
ಜಾಕ್ವೆಲಿನ್ ಫೆರ್ನಾಂಡೀಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸುಕೇಶ್ ಚಂದ್ರಶೇಖರ್ ಕೂಡಾ ಅವರಿಗೆ ಪ್ರೇಮ ಪತ್ರ ಬರೆದು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಶುಕ್ರವಾರ(,ಜನನ- ೧೧ಆಗಸ್ಟ್ ೧೯೮೫) ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದ ಸಂದರ್ಭದಲ್ಲಿ ಸುಕೇಶ್ ಚಂದ್ರಶೇಖರ್ ಕೂಡ ಜೈಲಿನಿಂದ ಪ್ರೇಮ ಪತ್ರ ಬರೆದು ಶುಭ ಕೋರಿದ್ದಾರೆ.

ಈ ಪ್ರೇಮ ಪತ್ರದಲ್ಲಿ ತನ್ನ ಪ್ರಿಯತಮೆಯ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ಸುಕೇಶ್ ಸೌತ್ ಇಂಡಿಯನ್ ಆಗಿರುವುದರಿಂದ ಹಿಂದಿ ಬರೆಯುವುದು ಕೊಂಚ ಕಷ್ಟ ಎಂದರೂ ತನ್ನ ಗೆಳತಿಗಾಗಿ ಹಿಂದಿಯಲ್ಲಿ ಪ್ರೇಮ ಪತ್ರ ಬರೆದಿದ್ದಾರೆ. ಸುಕೇಶ್ ಈ ಪ್ರೇಮ ಪತ್ರದ ಕಾರ್ಡ್ ಕೂಡ ಮಾಡಿ ಅದರಲ್ಲಿ ಹೃದಯ ಬರೆದು ಜಾಕ್ವೆಲಿನ್ ಗೆ ಕವನವನ್ನೂ ಬರೆದಿದ್ದಾರೆ.
೨೦೦ ಕೋಟಿ ವಂಚನೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಮತ್ತೊಮ್ಮೆ ಆತ ತನ್ನ ಗೆಳತಿ ಸೂಪರ್‌ಸ್ಟಾರ್ ಜಾಕ್ವೆಲಿನ್ ಫೆರ್ನಾಂಡಿಸ್ ರ ಹುಟ್ಟುಹಬ್ಬದಂದು ಪ್ರೇಮ ಪತ್ರ ಬರೆದು ತಮ್ಮ ಮನದಾಳದ ಮಾತುಗಳನ್ನಾಡುವ ಮೂಲಕ ಸುದ್ದಿಯಾಗಿದ್ದಾರೆ.
ಸುಕೇಶ್ ಅವರು ಜಾಕ್ವೆಲಿನ್‌ಗಾಗಿ ಕವಿತೆ ಬರೆದಿದ್ದಾರೆ ಮತ್ತು ಕಾರ್ಟೂನ್ ನ್ನು ಬಿಡಿಸಿದ್ದಾರೆ, ಅದರಲ್ಲಿ ಹುಡುಗ ಮತ್ತು ಹುಡುಗಿ ಪರಸ್ಪರ ಪ್ರೀತಿಸುತ್ತಿರುವುದನ್ನು ನೋಡುತ್ತಾರೆ ಮತ್ತು ಹೃದಯವನ್ನೂ ಸಹ ಚಿತ್ರಿಸಿದ್ದಾರೆ.
