ಜಾಕ್‌ವೆಲ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಮಾನ್ವಿ,ಆ.೨೯- ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಹಾಗೂ ಕೆ.ಯು.ಡಬ್ಲು.ಎಸ್.ಡಿ.ಬಿ. ಎ.ಇ.ಇ. ಚೌಹನ್ ಪಟ್ಟಣಕ್ಕೆ ಅಗತ್ಯವಾದ ನೀರು ಪೂರೈಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತುಂಗಭದ್ರ ನದಿಯಿಂದ ನೂತನ ವಾಗಿ ಪೈಪ್ ಲೈನ್ ಹಾಕುವುದಕ್ಕೆ ಹಾಗೂ ನದಿಯಲ್ಲಿ ಜಾಕ್ ವೆಲ್ ನಿರ್ಮಾಣಕ್ಕೆ ಸೋಮವಾರ ತಾಲೂಕಿನ ಕಾತರಕಿ ಗ್ರಾಮದ ತುಂಗಭದ್ರನದಿಯ ಹತ್ತಿರ ಪ್ರದೇಶದಲ್ಲಿ ಸ್ಥಳವನ್ನು ಪರಿಶೀಲನೆ ನಡೆಸಿದರು.
ನಂತರ ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಮಾತನಾಡಿ ಪಟ್ಟಣದ ಐವತ್ತು ಸಾವಿರ ಜನಸಂಖ್ಯೆಗೆ ಅಗತ್ಯವಾದ ಕುಡಿಯುವ ನೀರಿನ ಪೂರೈಕೆ ಮಾಡುವ ರಬ್ಬಣಕಲ್ ನಲ್ಲಿನ ಜಲಸಂಗ್ರಹಣೆಗಾಗಿ ಕೆರೆಯನ್ನು ನಿರ್ಮಿಸಲಾಗಿದ್ದರು ಕುಡಿಯುವ ನೀರನ್ನು ತುಂಬಿಸಲು ತುಂಗಭದ್ರ ಜಲಾಶಯದಿಂದ ಕಾಲುವೇ ಮೂಲಕ ನೀರನ್ನು ತುಂಬಿಸಿ ಪಟ್ಟಣದ ವಿವಿಧ ವಾರ್ಡಗಳಿಗೆ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣದ ಶುದ್ದಕುಡಿಯುವ ನೀರಿನ ಘಟಕಕ್ಕೆ ಪಟ್ಟಣದಿಂದ ೪ ಕಿ.ಮೀ ದೂರ ಇರುವ ತಾಲೂಕಿನ ಕಾತರಕಿ ಗ್ರಾಮದಲ್ಲಿನ ತುಂಗಭದ್ರ ನದಿಯಲ್ಲಿ ಜಾಕ್‌ವೆಲ್ ನಿರ್ಮಿಸಿ ಪೈಪ್‌ಲೈನ್ ಮೂಲಕ ನೀರನ್ನು ೪ ದಿನಕ್ಕೆ ಒಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತಿರುವುದರಿಂದ ಪಟ್ಟಣದ ಜನರಿಗೆ ನಿರಂತರವಾಗಿ ನೀರು ಪೂರೈಕೆ ಮಾಡಲು ಈಗಿರುವ ನೀರುಸಾರಬರಾಜು ವ್ಯವಸ್ಥೆ ಸರಿಹೊಗುವುದಿಲ್ಲ ಆದ್ದರಿಂದ ನೀರು ಪೂರೈಕೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ವೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸರ್ವೆ ಕನ್ಸಲ್ಟ?ಯಂಟ್ ಸಂಸ್ಥೆಯ ರಾಜೇಶ್, ಡಿಸೈನ್ ಇಂಜಿನೀಯರ್ ಎ.ಇ.ಇ.ಧನ್ಯಶ್ರೀ, ಸೇರಿದಂತೆ ಇನ್ನಿತರರು ಭಾಗವಹಿಸಿದರು.