ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು ಸೂಚನೆ

ಶಿವಮೊಗ್ಗ, ಮೇ ೪: ಜಿಲ್ಲೆಯಲ್ಲಿ ನಿಯಂತ್ರಣ ಮೀರಿ ಹರಡುತ್ತಿರುವ ಮಾರಣಾಂತಿಕ ಕೊರೋನ
ಸೋಂಕನ್ನು ನಿಯಂತ್ರಿಸುವಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ
ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂಧಿಗಳೊಂದಿಗೆ ಹಗಲಿರುಳು ಶ್ರಮಿಸುತ್ತಿರುವ ಈ
ಸಂದರ್ಭದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳ
ವರ್ತನೆ ಅಕ್ಷಮ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು
ಹೇಳಿದರು.
ಅವರು ಇಂದು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಸಿಮ್ಸ್
ಆಡಳಿತಾಧಿಕಾರಿಗಳು, ಕೊರೋನ ನಿಯಂತ್ರಣ ಕಾರ್ಯದಲ್ಲಿ ನಿರತವಾಗಿರುವ
ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡುತ್ತಿದ್ದರು.
ಮಹತ್ವದ ಸಭೆಗೆ ಗೈರುಹಾಜರಾಗಿರುವ ವೈದ್ಯರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ
ಹಾಗೂ ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾದಲ್ಲಿ ನಿಯಮಾನುಸಾರ ಕ್ರಮ
ಕೈಗೊಳ್ಳುವಂತೆ ಸಿಮ್ಸ್ ಆಡಳಿತಾಧಿಕಾರಿಗಳಿಗೆ ತಿಳಿಸಿದರು.
ಶಿಫ್ಟ್ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಡಿ.ಗ್ರೂಫ್, ನಸರ್್ ಮತ್ತು ಇತರೆ
ವಿಭಾಗಗಳ ಸಿಬ್ಬಂಧಿಗಳ ಹಾಜರಾತಿಯನ್ನು ಸಂಬಂಧಿಸಿದ ಅಧಿಕಾರಿಗಳು ಗಮನಿಸಬೇಕು.
ಸಕಾಲದಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ
ಎಂದು ಎಚ್ಚರಿಕೆ ನೀಡಿದರು.
ಸಕರ್ಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಕಾರ್ಯಕ್ಕಾಗಿ ಬಳಕೆಯಾಗುತ್ತಿರುವ
ಸಿಬ್ಬಂದಿಗಳು, ಲಭ್ಯವಿರುವ ಲಸಿಕೆ, ಹಾಸಿಗೆಗಳು, ಕೋರೋನವಲ್ಲದೇ ಇತರೆ ಕಾಯಿಲೆಯ
ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ
ಕುರಿತು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಮಾತನಾಡಿ,
ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಕೋವಿಡ್ ಸೋಂಕಿತರನ್ನು ನೋಡಲು ಆಗಮಿಸುವ
ಸಂಬಂಧಿಕರು ರೋಗಿಯನ್ನು ನೋಡಲು ಹೋಗುವ ವ್ಯಕ್ತಿ ಪಿ.ಪಿ.ಕಿಟ್ ಧರಿಸುವುದು
ಕಡ್ಡಾಯವಾಗಿದೆ.
