ಜವಾಹರ್‌ ಬಾಲ್ ಮಂಚ್ ನಿಂದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ

ದಾವಣಗೆರೆ.ಸೆ.೧೨:  ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಜವಾಹರ್‌ ಬಾಲ್ ಮಂಚ್ ವಿಭಾಗದಿಂದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಕರ್ನಾಟಕ ರಾಜ್ಯಾದಂತ ಜಿಲ್ಲಾವಾರು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಲಾಗುವುದು ಎಂದು ಮಂಚ್ ನ ನೂತನ ರಾಜ್ಯಾಧ್ಯಕ್ಷ  ಹೆಚ್.ಜೆ. ಮೈನುದ್ದೀನ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಚ್ ‘ಭಾರತ್ ಜೋಡೋ ಬಚ್ಚೇ ಜೋಡೋ’  ಹೆಸರಿನಡಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.  ‘ವಿವಿಧತೆಯಲ್ಲಿ ಏಕತೆ’ ಎಂಬ ಹೆಸರಿನಡಿ ಚಿತ್ರಕಲಾ ಸ್ಪರ್ಧೆಯು ನಡೆಯಲಿದೆ. 1 ನೇ ಹಂತದಲ್ಲಿ 6 , 7 ಮತ್ತು 8 ನೇ ತರಗತಿ , 2 ನೇ ಹಂತದಲ್ಲಿ  9 ಮತ್ತು 10 ನೇ ತರಗತಿ , 3 ನೇ ಹಂತ ಪ್ರಥಮ ಮತ್ತು ದ್ವಿತೀಯ ಪಿಯುಸಿ ವರೆಗೆ ಏರ್ಪಡಿಸಲಾಗುವುದು ಎಂದು ತಿಳಿಸಿದರು.ಪ್ರತಿ ಜಿಲ್ಲೆಯ 9 ವಿಜೇತರಿಗೆ ಭಾರತ ಐಕ್ಯತಾ ಯಾತ್ರೆ  ರಾಜ್ಯ ಪ್ರವೇಶ ಮಾಡಿದಾಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಮಕ್ಕಳೊಂದಿಗೆಸಂವಾದ ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸುವರು ಎಂದು ತಿಳಿಸಿದರು.ದಾವಣಗೆರೆಯಲ್ಲಿ ನಾಳೆಯಿಂದ  ಜೆಜೆ ಕಾನ್ವೆಂಟ್, ಸೆ.೧೫ ರಂದು‌ ಸೀತಮ್ಮ ಕಾಲೇಜು ಹಾಗೂ ಸಂಜೆ.೧೮ ಕ್ಕೆ ಚಾಮರಾಜ ಪೇಟೆ ಶಾಲೆಯಲ್ಲಿ ಸ್ಪರ್ಧೆ ನಡೆಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭರತನಾಟ್ಯ , ಕೋಲಾಟ , ಡೋಲು ಕುಣಿತ , ಚರ್ಚಾ ಸ್ಪರ್ಧೆ  ಇನ್ನಿತರ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ,ಅಮ್ಜದ್ ಖಾನ್, ಚಿರಂಜೀವಿ, ಮೊಹಮ್ಮದ್ ಸಾಧಿಕ್ ಸದ್ದಾಂ, ಮೊಹಮ್ಮದ್ ವಾಜಿದ್ ಹಾಗೂ ಅವಿನಾಶ್ ಉಪಸ್ಥಿತರಿದ್ದರು.