ಜವಾಹರ್ ಬಾಲ್ ಮಂಚ್ ನಿಂದ ವಿಶೇಷ ಪೂಜೆ – ಪ್ರಾರ್ಥನೆ 

ದಾವಣಗೆರೆ. ಮೇ.೧೯; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿರುವುದರಿಂದ ಹಾಗೂ ನಾಳೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಶುಭ ಕೋರಿ ದಾವಣಗೆರೆ ಜಿಲ್ಲಾ ಜವಾಹರ್ ಬಾಲ್ ಮಂಚ್ ಹಾಗೂ ಕಾರ್ಯಕರ್ತರಿಂದ ನಗರದ ದುಗ್ಗಮ್ಮ ದೇವಸ್ಥಾನ ಹಾಗೂ ಕಡಕ್ ಷಾ ವಲಿ ದರ್ಗಾದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಕಾಂಗ್ರೆಸ್ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಹಿಂದೆಂದೂ ಕಾಣದ ಅಭೂತಪೂರ್ವ ಗೆಲುವು ಸಾಧಿಸಿರುವುದರಿಂದ ಎಲ್ಲಾ ಮುಖಂಡರುಗಳಿಗೆ ಕಾರ್ಯಕರ್ತರಿಗೆ ವಿಶೇಷವಾಗಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ನೂತನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಮುಂದಿನ 5 ವರ್ಷ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರಲಿ ಬಡಪರ ಯೋಜನೆಗಳನ್ನು ನೀಡಲಿ ರಾಜ್ಯದಲ್ಲಿ ಶಾಂತಿ ಸಮೃದ್ಧಿ,ಸಹೋದರತ್ವ ನೆಲೆಸಲಿ ಎಂದು ಸಿಹಿ ಹಂಚುವುದರ ಶುಭ ಕೋರಿದರು.ದಾವಣಗೆರೆಯಲ್ಲಿ ನಡೆದ ಐತಿಹಾಸಿಕ ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಕಾರಣವಾಗಿದ್ದು ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಜಯ ಸಾಧಿಸಿದ ಎಲ್ಲಾ ನೂತನ ಶಾಸಕರುಗಳಿಗೆ ಅಭಿನಂದಿಸಿ ಮಧ್ಯಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಲು ಶ್ರಮವಹಿಸಿದ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ಅಥವಾ ಎಸ್.ಎಸ್.ಮಲ್ಲಿಕಾರ್ಜುನ್ ರವರಿಗೆ ಪ್ರಭಾವಿ ಖಾತೆಗಳನ್ನು ನೀಡಿ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡಬೇಕೆಂದು ಪಕ್ಷದ ಹೈಕಮಾಂಡಿಗೆ ಮನವಿ ಮಾಡಿದರು.ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ರಾಜು ಭಂಡಾರಿ, ಕಿಸಾನ್ ಕಾಂಗ್ರೆಸ್ ಮುಖಂಡರಾದ ಹಾಲೇಶ್.ಎಂ,ಮಂಜುಸ್ವಾಮಿ ಕತ್ತಲಗೇರಿ,ಸುರೇಶ್.ಎಂ.ಜಾಧವ್,ಹರೀಶ್.ಹೆಚ್,ಹಾಲೇಶ್.ಬಿ,ಶಿಲ್ಪ ಪರಶುರಾಮ್, ಪ್ರೇಮಾ,ರಿಯಾಜುದ್ದೀನ್,ಧನಂಜಯ್,ಇನ್ನೂ ಅನೇಕ ಪದಾಧಿಕಾರಿಗಳು ಮುಖಂಡರುಗಳು ಭಾಗವಹಿಸಿದ್ದರು.