ದಿನಕ್ಕೆ 3-4 ಬಾರಿ ರೋಗಿಯನ್ನು ಸಂದಶರ್ಿಸುವ ವ್ಯಕ್ತಿ ಪ್ರತಿ ಬಾರಿಯೂ ಪಿ.ಪಿ.ಕಿಟ್
ಹೊಸದನ್ನು ಖರೀದಿಸಿ, ಧರಿಸುವುದು ಸಾಧ್ಯವೇ? ಈ ಪಿ.ಪಿ.ಕಿಟ್ಗಳು ಸುಲಭ ಬೆಲೆಯಲ್ಲಿ
ದೊರೆಯುವುದಾದರೂ ಎಲ್ಲಿ? ಅಥವಾ ಒಮ್ಮೆ ಬಳಕೆದಾದ ಕಿಟ್ಗಳೇ ಮತ್ತೆ ಮತ್ತೆ
ಬಳಕೆಯಾಗುತ್ತಿವೆಯೇ? ಇದರಿಂದಾಗಿ ಸೋಂಕು ಇನ್ನಷ್ಟು ಹರಡುವ ಆತಂಕವಿದೆ. ಆದ್ದರಿಂದ
ಸಾರ್ವಜನಿಕರಿಗೆ ಈ ಕಿಟ್ಗಳು ಸರಳವಾಗಿ, ಸುಲಭ ಬೆಲೆಯಲ್ಲಿ ದೊರೆಯುವಂತೆ ಕ್ರಮ
ಕೈಗೊಳ್ಳುವ ಅಗತ್ಯವಿದೆ ಎಂದುವರು ಹೇಳಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ವೈದ್ಯಕೀಯ
ಸಂಸ್ಥೆಯ ಆಡಳಿತಾಧಿಕಾರಿಗಳು, ನಿದರ್ೆಶಕರು ಹಾಗೂ ವೈದ್ಯಾಧಿಕಾರಿಗಳು ಇಂದು ಸಂಜೆ ಸಭೆ
ಸೇರಿ ತುತರ್ು ಮತ್ತು ಅಗತ್ಯ ನಿರ್ಣಯವನ್ನು ಕೈಗೊಂಡು ಮಾಹಿತಿ ನೀಡುವಂತೆ ಹಾಗೂ
ಸರಳವಾಗಿ ಜನಸಾಮಾನ್ಯರಿಗೆ ಕಿಟ್ಗಳು ದೊರೆಯುವಂತೆ ನೋಡಿಕೊಳ್ಳಲು ಕ್ರಮ
ಕೈಗೊಳ್ಳುವಂತೆಯೂ ಸೂಚಿಸಿದರು.
ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ಹಾಗೂ ಚಿಕಿತ್ಸೆಗೆ ದಾಖಲಾದ ರೋಗಿಗಳಿಗೆ
ಊಟೋಪಹಾರ ಮತ್ತು ಅಗತ್ಯ ಸಹಕಾರ ಒದಗಿಸಲು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು
ಮುಂದಾಗಿದ್ದು, ಆ ಸಂಸ್ಥೆಗಳು ಇನ್ನೂ ಒಂದೆರೆಡು ದಿನದಲ್ಲಿ ಕಾಯರ್ಾರಂಭ ಮಾಡಲಿವೆ.
ಅವರಿಗೆ ಸಿಮ್ಸ್ ಆಡಳಿತ ಮಂಡಳಿ ಅಗತ್ಯ ಸಹಕಾರ ನೀಡುವಂತೆ ಅವರು ಸೂಚಿಸಿದರು.
ಆರೋಗ್ಯ ಸೇವೆಗೆ ರಾಜ್ಯದಲ್ಲಿಯೇ ಮೆಗ್ಗಾನ್ ಆಸ್ಪತ್ರೆಗೆ ಉತ್ತಮ ಹೆಸರಿದೆ. ಅದಕ್ಕೆ
ಕಪ್ಪುಚುಕ್ಕೆ ಬರದಂತೆ ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು
ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಶ್ರೀಮತಿ
ಎಂ.ಎಲ್.ವೈಶಾಲಿ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ರುದ್ರೇಗೌಡ, ಆರ್ಯವೈಶ್ಯ
ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಡಿ.ಎಸ್.ಅರುಣ್, ಸಿಮ್ಸ್ ಆಡಳಿತಾಧಿಕಾರಿ ಡಾ.
ಎಸ್.ಓ.ಸಿದ್ಧಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್
ಸುರಗೀಹಳ್ಳಿ, ಜಿಲ್ಲಾ ಸರ್ಜನ್ ಡಾಾ. ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.