ಜಹೀರಾಬಾದನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

ಬೀದರ:ನ.23:ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಕಾಂಗ್ರೆಸ್ ಸುಳ್ಳು ಆಶ್ವಾಸನೆಗೆ ಮರುಳಾಗಬೇಡಿ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ ಬಡಿದಾಟದಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

ತೆಲಂಗಾಣದ ಜಹೀರಾಬಾದನಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಅವರು ಮಾತನಾಡಿದರು.
ಬಿಟ್ಟಿ ಭಾಗ್ಯದಿಂದ ಅಭಿವೃದ್ಧಿ ಕುಂಠಿತಗೊಂಡಿವೆ. ನೀರಾವರಿ ಯೋಜನೆ, ರಸ್ತೆ ಸುಧಾರಣೆ ಎಲ್ಲ ಸ್ಥಗಿತಗೊಂಡಿದೆ ನಾವು ಅಧಿಕಾರದಲ್ಲಿ ಇದ್ದಾಗ ತಂದ ಯೋಜನೆ ಭಾಗ್ಯ ಲಕ್ಷ್ಮಿ ಯೋಜನೆ ಸರಿಯಾದ ರೀತಿಯಲ್ಲಿ ಜಾರಿಗೆ ತರದೆ ಮೋಸ ಮಾಡುತ್ತಿದ್ದಾರೆ, ಕಿಸಾನ್ ಸಮ್ಮಾನ ಯೋಜನೆ ಕೇಂದ್ರ ಸರ್ಕಾರ 6 ಸಾವಿರ, ನಾನು ರಾಜ್ಯ ಸರ್ಕಾರದಿಂದ 4 ಸಾವಿರ ನೀಡಿದ್ವಿ ಅದನ್ನು ಕಾಂಗ್ರೆಸ್ ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ ರೈತರಿಗೆ ಅನ್ಯಾಯ ಮಾಡಿದ್ದಾರೆ ಈ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಅಭ್ಯರ್ಥಿಗೆ ಎಲ್ಲರು ಅತಿ ಹೆಚ್ಚು ಮತನೀಡಿ ಗೆಲ್ಲಿಸಬೇಕು ಸುಳ್ಳು ಆಶ್ವಾಸನೆಗೆ ಮರುಳಾಗಬೇಡಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ. ಇಲ್ಲಿರುವ ನಮ್ಮ ಕನ್ನಡಿಗರು ಬಿಜೆಪಿಗೆ ಮತ ನೀಡಿ ಇಲ್ಲಿನ ಜನತೆ ಸಹ ಮತ ನೀಡುವಂತೆ ಮನವಿ ಮಾಡಬೇಕು ಜಹೀರಾಬಾದ ನಲ್ಲಿ ನಮ್ಮ ಬೀದರ್ ಜನತೆ ಹೆಚ್ಚರುವ ಕಾರಣ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅನ್ಯಾಯ ಗೊತ್ತಿರುತ್ತದೆ ಹೀಗಾಗಿ ನಮ್ಮ ಕರ್ನಾಟಕದ ಬೀದರ್ ನವರು ಬಿಜೆಪಿ ಬೆನ್ನಿಗೆ ನಿಲ್ಲಬೇಕು ಎಂದರು ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದರು. ಅಭ್ಯರ್ಥಿ ರಾಮಚಂದ್ರ ರಾಜ ನರಸಿಂಹ ಅವರಿಗೆ ಗೆಲ್ಲಿಸಿ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ
ಎಸ್ ಆರ್ ವಿಶ್ವನಾಥ, ಬೀದರ್ ದಕ್ಷಿಣ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶಾಸಕರಾದ ಪ್ರಭು ಚವಾಣ್, ರತ್ನಭ್ರಭಾ
ಮುಖಂಡರಾದ ಬಾಬು ವಾಲಿ, ಬಸವರಾಜ ಆರ್ಯ, ಪದ್ಮಾಕರ ಪಾಟೀಲ್, ಹಣಮಂತಪ್ಪ ಮೈಲಾರ, ನಾಗಭೂಷಣ ಕಮಠಾಣಾ, ಶಿವಕುಮಾರ ಸ್ವಾಮಿ, ಜಹೀರಾಬಾದ ಮುಖಂಡರಾದ ನರೇಂದ್ರ ರೆಡ್ಡಿ, ಜಗನ್ನಾಥ ನೌಬಾದೆ ಜನಾರ್ದನ ರೆಡ್ಡಿ ಇದ್ದರು.