ಜವಾಹರನಗರ : ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ರಾಯಚೂರು.ಏ.೧೪-ಗೃಹ ನಿರ್ಮಾಣ ಸಹಕಾರ ಸಂಘ ಜವಾಹರನಗರ ಸಂಚಾಲಿತ ಜವಾಹರನಗರ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ವತಿಯಿಂದ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೦ ಜನ್ಮದಿನಾಚರಣೆಯನ್ನು ಶಾಲೆಯ ಆವರಣದಲ್ಲಿ ಆಚರಿಸಲಾಯಿತು.
ಡಾ..ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ಜೆ.ಎಂ.ವೀರೇಶ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತಕ್ಕೆ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ನೀಡಿ ವಿಶ್ವಕ್ಕೆ ಮಾದರಿಯಾಗಿದ್ದಾರೆ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು.
ಜವಾಹರನಗರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಕಾಶ್ ಕುಲಕರ್ಣಿ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅಂದರೆ ಸಮಾನತೆಯ ಸಂಕೇತ ಸ್ವಾತಂತ್ರ ಭಾರತ ಹಾಗೂ ಸ್ವಾತಂತ್ರ ಪೂರ್ವ ಭಾರತಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಪ್ರೌಢ ಶಾಲೆಯ ಮುಖ್ಯಗುರುಗಳಾದ ಮುರಳೀಧರ ಕುಲಕರ್ಣಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಹರಿಕಾರರು, ಸಾಮಾಜಿಕ ಬದಲಾವಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಜಗತ್ತಿನ ಹಲವಾರು ಶ್ರೇಷ್ಠ ಚಿಂತಕರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅತಿ ಶ್ರೇಷ್ಠ ಚಿಂತಕರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಟಿ.ರೆಡ್ಡಿ, ರವಿಕುಮಾರ, ನರಸಪ್ಪ ಭಂಡಾರಿ, ಪವನ್ ಕುಮಾರ್ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಸಾವಿತ್ರಿ ಸಹ ಶಿಕ್ಷಕರಾದ ಎಸ್.ಸಂಧ್ಯಾ, ಟಿ.ಸರಳ ಸಿಬ್ಬಂದಿಗಳಾದ ರವೀಂದ್ರ ಕುಲಕರ್ಣಿ ಅಡಿವಿ ಆಚಾರ್ ಉಪಸ್ಥಿತರಿದ್ದರು.