ಜಹಿರಾಬಾದ್ ಶಾಲೆ : ಮೂಲಭೂತ ಸೌಕರ್ಯ ಒದಗಿಸುವಂತೆ ಡಿಎಸ್‌ಎಸ್ ಒತ್ತಾಯ

ರಾಯಚೂರು,ಜು.೨೭- ನಗರದ ವಾರ್ಡ್ ನಂ.೧೩ ಜಹಿರಾಬಾದ್ ಹಿರಿಯ ಮಾದರಿಯ ಪ್ರಾಥಮಿಕ ಶಾಲೆ ಜಾಹಿರಾಬಾದ್ ಆವರಣದಲ್ಲಿ ಮೊರಂನ್ನು ಹಾಕಿ ಸಮತಟ್ಟು ಮಾಡಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕಿಯರಿಗೆ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ವಾರ್ಡ್ ನಂ.೧೩ ರ ಜಹೀರಬಾದ್ ಬಡಾವಣೆಯ ಸರ್ಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ಬಂದು ತಗ್ಗು ದಿಬ್ಬುಗಳಿದ್ದು, ನೀರು ನಿಂತು ಕೆಸರು ಗದ್ದೆಯಂತೆ ಆಗಿದೆ ಇದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರಾರ್ಥನೆ ಮಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ದೂರಿದರು.
ಮಕ್ಕಳು ಆಟವಾಡಲು ದೈನಂದಿನ ಶಿಕ್ಷಣ ಚಟುವಟಿಕೆಗಳು ಮಾಡುವುದಕ್ಕೆ ಮೈದಾನದಲ್ಲಿ ತುಂಬಾ ತೊಂದರೆಯಾಗುತ್ತದೆ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಶೌಚಾಲಯ ಎಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ.ಸರ್ಕಾರದಿಂದ ಬರುವ ಯಾವುದಾದರೂ ಅನುದಾನದಡಿಯಲ್ಲಿ ಶಾಲಾ ಆವಣರದಲ್ಲಿ ಮೊರಂ ಹಾಕಿ ಸಮತಟ್ಟು ಮಾಡಬೇಕು ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕೀಯರಿಗೆ ಶೌಚಾಲಯ ಮಂಜೂರಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಎಂ.ಭರತ್ ಕುಮಾರ್, ವಿ.ಈರಣ್ಣ ಪೂರ್ಣಿಮಾ ಅಧ್ಯಕ್ಷರು, ಮಂಜುಳಾ ಭಾಯಿ, ಪ್ರಭಾಕರ್ ವೀರೇಶ್, ಆನಂದ್, ಪ್ರವೀಣ್ ಸೇರಿದಂತೆ ಇತರರು ಇದ್ದರು.