ಜಾಗತಿಕ ಆರ್ಥಿಕತೆಗೆ ಕೊರೊನಾ ಕರಿನೆರಳು

ಜಿನೇವಾ, ಜ.೨- ಕೋವಿಡ್ ಸೋಂಕಿನ ಹೊಡೆತ ಸೇರಿದಂತೆ ಇನ್ನಿತರೆ ಕಾರಣಗಳಿಂದ ಈ ವರ್ಷ ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಎದುರಿಸಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.
ಹೊಸ ವರ್ಷ ಹೊಸ ಸವಾಲು ಎದುರಿಸಲು ಸಜ್ಜಾಗಬೇಕು. ೨೦೨೨ಕ್ಕಿಂತ ೨೦೨೩ ಆರ್ಥಿಕವಾಗಿ ತುಂಬಾ ಕಠಿಣವಾಗಿರಲಿದೆ ಎಂದು ಐಎಂಎ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.
ಜಾಗತಿಕ ಆರ್ಥಿಕತೆಯ ಬಹುಪಾಲು ಹೊಡೆತ ಅಮೆರಿಕಾ, ಯುರೋಪ್ ಮತ್ತು ಚೀನಾ ಸೇರಿದಂತೆ ಇನ್ನಿತರೆ ದೇಶಗಳ ಮೇಲೆ ಪರಿಣಾಮ ಬೀರಲಿದೆ.
೨೦೨೩ ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಗೆ ಕುಂಠಿತವಾಗಲಿದೆ ಉಕ್ರೇನ್ ಮೇಲೆ ರಷ್ಯಾದ ಯುದ್ದ, ಮುಂದುವರಿದ ಡ್ರ್ಯಾಗ್ ಮತ್ತು ಹಣದುಬ್ಬರದ ಒತ್ತಡಗಳು ಮತ್ತು ಅಮೇರಿಕಾದ ಫೆಡರಲ್ ರಿಸರ್ವ್‌ನಂತಹ ಕೇಂದ್ರೀಯ ಬ್ಯಾಂಕ್‌ಗಳು ಆ ಬೆಲೆ ಒತ್ತಡಗಳನ್ನು ತರುವ ಗುರಿಯನ್ನು ಹೊಂದಿರುವ ಹೆಚ್ಚಿನ ಬಡ್ಡಿದರಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಚೀನಾ ತನ್ನ ಶೂನ್ಯ ಕೋವಿಡ್ ನೀತಿ ರದ್ದುಗೊಳಿಸಿದೆ. ಇದರಿಂದ ಕೋವಿಡ್ ಸೋಂಕು ಹೆಚ್ಚಾಗಿದ್ದು ಚೀನಾದಲ್ಲಿ ಈ ವರ್ಷ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಚೀನಾ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.
“೪೦ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ೨೦೨೩ ರಲ್ಲಿ ಚೀನಾದ ಬೆಳವಣಿಗೆಯು ಜಾಗತಿಕ ಬೆಳವಣಿಗೆಯಲ್ಲಿ ಅಥವಾ ಕೆಳಗಿರುವ ಸಾಧ್ಯತೆಯಿದೆ” ಎಂದು ಅವರು ಅಂದಾಜು ಮಾಡಿದ್ದಾರೆ.
ಮುಂದಿನ ತಿಂಗಳುಗಳಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ಸೋಂಕು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದ ಕೂಡ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕೊರೊನಾ ಸೋಂಕಿನ ಪರಿಣಾಮದಿಂದ ಜಗತ್ತಿನ ಅನೇಕ ದೇಶಗಳು ನಲುಗಿ ಹೋಗಿವೆ. ಈ ನಡುವೆ ೨೦೨೩ರಲ್ಲಿಯೂ ವಿಶ್ವದ ಬಲಾಢ್ಯ ದೇಶಗಳ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.