ಜಾಕ್ವೆಲಿನ್‌ಗೆ ಲವ್ ಲೆಟರ್ ಬರೆಯುತ್ತಿರುವಾಗ, ಸುಕೇಶ್ ಅವರಿಗೆ ತುಂಬಾ ವಿಶೇಷವಾದ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಸುಕೇಶ್ ಪ್ರೇಮ ಪತ್ರದಲ್ಲಿ ಹೀಗೆ ಬರೆದಿದ್ದಾರೆ- ’ನನ್ನ ಪ್ರೀತಿಯ, ವಿಶ್ವದ ಅತ್ಯಂತ ಸುಂದರ ಬೊಮ್ಮ, ಮರದಲ್ಲಿ ಸಾವಿರಾರು ಹೂವುಗಳು ಅರಳುತ್ತವೆ, ಆದರೆ ಅವುಗಳಲ್ಲಿ ಒಂದು ವಿಶೇಷವಾಗಿದೆ. ಜೀವನದಲ್ಲಿ ಸಾವಿರಾರು ಜನರು ನೆನಪಾಗುತ್ತಾರೆ, ಆದರೆ ಹೃದಯವನ್ನು ಸ್ಪರ್ಶಿಸುವ ಮತ್ತು ಹುಚ್ಚು ಪ್ರೀತಿಯಲ್ಲಿ ಬೀಳುವಂತೆ ಮಾಡುವ ಒಂದು ವಿಶೇಷವಿದೆ. ಇಂದು ನಾನು ಮೊದಲ ಬಾರಿಗೆ ದೇವರಿಗೆ ಏನನ್ನಾದರೂ ಕೇಳಿದೆ. ತಲೆಯು ಅವನ ಮುಂದೆ ಬಾಗುತ್ತದೆ. ಜಗತ್ತಿನ ಸುಖವನ್ನೆಲ್ಲ ನಿಮ್ಮ ಪಾದದಲ್ಲಿ ಇಡುತ್ತೇನೆ. ನಿಮ್ಮ ಎಲ್ಲಾ ದುಃಖಗಳನ್ನು ನಾನು ತೆಗೆದುಕೊಳ್ಳುತ್ತೇನೆ . ನಾನು ನಿಮ್ಮ ಪ್ರತಿಯೊಂದು ಕನಸನ್ನು, ಪ್ರತಿ ಆಸೆಯನ್ನು ಈಡೇರಿಸುತ್ತೇನೆ. ದಿನಗಳು ಮತ್ತೆ ಮತ್ತೆ ಬರುತ್ತವೆ, ಹೃದಯವು ಇದನ್ನು ಮತ್ತೆ ಮತ್ತೆ ಹಾಡುತ್ತದೆ, ನೀವು ನೂರಾರು ವರ್ಷ ಬದುಕಬೇಕು. ನಿಮಗೆ ಜನ್ಮದಿನದ ಶುಭಾಶಯಗಳು, ನಿಮಗೆ ಜನ್ಮದಿನದ ಶುಭಾಶಯಗಳು. ಐ ಲವ್ ಯೂ ಮೈ ಲವ್’.” ಎಂದ ಸುಕೇಶ್ ಚಂದ್ರಶೇಖರ್ ಈ ಪ್ರೇಮ ಪತ್ರದಲ್ಲಿ ಮನಸೋತಿದ್ದಾರೆ.
ಸನ್ನಿ ಡಿಯೋಲ್ ಗದರ್ ೨ ಬಿಡುಗಡೆಯ ದಿನವೇ ಅಭಿಮಾನಿಗಳ ಕ್ಷಮೆ ಕೇಳಿದ್ದು ಯಾಕೆ?
ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ಗದರ್ ೨ ಫಿಲ್ಮ್ ಶುಕ್ರವಾರ ಬಿಡುಗಡೆಯಾಗಿದೆ. ಬಹುತಾರಾಗಣದ ಈ ಚಿತ್ರ ಜನರಲ್ಲಿ ಭಾರೀ ಕ್ರೇಜ್ ಹುಟ್ಟು ಹಾಕಿತ್ತು.
ಈಗ ಚಿತ್ರ ಬಿಡುಗಡೆಯಾಗಿದ್ದು, ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ. ಒಂದೆಡೆ ಕೆಲವರು ಚಿತ್ರವನ್ನು ಹೊಗಳಿದರೆ, ಮತ್ತೊಂದೆಡೆ ಕೆಲವರಿಗೆ ಈ ಚಿತ್ರದಲ್ಲಿ ಮಸಾಲಾ ಕಾಣಿಸುತ್ತಿಲ್ಲ. ಹೀಗಿರುವಾಗ ಸ್ವತಃ ಚಿತ್ರದ ನಾಯಕ ಸನ್ನಿ ಡಿಯೋಲ್ ಅವರೇ ಈಗಾಗಲೇ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದು ಅದರ ವೀಡಿಯೋವನ್ನು ಸ್ವತಃ ನಟರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

೨೨ ವರ್ಷಗಳ ನಂತರ ಗದರ್ ೨ ಅಂತಿಮವಾಗಿ ಬಿಡುಗಡೆಯಾಗಿದೆ. ಸಕೀನಾ ಮತ್ತು ತಾರಾ ಸಿಂಗ್ ಜೋಡಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಹೀಗಿರುವಾಗ ಅಭಿಮಾನಿಗಳಷ್ಟೇ ಅಲ್ಲ, ಮೇಕರ್ಸ್ ಕೂಡ ಖುಷಿ ಪಟ್ಟಿದ್ದರು. ಈ ಮಧ್ಯೆ, ನಟ ಸನ್ನಿ ಡಿಯೋಲ್ ಅವರ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಅವರು ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದಾರೆ. ಈ ಸಮಯದಲ್ಲಿ, ಅವರು ಈಗಾಗಲೇ ಚಿತ್ರವನ್ನು ಇಷ್ಟಪಡದವರಲ್ಲಿ ಕ್ಷಮೆಯಾಚಿಸಿದ್ದಾರೆ!

