ಜಾಕ್ವೆಲಿನ್‌ನಿಂದ ನನ್ನ ಜೀವನ ನಾಶ

ನವದೆಹಲಿ/ಮುಂಬೈ,ಜ.೧೯-ಆರ್ಥಿಕ ವಂಚಕ ಆರೋಪಿ ಸುಕೇಶ್ ಚಂದ್ರಶೇಖರ್ ,ನಟಿ ಜಾಕ್ವೆಲಿನ್ ಫರ್ನಾಂಡೀಸ್ ನಿಂದಾಗಿ’ನನ್ನ ಜೀವನ, ವೃತ್ತಿ ಸಂಪೂರ್ಣ ನಾಶವಾಗಿದೆ ಎಂದು ಬಾಲಿವುಡ್ ನಟಿ,ನೃತ್ಯಗಾರ್ತಿ ನೋರಾ ಫತೇಹಿ ಗಂಭೀರ ಆರೋಪ ಮಾಡಿದ್ದಾರೆ.

ನಟಿ ಜಾಕ್ವಲಿನ್ ಅವರು ಅಪರಾಧಿ ಚಂದ್ರಶೇಖರ್ ಅವರ ಪತ್ನಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗಲು ತನಗೆ ಆಹ್ವಾನ ಬಂದಿತ್ತು. ಕಾರ್ಯಕ್ರಮಕ್ಕೆ ಹಾಜರಾದರೆ ಬಿಎಂಡಬ್ಯೂ ಕಾರು, ದುಬಾರಿ ಉಡುಗೊರೆ ನೀಡುವುದಾಗಿ ಹೇಳಿದ್ದರು ಎಂದು ಫತೇಹಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್ ನಿಂದಾಗಿ ಚಿತ್ರರಂಗದ ನನ್ನ ಕೆರಿಯರ್ ನಾಶವಾಗಿದೆ ನ್ಯಾಯಾಲಯಕ್ಕೆ ನಟಿ ನೋರಾ ಪತೇಹಿ ಅವಲತ್ತುಕೊಂಡಿದ್ದಾರೆ.

ಹೊಸ ಆರೋಪ ಪಟ್ಟಿ:

ತಿಹಾರ್ ಜೈಲಿನಲ್ಲಿ ಚಂದ್ರಶೇಖರ್‌ಗೆ ಹಲವಾರು ನಟಿಯರನ್ನು ಪರಿಚಯಿಸಿದ ಆರೋಪದ ಮೇಲೆ ಟಿವಿ ನಿರೂಪಕಿ ಪಿಂಕಿ ಇರಾನಿ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗದ (ಇಒಡಬ್ಲ್ಯು) ನ್ಯಾಯಾಲಯಕ್ಕೆ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ಆರೋಪಿ ಸುಕೇಶ್ ಚಂದ್ರಶೇಖರ್ ಅವರಿಂದ ಅಪರಾಧದ ಆದಾಯವನ್ನು ಅನುಭವಿಸಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್, ನಟಿ ನೋರಾ ಫತೇಹಿ ವಿರುದ್ದ ಹೊಸ ಆರೋಪ ಪಟ್ಟಿ ಸಲ್ಲಿಸಿದ್ದು ಇದರಿಂದ ಬಾಲಿವುಡ್ ನಟಿಯರಿಬ್ಬರಿಗೂ ಮತ್ತೊಮ್ಮೆ ಸಂಕಷ್ಟ ಎದರುರಾಗಿದೆ.

ಕಾಮನ್ ಮ್ಯಾನ್ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಬಾಲಿವುಡ್ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಪಹೇತಿ ಅವರಿಗೆ ಇದೀಗ ಆರ್ಥಿಕ ಅಪರಾಧ ಬೆನ್ನಿಗಂಟಿಕೊಂಡಿದೆ.ಜೊತೆಗೆ ಇಒಡಬ್ಲ್ಯೂ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ ಎಂದು ಈ ವಿಷಯದಲ್ಲಿ ಸಲ್ಲಿಸಲಾದ ಮೂರನೇ ಪೂರಕ ಆರೋಪ ಪಟ್ಟಿ ಬಹಿರಂಗಪಡಿಸಿದೆ.