ಜಾಗತಿಕ ಕಾರ್ಯತಂತ್ರಕ್ಕೆ ಭಾರತ ದೊಡ್ಡ ಪಾಲುದಾರ

ವಾಷಿಂಗ್ಟನ್. ಫೆ.೨೮- ಅಮೇರಿಕಾದ ಜಾಗತಿಕ ಕಾರ್ಯತಂತ್ರದ ಬಹು ದೊಡ್ಡ ಪಾಲುದಾರ ಭಾರತ ಎಂದು ಅಧ್ಯಕ್ಷ ಜೋ ಬೈಡೆನ್ ನೇತೃತ್ವದ ಆಡಳಿತ ಹೇಳಿದೆ.
ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕನ್ ಜಿ-೨೦ ವಿದೇಶಾಂಗ ಮಂತ್ರಿಗಳ ಸಭೆ ಸೇರಿದಂತೆ ಪ್ರಮುಖ ಸಮ್ಮೇಳನಗಳಲ್ಲಿ ಭಾಗವಹಿಸಲು ದೆಹಲಿಗೆ ತೆರಳುವುದಕ್ಕೂ ಮುನ್ನ ಅಮೇರಿಕಾದಿಂದ ಈ ಹೇಳಿಕೆ ಹೊರಬಿದ್ದಿದೆ.
ಅಮೆರಿಕಾ ರಾಜ್ಯ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಪ್ರತಿಕ್ರಿಯಿಸಿ,ಭಾರತದೊಂದಿಗೆ ಆಳವಾದ ಸಂಬಂಧ ಹೊಂದಿದ್ದೇವೆ. ದ್ವಿಪಕ್ಷೀಯ ಸಂಬಂಧದಲ್ಲಿ ಮುಂದೆ ಇದ್ದೇವೆ. ಜೊತೆಗೆ ಉಭಯದೇಶಗಳ ನಡುವೆ ಸೌಹಾರ್ದಯುತ ಸಂಬಂಧವಿದೆ ಎಂದು ಹೇಳಿದ್ದಾರೆ.
ಇದು “ಯುದ್ಧದ ಯುಗವಲ್ಲ” ಎನ್ನುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಅಮೇರಿಕಾ ಸ್ವಾಗತಿಸಿದ್ದು ಭಾರತ ಪ್ರಮುಖ ಮಿತ್ರ ರಾಷ್ಟ್ರ ಎಂದು ಹೇಳಿದ್ದಾರೆ.
ಬ್ಲಿಂಕೆನ್ ಅವರು ಕ್ವಾಡ್ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿ-೨೦ ನ ಸಭೆಯ ವೇಳೆ ಬಹುಪಕ್ಷೀಯ ಸಭೆಗಳು ,ಕಾರ್ಯಸೂಚಿಗಳು ಇರಲಿವೆ. ಭಾರತದೊಂದಿಗೆ ಮುಕ್ತ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತೇವೆ ಮತ್ತು ಭಾರತ ದ್ವಿಪಕ್ಷೀಯವಾಗಿ ನಮ್ಮ ಪ್ರಮುಖ ಪಾಲುದಾರ ದೇಶವಾಗಿದೆ ಎಂದಿದ್ದಾರೆ.
ಕಝಾಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ಗೆ ಭೇಟಿ ನೀಡಿದ ನಂತರ, ಬ್ಲಿಂಕೆನ್ ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ನವದೆಹಲಿಗೆ ಆಗಮಿಸಲಿದ್ದಾರೆ. ಅವರ ದ್ವಿಪಕ್ಷೀಯ ಸಭೆಗಳ ಸಮಯದಲ್ಲಿ, ರಷ್ಯಾ ಮತ್ತು ಚೀನಾ ಎರಡೂ ಮಾತುಕತೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಭಾರತ ಮತ್ತು ಅಮೇರಿಕಾದ ನಡುವೆ ಹತ್ತಾರು ವಿಷಯಗಳಲ್ಲಿ ಉತ್ತಮ ಸಂಬಂಧ ಹೊಂದಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.