಶೋಷಣೆ,ಭಯೋತ್ಪಾದನೆಯಂತಹ ಜಾಗತಿಕ ತಲ್ಲಣಗಳಿಂದು ಬಳಲುತ್ತಿರುವ ಸಮಾಜಕ್ಕೆ ಮಹಾತ್ಮ ಗೌತಮ ಬುದ್ಧ ಅವರು ಸಾವಿರಾರು ವರ್ಷಗಳ ಹಿಂದೆಯೇ ನೀಡಿರುವ ಹಾಗೂ ಅವುಗಳನ್ನು ಆಚರಿಸಿ ತೋರಿಸಿರುವ ತತ್ವಗಳು ಔಷಧಿಯಂತೆ ಕಾರ್ಯಮಾಡುತ್ತವೆಯೆಂದು ಸಮಾಜ ಸೇವಕ ಸುನೀಲ ಕುಮಾರ ವಂಟಿ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಲೋನಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ಮತ್ತು ‘ ಸುಜಯ್ ಶಿಕ್ಷ್ಮುತ್ತು ಕಲ್ಯಾಣ ಸಂಸ್ಥೆ’ಇವುಗಳ ವತಿಯಿಂದ ಬುದವಾರ ಸರಳವಾಗಿ ಜರುಗಿದ ‘ಬುದ್ಧ ಪೂರ್ಣಿಮೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ, ಅವರು ಮಾತನಾಡುತ್ತಿದ್ದರು.
ಮುಖ್ಯ ಶಿಕ್ಷಕ ನೀಲಕಂಠಯ್ಯ ಹಿರೇಮಠ ಮಾತನಾಡಿ, ಬುದ್ಧ ಜ್ಞಾನದ ಮಹಾ ಬೆಳಕಾಗಿದ್ದಾರೆ. ಆ ಬೆಳಕಿನಲ್ಲಿ ಸಾಗಿದರೆ ಬದುಕು ಸುಂದರವಾಗುತ್ತದೆ. ಬುದ್ಧ ಎಂದರೆ ವ್ಯಕ್ತಿಯಲ್ಲ. ಬದಲಿಗೆ ಅದ್ಭುತವಾದ ಶಕ್ತಿಯಾಗಿದ್ದಾರೆ. ಅವರ ಸಂದೇಶ ಪಾಲಿಸುವುದು ತುಂಬಾ ಅಗತ್ಯವಾಗಿದೆಯೆಂದು ನುಡಿದರು.
ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಬಸಯ್ಯ ಸ್ವಾಮಿ ಹೊದಲೂರ, ಕಾಡಯ್ಯ ಎಚ್.ಕೆ., ಅಣ್ಣಾರಾಯ.ಎಚ್.ಮಂಗಾಣೆ, ನಾಗೇಶ ತಿಮ್ಮಾಜಿ ಬೆಳಮಗಿ, ಶಿವಪುತ್ರಯ್ಯ ಸ್ವಾಮಿ ಬೆಣ್ಣೂರು, ಯಲ್ಲಾಲಿಂಗ ಹಡಪದ, ಇದ್ದರು.