ಜವಾಹರನಗರ ಶಾಲಾ, ಕಾಲೇಜು: ಶಿಕ್ಷಕರ ದಿನಾಚರಣೆ

ರಾಯಚೂರು.ಸೆ.೦೫- ನಗರದ ಗೃಹ ನಿರ್ಮಾಣ ಸಹಕಾರಿ ಸಂಘ ಜವಾಹರ ನಗರ ರಾಯಚೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜವಾಹರ ನಗರ ಪದವಿ ಪೂರ್ವ ಕಾಲೇಜ್, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಂಘದ ಕಾರ್ಯದರ್ಶಿ ಜೆ. ಎಂ.ವಿರೇಶ್ ಅವರು ಶಿಕ್ಷಕ ವೃತ್ತಿಯು ಬೇರೆ ಎಲ್ಲಾ ವೃತ್ತಿ ಗಿಂತ ಪವಿತ್ರವಾಗಿದ್ದು ನಾವು ಪ್ರತಿಯೊಬ್ಬ ಶಿಕ್ಷಕರಿಗೂ ಗೌರವ ಕೊಟ್ಟು ಅವರ ಹಾಕಿದ ದಾರಿಯಲ್ಲಿ ನಡೆಯಬೇಕೆಂದು ಹೇಳಿದರು.
ಹಿರಿಯ ಉಪನ್ಯಾಸಕರಾದ ನರಸಪ್ಪ ಭಂಡಾರಿ ಅವರು ಮಾತನಾಡಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ಅವರು ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರಿಗೆ ಮೀಸಲಿಟ್ಟಿದ್ದು ಅವರ ಘನತೆಯನ್ನು ಎತ್ತಿ ತೋರಿಸುತ್ತದೆ.ಇನ್ನೊಬ್ಬ ಹಿರಿಯ ಉಪನ್ಯಾಸಕರಾದ ಪವನ್ ಕುಮಾರ್ ಅವರು ಮಾತನಾಡಿ ಪ್ರತಿಯೊಬ್ಬ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವ ರೀತಿಯಲ್ಲಿ ಬದುಕಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರವೀಂದ್ರ ಕುಲಕರ್ಣಿ ಅವರು ಮಾತನಾಡಿ ಶಿಕ್ಷಣ ಕ್ಷೇತ್ರವು ಅತ್ಯಂತ ಗೌರವಾನ್ವಿತವಾದ ಹುದ್ದೆಯಾಗಿದೆ, ಪಾಠ ಕಲಿಸಿದ ಗುರುರುವನ್ನು ಯಾರು ಮರೆಯುವುದಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕನ್ನು ರೂಪಿಸುವ ಶಿಲ್ಪಿಗಳು ಶಿಕ್ಷಕರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕೆಎಸ್‌ಎಸ್‌ಸಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಮುರಳಿಧರ ಕುಲಕರ್ಣಿ ಮಾತನಾಡಿ ಎಲ್ಲಾ ಶಿಕ್ಷಕ ಬಂಧುಗಳಿಗೆ ಶುಭವನ್ನು ಕೋರಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ರಫಿಕಮ್ಮದ್, ಟಿ ರೆಡ್ಡಿ, ಜಿ ಯಾದವ್, ದೈಹಿಕ ಶಿಕ್ಷಣ ಶಿಕ್ಷಕ ಸ್ವಾಮಿ ,ಉಪನ್ಯಾಸಕರಾದ, ತಿಮ್ಮಲಮ್ಮ, ಶಿಕ್ಷಕಿಯರಾದ ಸಂಧ್ಯಾ ಜಿ ಎಸ್, ಸರೋಜಾ, ಮಹೇಶ್ವರಿ ಹಾಗೂ ಅಡವೇಚಾರ್ ಅವರು ಉಪಸ್ಥಿತರಿದ್ದರು.