ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶಿವಕೊಳ್ಳಿ ಟೂರ್ನಾಮೆಂಟ್

ಗುರುಮಠಕಲ್:ಮಾ.12:ಪಟ್ಟಣದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶಿವಕೊಳ್ಳಿ ಟುರ್ನ್ ಮೆಂಟ್ ಸುಪರ್-8 ಪ್ರೈಮರಿ ಲೀಗ್ ಉದ್ಘಾಟನಾ ಕಾರ್ಯಕ್ರಮ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕ್ರೀಡಾಂಗಣದ ವರೆಗೆ ಬೈಕ್ ರ್ಯಾಲಿಯ ಮೂಲಕ ತೆರಳಿ ಪಟ್ಟಣದ ಕ್ರೀಡಾ ಪಟುಗಳ ಸಮ್ಮುಖದಲ್ಲಿ ಹಾಗೂ ಹಿರಿಯ ಮುಖಂಡರು ಕ್ರೀಡಾ ಅಭಿಮಾನಿಗಳ ಸಮ್ಮುಖದಲ್ಲಿ ರಮೇಶ್ ಶಿವ ಕೊಲ್ಲಿಯವರು ರೆಬನ್ ಕಟ್ ಮಾಡುವದರ ಮೂಲಕ ಬಹು ಅದ್ದೂರಿಯಾಗಿ ಉದ್ಘಾಟನೆ ಮಾಡಲಾಯಿತು. ಉದ್ಘಾಟನೆ ಸಮಾರಂಭದಲ್ಲಿ ಎಂಟು ತಂಡಗಳ ಮಾಲೀಕರನ್ನು ಬಹು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾದ ಶ್ರೀ ಸಂತೋಷ್ ಕುಮಾರ ನಿರೇಟಿ ಯವರು ಮಾತನಾಡುತ್ತ ನಮ್ಮ ಭಾಗದ ಗುರುಮಠಕಲ್ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕ್ರೀಡಾ ಪಟುಗಳು ಭಾಗವಹಿಸಿದ್ದು ಬಹಳ ಸಂತೋಷ ಯಾವುದೇ ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ. ಸೊಲೆ ಗೆಲುವಿನ ಸೊಪಾನ ಅನ್ನುವ ಹಾಗೆ ಸೊತವರು ಗೆಲುವಿನ ಕಡೆ ಮುಖ ಮಾಡಿ ಗೆಲುವು ಸಾಧಿಸುವ ಛಲ ನಿಮ್ಮಲ್ಲಿ ಬರಲಿ ಮತ್ತು ಕಮಿಟಿಯವರು ಹಾಗೂ ಅಂಪಾಯರ್ ನೀಡಿದ ತೀರ್ಪು ಅಂತಿಮವಾಗಿರುತ್ತದೆ ಎಂದು ಹೇಳಿದರು. ಕ್ರಿಕೆಟ್ ಟುರ್ನ್ ಮೆಂಟ್ ಪಂದ್ಯದಲ್ಲಿ ಪ್ರಥಮ.ದ್ವಿತೀಯ.ಹಾಗೂ ತೃತೀಯ ಬಹುಮಾನ ಗಳಿದ್ದು ಪ್ರಥಮ ಬಹುಮಾನ 4444 ರೂಪಾಯಿಗಳು. ದ್ವಿತೀಯ ಬಹುಮಾನ 2222 ರೂಪಾಯಿಗಳು. ಹಾಗೂ ತೃತೀಯ ಬಹುಮಾನ 1111 ರೂಪಾಯಿಗಳು ಈ ಬಹುಮಾನ ಸಂಪೂರ್ಣ ಮೊತ್ತವನ್ನು ರಮೇಶ್ ಶಿವ ಕೊಲ್ಲಿ ಯವರು ನೀಡಿದ್ದಾರೆ. ತಮ್ಮ ವೈಯಕ್ತಿಕ ವಾಗಿ ಸೌಂಡ್ ಸಿಸ್ಟಮ್ ಪಾಪಣ್ಣ ಅವರು ನೀಡಿದ್ದಾರೆ. ಈ ವೇಳೆ ಪ್ರಕಾಶ ನಿರೇಟಿ. ಆಶನ್ನ ಬುದ್ದ. ಅನಂತರೆಡ್ಡಿ. ಮಾಣಿಕ್ಯಪ್ಪ. ಅಶೋಕ. ಮುಖಂಡರು ಕ್ರೀಡಾ ಅಭಿಮಾನಿಗಳು ಇದ್ದರು.