ಜವಾಹರ ನಗರ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ದಂತ ಪರೀಕ್ಷೆ

ರಾಯಚೂರು.ಜು.೨೩-ನಗರದ ಜವಾಹರ ನಗರ ಶಾಲಾ-ಕಾಲೇಜುಗಳಲ್ಲಿ ನವೋದಯ ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ದಂತ ಪರೀಕ್ಷೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ನವೋದಯ ದಂತ ವಿದ್ಯಾಲಯದ ಡಾಕ್ಟರ್ ಪ್ರೀತಮ್ ಅವರು ಮಾತನಾಡಿ
ಪ್ರತಿಯೊಬ್ಬ ವಿದ್ಯಾರ್ಥಿಗಳು ದಂತವನ್ನು ಸ್ವಚ್ಛವಾಗಿ ಇಟ್ಟು ಕೊಳ್ಳಬೇಕು, ಅಂದಾಗಮಾತ್ರ ವಿದ್ಯಾರ್ಥಿಗಳು ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದರು.
ಡಾ. ರಿಯಾ ಅವರು ಮಾತನಾಡಿ, ಬೆಳಗ್ಗೆ ಹಲ್ಲು ಉಜ್ಜಬೇಕಾದರೆ ಸಹ ವೈಜ್ಞಾನಿಕವಾಗಿ ಅದನ್ನು ರೂಡಿ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗೃಹ ನಿರ್ಮಾಣ ಸಹಕಾರ ಸಂಘದ ಕಾರ್ಯದರ್ಶಿ ಜೆ.ಎಮ. ವೀರೇಶ್ ಅವರು ಮಾತನಾಡಿ ನವೋದಯ ದಂತ ವೈದ್ಯಕೀಯ ಮಹಾವಿದ್ಯಾಲಯದವರು ಈ ರೀತಿಯಾಗಿ ಉಚಿತವಾಗಿ ಶಾಲೆಗಳಲ್ಲಿ ಈ ರೀತಿ ದಂತ ಪರೀಕ್ಷೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ರವಿಕುಮಾರ್ ಅವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಹಲ್ಲಿನ ಬಗ್ಗೆ ಕಾಳಜಿ ತೆಗೆದುಕೊಂಡು ಅವುಗಳನ್ನು ಸ್ವಚ್ಛವಾಗಿ ಇಟ್ಟು ಕೊಳ್ಳಬೇಕೆಂದು ಹೇಳಿದರು.
ಜವಾಹರ್ ನಗರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳಿಧರ ಕುಲಕರ್ಣಿಯವರು, ಮಾತನಾಡಿ
ಪ್ರತಿಯೊಬ್ಬರಿಗೆ ದಂತಗಳು ದೇಹದ ಅವಿಭಾಜ್ಯ ಅಂಗ, ಇವುಗಳು ನಮ್ಮ ದೇಹದ ಪಚನ ಕ್ರಿಯೆಗೆ ಮೂಲ ಮೆಟ್ಟಲುಗಳು, ಇವುಗಳನ್ನು ಸ್ವಚ್ಛವಾಗಿಟ್ಟಾಗ ಮಾತ್ರ ಜೀರ್ಣಕ್ರಿಯೆಗೆ ಹಾಗೂ ನಮ್ಮ ಆರೋಗ್ಯಕ್ಕೆ ಉಪಕಾರಿಯಾಗಿರುತ್ತವೆ. ಆದುದರಿಂದ ಪ್ರತಿಯೊಬ್ಬರು ದಂತಗಳ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನವೋದಯ ದಂತ ಕಾಲೇಜಿನ ಪ್ರೊಫೆಸರ್ ಡಾಕ್ಟರ ಕಿರಣ್ ಕುಮಾರ್, ಡಾ ಸ್ನೇಹ, ಡಾಕ್ಟರ್ ರಿಯಾ, ಡಾ ಜೋಹರಿಕಾ, ಡಾ. ಲಿಖಿತ, ಡಾ. ಯೋಶ್ರ, ಡಾ. ದೇದಿಪ್ಯ, ಡಾ. ಸಿಂಧೂರ್, ಇವರೆಲ್ಲರೂ ವಿದ್ಯಾರ್ಥಿಗಳಿಗೆ ದಂತ ಪರೀಕ್ಷೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಪ್ರೌಢಶಾಲೆಯ ಶಿಕ್ಷಕಿಯರಾದ ಜಿಎಸ್ ಸಂಧ್ಯಾ, ಸರೋಜಾ, ಕುಮಾರಿ ಮಹೇಶ್ವರಿ, ಕಾಲೇಜಿನ ನರಸಪ್ಪ, ಟಿ. ರೆಡ್ಡಿ, ರಫೀಕ್ ಅಹ್ಮದ್, ಪವನ್ ಕುಮಾರ್, ರವೀಂದ್ರ ಕುಲಕರಣಿ, ಅಡಿವಿ ಆಚಾರ್ ಉಪಸ್ಥಿತರಿದ್ದರು.