ಸನ್ನಿ ಡಿಯೋಲ್ ಭಾವುಕರಾದರು:
“ಎಲ್ಲರಿಗೂ ನಮಸ್ಕಾರ, ನಾನು ಈಗಷ್ಟೇ ಎಚ್ಚರಗೊಂಡಿದ್ದೇನೆ ಮತ್ತು ನಿಮ್ಮೆಲ್ಲರೊಂದಿಗೆ ಮಾತನಾಡಲು ಬಯಸುತ್ತೇನೆ. ಇಷ್ಟು ದಿನಗಳಿಂದ ನಾನು ನಿಮ್ಮೊಂದಿಗೆ ತಿರುಗಾಡುತ್ತಿದ್ದೇನೆ, ನಿಮ್ಮೊಂದಿಗೆ ಸಂವಹನ ನಡೆಸುತ್ತಿದ್ದೇನೆ ಮತ್ತು ನೀವು ತಾರಾ ಸಿಂಗ್ ಮತ್ತು ಸಕೀನಾ ಅವರ ಕುಟುಂಬವನ್ನು ತುಂಬಾ ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ. ಇದಕ್ಕಾಗಿ ಕಾಯುತ್ತಿದ್ದೆ ಮತ್ತು ನೀವು ಆ ಕುಟುಂಬವನ್ನು ನೋಡಲಿದ್ದೀರಿ. ಈ ಕುಟುಂಬವು ನೀವು ಬಿಟ್ಟುಹೋದ ಕುಟುಂಬದಂತೆ ಎಂದು ಹೇಳಲು ಬಯಸುತ್ತೇನೆ. ಅದೊಂದು ಸುಂದರ ಕುಟುಂಬ. ನೀವು ಅವರನ್ನು ನೋಡಲು ಹೋದಾಗ, ನೀವು ತುಂಬಾ ಸಂತೋಷಪಡುತ್ತೀರಿ. ಯಾರಿಗಾದರೂ ಈ ಕುಟುಂಬವು ತಪ್ಪಾಗಿ ಕಂಡು ಒಂದುವೇಳೆ ಇಷ್ಟವಾಗದಿದ್ದರೆ, ಜಗಳವಾಡಬೇಡಿ, ಕ್ಷಮಿಸಿ. ಏಕೆಂದರೆ ಹೃದಯದಲ್ಲಿ ಪ್ರೀತಿ ಮಾತ್ರ ಇರಬೇಕು ಮತ್ತು ಅದು ಕುಟುಂಬ ಸದಸ್ಯರಿಗೆ ಮಾತ್ರ ತಿಳಿದಿದೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ…” ಎಂದಿದ್ದಾರೆ ಆ ವೀಡಿಯೋದಲ್ಲಿ.
ಗದರ್ ಫ್ರಾಂಚೈಸ್‌ನ ಈ ಫಿಲ್ಮ್ ೨೨ ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿತು. ಈಗ ಅದೇ ರೀತಿ ಮತ್ತೊಮ್ಮೆ ಗದರ್ ೨ ಮೂಲಕ ಇಬ್ಬರೂ ಸ್ಟಾರ್‌ಗಳು ರೆಡಿಯಾಗಿದ್ದಾರೆ. ಬಹುತಾರಾಗಣದ ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಅಮೀಶಾ ಪಟೇಲ್, ಸಿಮ್ರತ್ ಕೌರ್ ಮತ್ತು ಉತ್ಕರ್ಷ್ ಶರ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ.