ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ-ಶಿವಕುಮಾರ ಶ್ರೀ

ಗದಗ,ಜ14:ಡಾ|| ಬಾಬು ಜಗಜೀವನರಾಂ ಭವನ ಡಿಸಿ ಮಿಲ್ ರೋಡ ಗದಗ ನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು.ತಾಲ್ಲೂಕಾ ಘಟಕ ಗದಗ ಶಹರ ವತಿಯಿಂದ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಶಿಕ್ಷಣ ಹಾಗೂ ನೈತಿಕ ಮೌಲ್ಯ ಕುರಿತು ಉಪನ್ಯಾಸ ಮತ್ತು ಸ್ವಾಮಿ ವಿವೇಕಾನಂದರ 158 ನೆಯ ಜನ್ಮದಿನಾಚರಣೆ ಕಾರ್ಯಕ್ರಮ ಜರುಗಿತು.
ಕಾಂiÀರ್iಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಕಪ್ಪತಗುಡ್ಡ-ಗದಗ ನಂದಿವೇರಿಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸ್ವಾಮಿಗಳನ್ನು ಮತ್ತು ಶಿಕ್ಷಕರನ್ನು ಸಮಾಜ ವೀಕ್ಷಿಸುತ್ತಿದೆ, ಪರೀಕ್ಷಿಸುತ್ತಿದೆ ಆದ್ದರಿಂದ ನಾವು ನಮ್ಮ ಜವಾಬ್ದಾರಿಗಳನ್ನು ಗುರುತರವಾಗಿ ನಿರ್ವಹಿಸಬೇಕಾಗಿದೆ. ಅಲ್ಲದೆ ಕಪ್ಪತಗುಡ್ಡ ಸಸ್ಯಸಂಪತ್ತು ವನ್ಯಜೀವಿಗಳ ಸಂರಕ್ಷಣಾ ಕಾರ್ಯವನ್ನು ಮಾಡಬೇಕಾಗಿದೆಯೆಂದು ಕರೆ ನೀಡಿದರು.
ಶಿಕ್ಷಣ ಹಾಗೂ ನೈತಿಕ ಮೌಲ್ಯ ಕುರಿತು ಉಪನ್ಯಾಸ ನೀಡಿದ ಗದಗ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಎಂ. ಬಸವಲಿಂಗಪ್ಪ ಮಾತನಾಡಿ ಶಿಕ್ಷಕರು ಓಬಮಾ ಆಗುವತ್ತ ಗಮನ ನೀಡಬೇಕು ಅಂದರೆ ಓ-ಅಂದರೆ ಓದುವದು, ಬ-ಅಂದರೆ ಬರೆಯುವುದು, ಮಾ-ಅಂದರೆ ಮಾತನಾಡುವುದು. ಈ ಕೌಶಲ್ಯಗಳನ್ನು ಇಂದೀಕರಿಸಿಗೊಂಡು ಇಂದಿನ ಸ್ಪರ್ಧಾ ಜಗತ್ತಿಗೆ ಮಕ್ಕಳನ್ನು ತಯಾರು ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿz.É ಅಲ್ಲದೆ ತಾವು ಅಂದವಾಗಿರುವದಕ್ಕಿಂತ ಆನಂದವಾಗಿರುವುದು (ಆನಂದಸ್ವರೂಪ ಮನೋಭಾವನೆ) ಮುಖ್ಯವೆಂಬ ಮಹತ್ವದ ವಿಚಾರವನ್ನು ಗಮನ ಸೆಳೆದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತಿಯ ಅಧ್ಯಕ್ಷøರಾದ ವಿದ್ಯಾಧರ ದೊಡ್ಡಮನಿ ಶಿಕ್ಷಕರು ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳಸಬೇಕೆಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸವಣೂರು ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಐ.ಬಿ.ಬೆನಕೊಪ್ಪ ಮಾತನಾಡಿ ಸಾವಿತ್ರಿಬಾಯಿ ಫುಲೆಯವರು ಅಂದಿನ ಬ್ರಿಟಿಷ್ ಸರಕಾರದಿಂದ ಪ್ರಥಮ ಭಾರತೀಯ ಮಹಿಳಾ ಶಿಕ್ಷಕಿಯೆಂಬ ಗೌರವ ಪಡೆದವರಾಗಿದ್ದರು, ಶಿಕ್ಷಕರಾದವರು ವೃತ್ತೀಯ ಗುರಿಯನ್ನು ಯಶಸ್ವಿಯಾಗಿ ತಲುಪಲು ಶ್ರಮವಹಿಸಬೇಕೆಂದು ಸಲಹೆ ನೀಡಿದರು. ಸೊಂಡೂರು ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಆಯ್.ಆರ್.ಅಕ್ಕಿ ಇಲೆಕ್ಟ್ರಾನಿಕ್ಸ್ ಮಾಧ್ಯಮಗಳನ್ನು ಬಳಸಿಕೊಂಡು ನಿಮ್ಮ ಜ್ಞಾನವನ್ನು ಇಂದೀಕರಿಸಿಗೊಳ್ಳಬೇಕೆಂದು ಹೇಳಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗದಗ ಜಿಲ್ಲಾ ಘಟPದ ಅಧ್ಯಕ್ಷರಾದ ವಿ.ಎಮ್. ಹಿರೇಮಠ ಅತಿಥಿಗಳಾಗಿ ಆಗಮಿಸಿ ಸಾವಿತ್ರಿಬಾಯಿ ಫುಲೆಯವರು ಅಂದಿನ ಸಮಾಜದ ಜನರಿಂದ ಅನೇಕ ನಿಂದನೆ ತೊಂದರೆಗಳನ್ನು ಅನುಭವಿಸಿ ಮಹಿಳೆಯರಿಗೆ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದರೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರು ನಿವೃತ್ತ ಮುಖ್ಯೋಪಾಧ್ಯಯರಾದ ಎಸ್.ಎನ್.ಬಳ್ಳಾರಿಯವರು ಶಿಕ್ಷಕÀರ ಸಂಘ ಬೆಳೆಯುವಲ್ಲಿ ಪ್ರತಿಯೊಬ್ಬರ ಸಹಾಯ ಸಹಕಾರ ಅತೀ ಅವಶ್ಯ ಸಂಘಟನೆಯಲ್ಲಿ ವ್ಯಕ್ತಿ ಗೌಣ ಸಂಘ ಮುಖ್ಯವೆಂಬ ಮಾತುಗಳನ್ನಾಡಿದರು.